ನಟಿ ಪರಿಣೀತಿ, ಸಂಸದ ಛಡ್ಡಾ ದಂಪತಿಗೆ ಗಂಡು ಮಗು

Kannadaprabha News   | Kannada Prabha
Published : Oct 20, 2025, 04:25 AM IST
Parineeti-Chopra-Net-Worth

ಸಾರಾಂಶ

ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ರಾಘವ್‌ ಛಡ್ಡಾ ದಂಪತಿಗೆ ಗಂಡು ಮಗುವಾಗಿದೆ. ಈ ಬಗ್ಗೆ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ‘ಗಂಡು ಮಗುವನ್ನು ಸ್ವಾಗತಿಸಿದೆವು’ ಎಂದು ಸಂತಸ ಹಂಚಿಕೊಂಡಿದ್ದಾರೆ.

ನವದೆಹಲಿ: ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ರಾಘವ್‌ ಛಡ್ಡಾ ದಂಪತಿಗೆ ಗಂಡು ಮಗುವಾಗಿದೆ. ಈ ಬಗ್ಗೆ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ‘ಗಂಡು ಮಗುವನ್ನು ಸ್ವಾಗತಿಸಿದೆವು’ ಎಂದು ಸಂತಸ ಹಂಚಿಕೊಂಡಿದ್ದಾರೆ.

2023ರ ಮೇ 13ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಟಾರ್‌ ದಂಪತಿಯು ಸೆಪ್ಟೆಂಬರ್‌ 24ರಂದು ಹಸೆಮಣೆ ಏರಿದ್ದರು. ಕಳೆದ ಆಗಸ್ಟ್‌ನಲ್ಲಿ ಪರಿಣೀತಿ ಗರ್ಭಿಣಿ ಎಂದು ಘೋಷಿಸಿಕೊಂಡಿದ್ದರು. ರಾಘವ್‌ ಛಡ್ಡಾ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ. 

ಅಮ್ಮನಾಗ್ತಿರುವ  ಖುಷಿ ಹಂಚಿಕೊಂಡ ದಂಪತಿ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮೊದಲ ಬಾರಿ ತಾಯಿ ಆಗಿದ್ದಾರೆ. ಈ ಖುಷಿ ಸುದ್ದಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪರಿಣೀತಿ ಮತ್ತು ಅವರ ಪತಿ ರಾಘವ್ ಚಡ್ಡಾ ತಾವು ಪಾಲಕರಾಗ್ತಿರುವ ಸಂತೋಷದ ವಿಷ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ನ ಅತ್ಯಂತ ಮುದ್ದಾದ ದಂಪತಿ ಪಟ್ಟಿಯಲ್ಲಿರುವ ಪರಿಣೀತಿ ಮತ್ತು ರಾಘವ್ ನೀಡಿರುವ ಸಂತೋಷದ ಸುದ್ದಿ ಕೇಳಿ ಬಾಲಿವುಡ್ ಸ್ಟಾರ್ಸ್ ಹಾಗೂ ಫ್ಯಾನ್ಸ್ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ಶುಭ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಒಂದು ಸುಂದರ ಫೋಟೋ ಹಂಚಿಕೊಳ್ಳುವ ಮೂಲಕ ನಾವು ಪಾಲಕರಾಗ್ತಿದ್ದೇವೆ ಎಂಬುದನ್ನು ಇಬ್ಬರು ತಿಳಿಸಿದ್ದರು. ಆ ಫೋಟೋದಲ್ಲಿ ಮಗುವಿನ ಪುಟ್ಟ ಪಾದವಿತ್ತು. ಅದ್ರ ಕೆಳಗೆ 1+1=3 ಎಂದು ಬರೆಯಲಾಗಿತ್ತು. ಫೋಟೋ ಹಂಚಿಕೊಂಡ ಪರಿಣೀತಿ ಹಾಗೂ ರಾಘವ್ ಚಡ್ಡಾ, ನಮ್ಮ ಪುಟ್ಟ ಪ್ರಪಂಚ ಬರ್ತಿದೆ ಎಂದು ಶೀರ್ಷಿಕೆ ಹಾಕಿದ್ದರು. ಅಲ್ದೆ ಇಬ್ಬರು ಕೈ ಕೈ ಹಿಡಿದು ರಸ್ತೆಯಲ್ಲಿ ಹೋಗ್ತಿರುವ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು. ಪರಿಣೀತಿ ತಮ್ಮ ಹೊಟ್ಟೆಯನ್ನು ವಿಡಿಯೋದಲ್ಲಿ ತೋರಿಸಿರಲಿಲ್ಲ. ಪರಿಣೀತಿ ಹಾಗೂ ರಾಘವ್ ಚಡ್ಡಾ ನೀಡಿರುವ ಈ ಸುದ್ದಿಗೆ ಬಾಲಿವುಡ್ ಖುಷಿಯಾಗಿದೆ. ಸೋನಮ್ ಕಪೂರ್, ನೇಹಾ ಧೂಪಿಯಾ, ರಾಕುಲ್ ಪ್ರೀತ್, ಭೂಮಿ ಪೆಡ್ನೇಕರ್ ಅವರಂತಹ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂಪರ್ ಹಿಟ್ 'ಜನುಮದ ಜೋಡಿ' ಸಿನಿಮಾದಲ್ಲಿ ಶಿಲ್ಪಾ ಬದಲು ಸೌಂದರ್ಯ ನಟಿಸಬೇಕಿತ್ತು.. ಆದರೆ, ಅದಕ್ಕೆ ಅಡ್ಡಗಾಲಾಗಿದ್ದು ಏನು?
ವೆಬ್‌ ಸಿರೀಸ್‌ನಲ್ಲಿ ಸಖತ್‌ ಬೋಲ್ಡ್‌ ಪಾತ್ರದಲ್ಲಿ ನಟಿಸಿ ಪ್ರಖ್ಯಾತಿ ಪಡೆದ ನಟಿಗೆ ಸ್ತನ ಕ್ಯಾನ್ಸರ್‌!