ಡ್ಯಾನ್ಸ್ ಮಾಡ್ಲಿಕ್ಕೂ ಪತಿ ಪರ್ಮಿಷನ್ ಕೇಳಿದ್ರಂತೆ ಕರೀನಾ!

Published : Feb 08, 2019, 12:58 PM ISTUpdated : Feb 08, 2019, 01:00 PM IST
ಡ್ಯಾನ್ಸ್ ಮಾಡ್ಲಿಕ್ಕೂ ಪತಿ ಪರ್ಮಿಷನ್ ಕೇಳಿದ್ರಂತೆ ಕರೀನಾ!

ಸಾರಾಂಶ

'ದಬಾಂಗ್'ನ ಫೆವಿಕಲ್ ಹಾಡೊಂದು ಬಾಲಿವುಡ್ ಟೌನ್‌ನಲ್ಲಿ ಧೂಳ್ ಎಬ್ಬಿಸಿತ್ತು. ಕಲರ್‌ಫುಲ್ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ ಕರೀನಾ ಹೆಜ್ಜೆ ಹಾಕಲು ಪತಿ ಪರ್ಮಿಷನ್ ಕೇಳಿದ್ರಂತೆ!

ಬಾಲಿವುಡ್ ಯಂಗ್ ಮಮ್ಮಿ ಕರೀನಾ ಕಪೂರ್ ಖಾನ್ ಇಂದು ಸೋಷಿಯಲ್ ಮೀಡಿಯಾದ ಫಿಟ್‌ನೆಸ್ ಕ್ವೀನ್. ಕೈಯಲ್ಲೊಂದು ವಾಟರ್ ಬಾಟಲ್ ಹಿಡಿದು, ಜಿಮ್ ಸೂಟ್ ಅಥವಾ ಟ್ರ್ಯಾಕ್ ಸೂಟ್‌ನಲ್ಲಿಯೇ ಹೆಚ್ಚಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಾರೆ.

ಬಾಲಿವುಡ್ ಬಾಕ್ಸ್ ಆಫೀಸ್ ಚಿತ್ರ 'ದಬಾಂಗ್ - 2'ರಲ್ಲಿ ಇರುವ ಐಟಂ 'ಫೆವಿಕಲ್ ಸೇ' ಹಾಡಿಗೆ ಡ್ಯಾನ್ಸ್ ಮಾಡಲು ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಪರ್ಮಿಷನ್ ಕೇಳಿದ್ರಂತೆ!

2012ರಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದರು ಕರೀನಾ. ಮದುವೆಯಾದ ಕೆಲವೇ ದಿನಗಳಲ್ಲಿ ಈ ಐಟಂ ಹಾಡಿನ ಚಿತ್ರೀಕರಣವಿತ್ತಂತೆ. ಏನು ಮಾಡುವುದೆಂದು ತೋಚದೆ, ಪತಿ ಪರ್ಮಿಷನ್ ಕೇಳಿದ್ರಂತೆ! ಬಾಲಿವುಡ್‌ನ ನಂ. 1 ಆ್ಯಕ್ಟ್ರೆಸ್ ಸಹ ಕೆಲವು ನಿರ್ಧಾರಗಳಿಗೆ ಪತಿ ಮೇಲೆ ಅವಲಂಬಿತರಾಗಿರುತ್ತಾರೆನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

'ಇದು ಸಲ್ಮಾನ್ ಖಾನ್ ಅಭಿನಯದ ಚಿತ್ರ, ಅದರಲ್ಲಿ ನೀನು ಆ್ಯಕ್ಟ್ ಮಾಡಲು ನನ್ನ ಅಭ್ಯಂತರವೇ ಇಲ್ಲ. ನಿನ್ನ ಆಯ್ಕೆ, ನಿನ್ನಿಷ್ಟ, go ahead'ಎಂದಿದ್ದರಂತೆ. ಪತಿಯ ಪ್ರೋತ್ಸಾಹದಿಂದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡು, ಸಿಕ್ಕಾಪಟ್ಟೆ ಹಿಟ್ ಆಗಿದ್ದೀಗ ಇತಿಹಾಸ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?