ಸಂಜನಾ ಆನಂದ್‌ ಮೊದಲ ಚಿತ್ರ ಮಳೆಬಿಲ್ಲು ತೆರೆಗೆ!

By Web Desk  |  First Published Jul 4, 2019, 10:59 AM IST

ಯಶಸ್ಸು ಕಂಡ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ನಾಯಕಿ ಸಂಜನಾ ಆನಂದ್‌ ನಟನೆಯ ಚಿತ್ರ ‘ಮಳೆ ಬಿಲ್ಲು’. ಇದು ಸಂಜನಾ ಒಪ್ಪಿಕೊಂಡು ನಟಿಸಿರುವ ಮೊದಲ ಸಿನಿಮಾ. ಈಗ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ನಿರ್ದೇಶಕರು ನಾಗರಾಜ್‌ ಹಿರಿಯೂರು. ಶರತ್‌ ಚಿತ್ರದ ನಾಯಕ. ನಯನಾ ಚಿತ್ರದ ಮತ್ತೊಂದು ಮುಖ್ಯ ಪಾತ್ರಧಾರಿ.


ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್‌ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೇ ಉತ್ಸಾಹದಲ್ಲಿ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಅಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಪ್ಲಾನ್‌ ಚಿತ್ರತಂಡದ್ದು.

ಪ್ರೀತ್ಸೊ ಹೃದಯಗಳ ಮಾತು ಈ 'ಮಳೆ ಬಿಲ್ಲು'!

Tap to resize

Latest Videos

undefined

ನಿರ್ದೇಶಕರ ಸೋದರ ನಿಂಗಪ್ಪ ಈ ಚಿತ್ರದ ನಿರ್ಮಾಪಕರು. ‘ನಾನು ಚಿತ್ರರಂಗಕ್ಕೆ ಬಂದಿದ್ದು ಇದೇ ಚಿತ್ರದ ಮೂಲಕ. ಮೊದಲು ಆಡಿಷನ್‌ಗೆ ಹೋದೆ. ಎಷ್ಟೇ ಉದ್ದದ ಡೈಲಾಗ್‌ ಕೊಟ್ಟಾಗ ಒಂದೇ ಟೇಕ್‌ನಲ್ಲಿ ಒಪ್ಪಿಸಿದೆ. ಹೀಗಾಗಿ ಚಿತ್ರಕ್ಕೆ ನಾಯಕಿ ಆದೆ. ಆದರೆ, ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಯಿತು. ಕೆಮಿಸ್ಟ್ರಿ ಆಫ್‌ ಕರಿಯಪ್ಪ ಮೊದಲು ಬಿಡುಗಡೆ ಆಯ್ತು. ಈಗ ಮಳೆ ಬಿಲ್ಲು ಬರುತ್ತಿದೆ. ನನ್ನ ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ಈ ಚಿತ್ರದ ಮೇಲೆ ಸಾಕಷ್ಟುನಂಬಿಕೆ ಇದೆ’ ಎನ್ನುತ್ತಾರೆ ನಟಿ ಸಂಜನಾ ಆನಂದ್‌.

ಸಂಜನಾ ಈಗ ಫುಲ್‌ ಬ್ಯುಸಿ. ದುನಿಯಾ ವಿಜಯ್‌ ಜೊತೆ ಸಲಗ, ಅಜೇಯ್‌ರಾವ್‌ ಜೊತೆಗೊಂದು ಸಿನಿಮಾ, ಶಿವರಾಜ್‌ಕುಮಾರ್‌ ಮಗಳು ನಿರ್ಮಿಸುತ್ತಿರುವ ಹನಿಮೂನ್‌ ಎಂಬ ವೆಬ್‌ ಸರಣಿಯಲ್ಲಿ ನಟನೆ ಮುಂದುವರಿದಿದೆ.

click me!