ಸೂಪರ್‌ಹಿಟ್‌ ಆಯ್ತು 'ಸಾರ್ವಜನಿಕರಿಗೆ ಸುವರ್ಣವಕಾಶ'!

Published : Jul 04, 2019, 09:58 AM IST
ಸೂಪರ್‌ಹಿಟ್‌ ಆಯ್ತು 'ಸಾರ್ವಜನಿಕರಿಗೆ ಸುವರ್ಣವಕಾಶ'!

ಸಾರಾಂಶ

ರಿಷಿ ಹಾಗೂ ಧನ್ಯಾ ಬಾಲಕೃಷ್ಣ ಅಭಿನಯದ ‘ಸಾರ್ವಜನಿಕರಲ್ಲಿ ಸುವರ್ಣಾವಕಾಶ’ ಚಿತ್ರದ ಟೀಸರ್‌ಗೆ ಅಪಾರ ಮೆಚ್ಚುಗೆ ಸಿಕ್ಕಿದೆ. ಸೋಷಲ್‌ ಮೀಡಿಯಾದಲ್ಲಿ ಈ ಟೀಸರ್‌ ವೈರಲ್‌ ಆಗಿದ್ದು, ಚಿತ್ರದ ಬಗೆಗೆ ಪ್ರೇಕ್ಷಕರಲ್ಲಿ ಸಾಕಷ್ಟುಕುತೂಹಲ ಉಂಟು ಮಾಡಿದೆ. ಹಾಸ್ಯ ಪ್ರಧಾನ ಚಿತ್ರದ ಸಂಭಾಷಣೆಯೇ ಟೀಸರ್‌ ವೀಕ್ಷಕರ ಮನ ಗೆದ್ದಿದೆ.

ಅಧಿಕೃತವಾಗಿ ರಿಲೀಸ್‌ ಆದ ದಿನವೇ ಇದನ್ನು ಒಂದು ಲಕ್ಷ ಜನ ವೀಕ್ಷಿಸಿದ್ದರು. ಇದೀಗ ಆ ಸಂಖ್ಯೆ 6 ಲಕ್ಷಕ್ಕೆ ತಲುಪಿದೆ. ಇದು ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ. ಚಿತ್ರದ ಬಗೆಗೆ ಒಂದು ಕುತೂಹಲ ಮೂಡಿಸುವಲ್ಲಿ ಟೀಸರ್‌ ಸಕ್ಸಸ್‌ ಆಗಿದೆ ಎನ್ನುವ ವಿಶ್ವಾಸದ ಮೇಲೆಯೇ ಚಿತ್ರತಂಡ ಈಗ ಟ್ರೇಲರ್‌ ಲಾಂಚ್‌ಗೆ ಸಿದ್ಧತೆ ನಡೆಸಿದೆ. ‘ಗುಲ್ಟು’ ಚಿತ್ರದ ಯಶಸ್ಸಿನ ನಂತರ ಅದರ ನಿರ್ಮಾಪಕರಾದ ಪ್ರಶಾಂತ್‌ ರೆಡ್ಡಿ ಹಾಗೂ ದೇವರಾಜ್‌ ರಾಮಣ್ಣ ನಿರ್ಮಿಸಿದ ಚಿತ್ರವಿದು. ‘ಗುಲ್ಟು’ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ ಕೂಡ ನಿರ್ಮಾಪಕರಾಗಿ ಅವರಿಗೆ ಇಲ್ಲಿ ಸಾಥ್‌ ನೀಡಿದ್ದಾರೆ. ಅನೂಪ್‌ ರಾಮಸ್ವಾಮಿ ಆ್ಯಕ್ಷನ್‌ ಕಟ್‌ ಹೇಳಿದ್ದು, ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

 

‘ಎರಡು ಹಾಡು ಚಿತ್ರೀಕರಿಸುವುದು ಬಾಕಿಯಿದೆ. ಒಂದು ಹಾಡಿಗೆ ಸೆಟ್‌ ರೆಡಿ ಆಗುತ್ತಿದೆ. ಮತ್ತೊಂದು ಹಾಡಿಗೆ ಮಳೆಗಾಗಿ ಕಾಯುತ್ತಿದ್ದೇವೆ. ಇನ್ನು ಫೈಟ್‌ ಸೀನ್‌ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ. ಇದಿಷ್ಟುಮುಗಿದರೆ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಕಾಲಿಡಲಿದೆ’ ಎನ್ನುತ್ತಾರೆ ನಿರ್ದೇಶಕ ಅನೂಪ್‌ ರಾಮಸ್ವಾಮಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!