
ಮುಂಬೈ (ಆ. 12): ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಪತಿ ಅಭಿನವ್ ಕೊಹ್ಲಿ ಕೌಟುಂಬಿಕ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಿದ್ದಾರೆ.
ಶ್ವೇತಾ ತಿವಾರಿ - ಅಭಿನವ್ ಕೊಹ್ಲಿ ನಡುವೆ ಮದುವೆಯಾದಾಗಿನಿಂದ ಯಾವುದೂ ಸರಿಯಿಲ್ಲ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಆಗಾಗ ಜಗಳ, ಮನಸ್ತಾಪಗಳು ಬರುತ್ತಿತ್ತು ಎನ್ನಲಾಗಿದೆ.
ಬಕ್ರೀದ್ ದಿನ ಕುರಿ ‘ಸಲ್ಮಾನ್ ಖಾನ್’ ಗೆ ಫುಲ್ ಡಿಮ್ಯಾಂಡ್!
ಅಭಿನವ್ ಕುಡಿದ ಮತ್ತಿನಲ್ಲಿ ಪುತ್ರಿ ಪಾಲಕ್ ಗೆ ಹೊಡೆದಿದ್ದಾರೆ. ಮಗಳನ್ನು ಬಿಡಿಸಲು ಹೋದ ನನಗೂ ಹೊಡೆದಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಶ್ವೇತಾ ತಿವಾರಿ ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ.
ಶ್ವೇತಾ ತಿವಾರಿಗೆ ಅಭಿನವ್ ರನ್ನು 2013 ರಲ್ಲಿ ಎರಡನೇ ಮದುವೆಯಾಗಿದ್ದಾರೆ. ಮೊದಲು ರಾಜಾ ಚೌಧರಿ ಎಂಬುವವರನ್ನು ಮದುವೆಯಾಗಿದ್ದರು. ಮೊದಲ ಪತಿಗೆ ಪಾಲಕ್ ಎಂಬ ಮಗಳಿದ್ದಾಳೆ. ಅಭಿನವ್ ಗೆ ರೇಯಶ್ ಕೊಹ್ಲಿ ಎಂಬ ಮಗನಿದ್ದಾನೆ.
ಕುರುಕ್ಷೇತ್ರ ಸಂಭಾವನೆಯನ್ನು ನೆರೆ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ!
ಕಸೂಟಿ ಜಿಂದಗೀ ಕಿ, ಬೀಗುಸರಾಯಿ ಧಾರಾವಾಹಿ ಹೆಸರನ್ನು ತಂದು ಕೊಟ್ಟಿತು. ಬಿಗ್ ಬಾಸ್ 4, ಜಲಕ್ ದಿಕ್ ಲಾಜಾ 06 ನಲ್ಲಿ ಸ್ಪರ್ಧಿಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.