ರಶ್ಮಿಕಾ ಮಂದಣ್ಣ ಬಿಟ್ಟ ಚಿತ್ರಕ್ಕೆ ಮಣಿರತ್ನಂ ಚಿತ್ರದ ನಾಯಕಿ ಆಯ್ಕೆ

Published : Sep 27, 2018, 12:36 PM ISTUpdated : Sep 27, 2018, 12:40 PM IST
ರಶ್ಮಿಕಾ ಮಂದಣ್ಣ ಬಿಟ್ಟ ಚಿತ್ರಕ್ಕೆ ಮಣಿರತ್ನಂ ಚಿತ್ರದ ನಾಯಕಿ ಆಯ್ಕೆ

ಸಾರಾಂಶ

ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದ  ’ವೃತ್ರ’ ಚಿತ್ರದಿಂದ ಹೊರ ಬಂದಿದ್ದಾರೆ | ರಶ್ಮಿಕಾ ಬಿಟ್ಟ ಪಾತ್ರವನ್ನು ಇನ್ನೊಬ್ಬ ನಟಿ ಮಾಡುತ್ತಿದ್ದಾರೆ | ಮಣಿರತ್ನಂ ಚಿತ್ರದ ನಟಿ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ 

ಬೆಂಗಳೂರು (ಸೆ. 27): ಗೌತಮ್ ಅಯ್ಯರ್ ನಿರ್ದೇಶನದ ‘ವೃತ್ರ’ ಚಿತ್ರಕ್ಕೆ ಹೊಸ ಹುಡುಗಿ ಬಂದಿದ್ದಾಳೆ. ಮಣಿರತ್ನಂ ನಿರ್ದೇಶನದ ‘ಕಾಟ್ರು ವೆಲಿಯಿಡೈ’ ಚಿತ್ರದಲ್ಲಿ ನಟಿಸಿದ್ದ, ದುಲ್ಕರ್ ಸಲ್ಮಾನ್ ನಟಿಸಿದ್ದ ಮಲಯಾಳಂನ ‘ಸೋಲೋ’ ಚಿತ್ರಕ್ಕೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಪ್ರತಿಭಾವಂತ ನೃತ್ಯಗಾತಿ ನಿತ್ಯಶ್ರೀ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಒಪ್ಪಿಕೊಂಡಿದ್ದ ಒಂದೇ ಒಂದು ಕನ್ನಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

ಪೊಲೀಸ್ ಅಧಿಕಾರಿಯಾಗಿ ಕೆಲಸ ಆರಂಭಿಸಿದ ಹುಡುಗಿಯೊಬ್ಬಳ ಮೊದಲ ಕೇಸ್‌ನ ಕತೆ ಇದು ಎಂದು ನಿರ್ದೇಶಕ ಗೌತಮ್ ಹೇಳಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ರಶ್ಮಿಕಾ ಮಂದಣ್ಣ ಈ ಪಾತ್ರವನ್ನು ತೊರೆದ ಕಾರಣಕ್ಕೆ ನಿರ್ದೇಶಕ ಪ್ರತಿಭಾವಂತ ನಟಿಯ ಹುಡುಕಾಟದಲ್ಲಿದ್ದರು. ಅದಕ್ಕೆ ತಕ್ಕಂತೆ ಅವರಿಗೆ ಪ್ರತಿಭಾವಂತ ಕಲಾವಿದೆಯೇ ಸಿಕ್ಕಿದ್ದಾರೆ.

ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ ರಶ್ಮಿಕಾ!

ಕನ್ನಡತಿ ನಿತ್ಯಶ್ರೀ ಈಗಾಗಲೇ ನೃತ್ಯದಲ್ಲಿ ದೊಡ್ಡ ಹೆಸರು ಮಾಡಿದವರು. ಭರತನಾಟ್ಯ, ಕಾಂಟೆಂಪರರಿ ನೃತ್ಯದಲ್ಲಿ ಸಾಧನೆ ಮಾಡಿರುವ ಇವರು ಮಯೂರಿ ಉಪಾಧ್ಯ ಅವರ ಶಿಷ್ಯೆಯೂ ಹೌದು. ಅಲ್ಲದೇ ಸಿನಿಮಾ ಅಂದ್ರೆ ಭಯಂಕರ ಆಸಕ್ತಿ. ಹಾಗಾಗಿ ಮಲಯಾಳಂನ ಪ್ರಸಿದ್ಧ ನಿರ್ದೇಶಕ ಬಿಜೋಯ್ ನಂಬಿಯಾರ್ ಜೊತೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ಸಿದ್ಧರಿಲ್ಲ. ಮಣಿರತ್ನಂ ಜೊತೆ ಕೆಲಸ ಮಾಡಿದ ಅನುಭವವೂ ಇದೆ.

‘ನೀನು ಚೆನ್ನಾಗಿ ಅಭಿನಯಿಸಬಲ್ಲೆ ಎಂದು ನನಗೆ ಗೊತ್ತಿದೆ’ ಅಂತ ಮಣಿರತ್ನಂ ಮೊದಲ ಬಾರಿ ನೋಡಿ ಹೇಳಿದ ಮಾತನ್ನು ನೆನಪಿಸಿಕೊಳ್ಳುವ ನಿತ್ಯಶ್ರೀ ‘ವೃತ್ರ’ ಚಿತ್ರದಲ್ಲಿ ನಟಿಸಲು ಕಾತುರರಾಗಿದ್ದಾರೆ. ‘ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ. ಚಿತ್ರೀಕರಣದಲ್ಲಿ ಭಾಗವಹಿಸಲು ಕಾತುರಳಾಗಿದ್ದೇನೆ’ ಎನ್ನುತ್ತಾರೆ ನಿತ್ಯಶ್ರೀ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
‘The Devil’ ಸಿನಿಮಾ ನೋಡಿ ಭಾವುಕರಾದ ದರ್ಶನ್ ಪತ್ನಿ… ಅಭಿಮಾನಿಗಳಿಗೆ ಪ್ರೀತಿಯ ಪತ್ರ