
ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಷ್ಟೇ ತಮ್ಮನ್ನು ತಾವು ಸೀಮಿತ ಮಾಡಿಕೊಂಡಿದ್ದ ಶಿಲ್ಪ ಈ ಚಿತ್ರವೊಂದರ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಭರ್ಜರಿ ಕಂ ಬ್ಯಾಕ್ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಅದರಂತೆ ಮುಂದಿನ ತಿಂಗಳು ಆಗಸ್ಟ್‌ನಿಂದ ಚಿತ್ರೀಕರಣದಲ್ಲಿಯೂ ಅವರು ಬ್ಯುಸಿಯಾಗಿಬಿಡಲಿದ್ದಾರೆ.
ಸೂಪರ್ ಡ್ಯಾನ್ಸರ್' ವಿನ್ನರ್ ಕಾಲಿಗೆ ಮುತ್ತಿಟ್ಟ ನಟಿ; ಫೋಟೋ ವೈರಲ್
ದಿಲ್ಚಿತ್ ದೋಸಾಂಜ್ ಮತ್ತು ಯಾಮಿ ಗೌತಮ್ ಮುಖ್ಯ ಪಾತ್ರದಲ್ಲಿ ಇರುವ ಹರೂನ್ ನಿರ್ದೇಶನ ಮಾಡಲು ಮುಂದಾಗಿರುವ ಚಿತ್ರದಲ್ಲಿ ಬರಹಗಾರ್ತಿಯಾಗಿ ಶಿಲ್ಪಾ ಬಣ್ಣ ಹಚ್ಚಲಿದ್ದಾರೆ. ಇದು ಚಿತ್ರದ ಪ್ರಮುಖ ಪಾತ್ರವಾಗಿದ್ದು ಕತೆ ಕೇಳಿಯೇ ಶಿಲ್ಪ ಈ ಪಾತ್ರಕ್ಕೆ ಯಸ್ ಅಂದಿದ್ದಾರೆ. ಇನ್ನೂ ಚಿತ್ರದ ಟೈಟಲ್, ಶೆಡ್ಯೂಲ್ ಯಾವುದೂ ಫೈನಲ್ ಆಗಿಲ್ಲ. ಆದರೆ ಈ ವರ್ಷದ ಒಳಗೆ ಚಿತ್ರ ತೆರೆಗೆ ಬರುವುದು ಪಕ್ಕ. ಅಲ್ಲಿಗೆ ಶಿಲ್ಪಾ ಶೆಟ್ಟಿಮತ್ತೊಂದು ರೂಪದಲ್ಲಿ ಬಾಲಿವುಡ್‌ಗೆ ರೀ ಎಂಟ್ರಿಯಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.