
2019 ರಿಂದ ಬಾಲಿವುಡ್ ಸೆಲೆಬ್ರಿಟಿಗಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಿದೆ. ಆ ಸಾಲಿನಲ್ಲಿ ಆಲಿಯ ಭಟ್- ರಣಬೀರ್ ಕಪೂರ್ ಇದ್ದು ಈಗ ಶ್ರದ್ಧಾ ಕಪೂರ್ ಹಾಗೂ ರೋಹನ್ ಸೇರಿದ್ದಾರೆ.
ಕೆಲ ದಿನಗಳ ಹಿಂದೆ ಮಾಧ್ಯಮದವರೊಂದಿಗೆ ರೋಹನ್ ಮಾತನಾಡಿದ್ದು, ನಾನು ಹಾಗೂ ಶ್ರದ್ಧಾ 9 ವರ್ಷಗಳಿಂದ ಪರಿಚಯರಿದ್ದೇವೆ. ಈಗ ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂದು ಮನಸ್ಸು ಮಾಡಿದ್ದೇವೆ. ಮದುವೆ ದಿನಾಂಕ ಇನ್ನು ಖಚಿತವಾಗಿಲ್ಲ. ಆದರೆ 2020 ರಲ್ಲೇ ಮದುವೆ ಅಗಬೇಕೆಂದು ಮನಸ್ಸು ಮಾಡಿದ್ದೇವೆ ಎಂದಿದ್ದಾರೆ.
ಕೆಲ ವರ್ಷಗಳಿಂದ ಶ್ರದ್ಧಾ-ಫರಾನ್ ಅಖ್ತರ್ ಜೊತೆ ಅನೈತಿಕ ಸಂಬಂಧವಿದೆ ಎಂಬ ಸುದ್ಧಿ ಹರಿದಾಡುತ್ತಿತ್ತು. ಅದರಿಂದ ಮನನೊಂದ ಶ್ರದ್ಧಾ ಪೋಷಕರೊಂದಿಗೆ ಮನೆ ಬದಲಾಯಿಸಿ ಹೊಸ ಜೀವನ ಆರಂಭಿಸಿದ್ದರು. 33 ವರ್ಷದ ಶ್ರದ್ಧಾಳಿಗೆ ತಂದೆ ತಾಯಿ ಮದುವೆ ಆಗುವಂತೆ ಒತ್ತಾಯ ಮಾಡಿದ್ದಕ್ಕೆ ತನ್ನ ಆಪ್ತ ಸ್ನೇಹಿತನೊಂದಿಗೆ ಮದುವೆ ಆಗಲು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.