Latest Videos

‘ಕೃಷ್ಣ ಟಾಕೀಸ್‌’ಗೆ ಎಂಟ್ರಿ ಕೊಟ್ಟ ಸಿಂಧು ಲೋಕನಾಥ್!

By Web DeskFirst Published May 9, 2019, 9:08 AM IST
Highlights

ಅಜಯ್‌ ರಾವ್‌ ಹಾಗೂ ಆನಂದ್‌ ಪ್ರಿಯಾ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಸಂಬಂಧಪಟ್ಟಂತೆ ಮೂರು ಸುದ್ದಿ ಇದೆ.

1. ಈ ಚಿತ್ರದ ಟೈಟಲ್‌ ಫಿಕ್ಸ್‌ ಆಗಿದೆ. ‘ಕೃಷ್ಣ ಟಾಕೀಸ್‌’ ಎಂಬ ಹೆಸರು ಇಡಲಾಗಿದೆ. ಅಜಯ್‌ ರಾವ್‌ ನಟನೆಯ ಕೃಷ್ಣನ್‌ ಲವ್‌ ಸ್ಟೋರಿ, ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ ಚಿತ್ರಗಳ ಯಶಸ್ಸು ‘ಕೃಷ್ಣ ಟಾಕೀಸ್‌’ ಎಂಬ ಹೆಸರಿಡಲು ಮುಖ್ಯ ಕಾರಣ. ಈ ಕಾರಣದಿಂದಲೇ ಅಜಯ್‌ ರಾವ್‌ ತಮ್ಮ ಹೆಸರನ್ನು ಕೃಷ್ಣ ಅಜಯ್‌ ಅಂತಲೇ ಬದಲಾಯಿಸಿಕೊಂಡಿದ್ದಾರೆ.

2. ‘ಕೃಷ್ಣ ಟಾಕೀಸ್‌’ಗೆ ಇಬ್ಬರು ನಾಯಕಿಯರು. ಈಗಾಗಲೇ ಅಪೂರ್ವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇವರ ಜತೆಗೆ ಸಿಂಧು ಲೋಕನಾಥ್‌ ಚಿತ್ರತಂಡ ಸೇರಿಕೊಂಡಿದ್ದಾರೆ. ಮದುವೆ ನಂತರ ಸಿನಿಮಾಗಳಿಗೆ ಅಪರೂಪ ಆಗಿದ್ದ ಸಿಂಧು ಈ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.

3. ಈ ಚಿತ್ರದ ನಿರ್ದೇಶಕರು ಹೆಸರು ಬೇರೆ ಬದಲಾಯಿಸಿಕೊಂಡಿದ್ದಾರೆ. ಆನಂದ್‌ ಪ್ರಿಯಾ ಈಗ ವಿಜಯಾನಂದ್‌ ಆಗಿದ್ದಾರೆ.

ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

ಈ ಚಿತ್ರವನ್ನು ಎಎಚ್‌ ಗೋವಿಂದುರಾಜು ನಿರ್ಮಾಣ ಮಾಡುತ್ತಿದ್ದಾರೆ. ಮೇ 9ರಿಂದ ಆರಂಭವಾಗಲಿರುವ ಈ ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ರಂಗಿತರಂಗ’ ಖ್ಯಾತಿಯ ಸಿನಿಮಾಟೋಗ್ರಾಫರ್‌ ವಿಲಿಯಮ್‌ ಡೇವಿಡ್‌, ಕೆಜಿಎಫ್‌ ಚಿತ್ರದ ಸಂಕಲನಕಾರ ಶ್ರೀಕಾಂತ್‌ ಅವರು ಈ ಚಿತ್ರದ ತಾಂತ್ರಿಕ ಸದಸ್ಯರು.

ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮಿನಾಡು, ಶೋಭರಾಜ್‌, ಮಂಡ್ಯ ರಮೇಶ್‌ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ‘ಕೃಷ್ಣ ಟಾಕೀಸ್‌’ ಎನ್ನುವ ಹೆಸರಿಗೆ ‘ಬಾಲ್ಕನಿ ಎಫ್‌ 13’ ಎನ್ನುವ ಟ್ಯಾಗ್‌ ಲೈನ್‌ ಕೂಡ ಕೊಡಲಾಗಿದೆ. ಶಿವಮೊಗ್ಗ, ಬೆಂಗಳೂರು ಸುತ್ತ ಚಿತ್ರೀಕರಣ ನಡೆಯಲಿದ್ದು, ಜಯಂತ್‌ ಕಾಯ್ಕಿಣಿ ಹಾಗೂ ಯೋಗರಾಜ್‌ ಭಟ್‌ ಅವರು ಹಾಡುಗಳಿಗೆ ಸಾಹಿತ್ಯ ನೀಡಲಿದ್ದಾರೆ.

click me!