‘ಪಿಎಂ ಮೋದಿ’ ಟ್ರೈಲರ್ ಚೀಪ್ ಟ್ರಿಕ್ ಎಂದ ನಟ!

By Web DeskFirst Published Mar 22, 2019, 11:16 AM IST
Highlights

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನ ಆಧಾರಿತ ಸಿನಿಮಾಗೆ ಸಿಕ್ತು ನೆಗೆಟಿವ್ ಕಾಮೆಂಟ್ಸ್. ಇದೊಂದು ಚೀಪ್ ಟ್ರಿಕ್ಸ್ ಎಂದು ನಟ ಸಿದ್ಧಾರ್ಥ್ ಹೇಳಿದ್ದಾರೆ.

‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೈಲರ್ ಬಿಡುಗಡೆ ಅಗಿದ್ದು ಕೇವಲ ಒಂದು ದಿನದಲ್ಲಿ 9 ಮಿಲಿಯನ್ ಹಿಟ್ಸ್ ಆಗಿದೆ. ಟ್ರೇಲರ್ ನೋಡಿ ಕೆಲವರು ಭೇಷ್ ಎಂದರೆ ಇನ್ನು ಕೆಲವರು ಇದು ಚುನಾವಣೆ ಸಮಯದಲ್ಲಿ ಹೊಸ ಟ್ರಿಕ್ ಅನ್ನುತ್ತಿದ್ದಾರೆ.

ಖ್ಯಾತ ಚಿತ್ರ ನಿರ್ದೇಶಕ ಓಮಂಗ್ ಕುಮಾರ್ ಈ ರೀತಿಯ ಬಯೋಪಿಕ್ ಮಾಡಿರುವುದಕ್ಕೆ ಅವರ ಪ್ರಾಮಾಣಿಕತೆಯನ್ನೇ ಪ್ರಶ್ನೆ ಮಾಡಿದ್ದಾರೆ ಕಾಲಿವುಡ್ ಹಾಗೂ ಟಾಲಿವುಡ್ ನಟ ಸಿದ್ಧಾರ್ಥ್. ‘#PMNarendraModiTrailer ನಲ್ಲಿ ಹೇಗೆ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ತೋರಿಸಿಲ್ಲ. ಒಂದು ವೇಳೆ ಅದನ್ನೆಲ್ಲಾ ತೋರಿಸಿದ್ದರೆ ಜಾತ್ಯತೀತ, ಉದಾರವಾದಿ ಎಂದೇ ಹೆಸರಾದ ನೆಹರೂರವರ ಕಾಲೆಳೆಯಬಹುದಿತ್ತು. ಈ ಟ್ರೈಲರ್ ಒಂದು ಚೀಪ್ ಟ್ರಿಕ್ ತರ ಕಾಣುತ್ತಿದೆ.’ ಎಂದು ಟ್ಟೀಟ್ ಮಾಡಿದ್ದಾರೆ.

ಪಿಎಂ ಮೋದಿ ಟ್ರೇಲರ್ ರಿಲೀಸ್: ಸಂಚಲನ ಮೂಡಿಸಿದೆ ವಿವೇಕ್ ಒಬೆರಾಯ್ ಲುಕ್!

does not show how won India's Independence by single handedly wiping out the British Empire. Looks like another cheap trick by the sickular, libtard, commie, naxals and of course that Nehru.

— Siddharth (@Actor_Siddharth)

ಮೋದಿ ಭೀಷ್ಮ ಪಿತಾಮಹಾ ಇದ್ದಂಗೆ: ಚೌಕಿದಾರನಾಗಿರುವ ನಟನಿಂದ ರಾಹುಲ್ ಗೆ ತಪರಾಕಿ!

ಸಿದ್ಧಾರ್ಥ್ ರವರ ಟ್ವೀಟ್ ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

 

click me!