
ಬೆಂಗಳೂರು (ಅ. 16): ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಹೋದಲ್ಲೆಲ್ಲಾ ಏನಾದರೂ ಕಿರಿಕ್ ಇದ್ದದ್ದೇ. ಏನಾದರೂ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ ಗೆ ಹೋದಾಗಲೂ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈಗ ಇನ್ನೊಂದು ರಿಯಾಲಿಟಿ ಶೋ ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಎಂಟಿವಿಯಲ್ಲಿ ಪ್ರಸಾರವಾಗುವ ಸ್ಪ್ಲಿಟ್ಸ್ ವಿಲ್ಲಾ ಡೇಟಿಂಗ್ ರಿಯಾಲಿಟಿ ಶೋಗೆ ಸಂಯುಕ್ತಾ ಹೆಗಡೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು. ಇತರ ಸ್ಪರ್ಧಿಗಳಿಗೆ ಶುರುವಾಗಿದೆ ತಲೆನೋವು. ಈಗ ಎಲ್ಲರೂ ಸೇರಿ ಇವರನ್ನೇ ಹೊರ ಹಾಕಲು ಪ್ಲಾನ್ ನಡೆಸಿದ್ದಾರೆ. ಅಷ್ಟಕ್ಕೂ ಅಂತದ್ದೇನು ಮಾಡಿದ್ರು ಸಂಯುಕ್ತಾ ಅಂತಿರಾ? ಇಲ್ಲೇ ಇದೆ ಮ್ಯಾಟ್ರು..!
ಈ ಶೋ ಸ್ಪರ್ಧಿಗಳಾದ ಸಿಂಬಾ ಹಾಗೂ ಮೈರಾ ನಡುವೆ ಕುಚ್ ಕುಚ್ ಹೋತಾ ಹೈ ಶುರಯವಾಗಿತ್ತು. ಸಂಯುಕ್ತಾ ಎಂಟ್ರಿಯಿಂದ ಸಿಂಬಾ ಮನಸ್ಸು ಈಕೆಯತ್ತ ಜಾರಿದೆ. ಇದರಿಂದ ಮೈರಾ ಗರಂ ಆಗಿದ್ದಾರೆ. ಲವ್ ಬರ್ಡ್ಸ್ ಮಧ್ಯೆ ರಾಂಗ್ ಎಂಟ್ರಿ ಕೊಟ್ಟಿದ್ದಾರೆ ಕಿರಿಕ್ ಹುಡುಗಿ.
ಮುಂದಿನ ಎಪಿಸೋಡ್ ನಿಂದ ಹೊರ ಬರುತ್ತಾರಾ? ಅಲ್ಲೇ ಇರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.