ಬಿಗ್‌ಬಾಸ್ ಬೆಡಗಿ ಕೃತಿಕಾ ಮದುವೆ ಆಗಿದ್ದಾರಾ?

By Web DeskFirst Published Aug 27, 2018, 12:12 PM IST
Highlights

ಕೃತಿಕಾ ರವೀಂದ್ರ ಬಿಗ್‌ಬಾಸ್ ಮನೆಯಲ್ಲಿ ಸದ್ದು ಮಾಡಿದ ಹುಡುಗಿ. ಬಿಗ್‌ಬಾಸ್ ಮನೆಯಿಂದ ಬಂದ ಮೇಲೆ ಇವರ ಪಯಣದಲ್ಲಿ ತೆಗೆದುಕೊಂಡ ತಿರುವುಗಳೇನು?

ಬೆಂಗಳೂರು (ಆ. 27): ಕೃತಿಕಾ ರವೀಂದ್ರ ಬಿಗ್‌ಬಾಸ್ ಮನೆಯಲ್ಲಿ ಸದ್ದು ಮಾಡಿದ ಹುಡುಗಿ. ಬಿಗ್‌ಬಾಸ್ ಮನೆಯಿಂದ ಬಂದ ಮೇಲೆ ಇವರ ಪಯಣದಲ್ಲಿ ತೆಗೆದುಕೊಂಡ ತಿರುವುಗಳೇನು? ಕನ್ನಡ ಪ್ರಭದೊಂದಿಗೆ ಕೃತಿಕಾ ಎಕ್ಸ್‌ಕ್ಲೂಸಿವ್ ಸಂದರ್ಶನ.  

ಬಿಗ್‌ಬಾಸ್ ಶೋಗೆ ಹೋಗಿ ಬಂದ ನಂತರ ನಿಮ್ಮ ಬದುಕಿನಲ್ಲಾದ ಬದಲಾವಣೆಗಳೇನು?

ಕೃತಿಕಾ ರವೀಂದ್ರ ಹೆಸರಿನ ನಟಿ ಇದ್ದಾರೆ. ಈಕೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಳೆ ಎಂದು ಗುರುತಿಸುವಷ್ಟು ಬದಲಾವಣೆ ತಂದುಕೊಟ್ಟಿದೆ. ಜತೆಗೆ ನನ್ನ ನಟಿಯಾಗಿ ನೋಡಿದವರು ನಾನೇನು ಅಂತ ಬಿಗ್‌ಬಾಸ್ ಮನೆಯಲ್ಲಿದ್ದಾಗ ಅರ್ಥ ಮಾಡಿಕೊಂಡಿದ್ದಾರೆ. ಅಲ್ಲದೆ ನನ್ನ ನಾನು ಅರ್ಥ ಮಾಡಿಕೊಳ್ಳುವುದಕ್ಕೆ ಈ ಶೋ ಒಳ್ಳೆಯ ವೇದಿಕೆ ಆಯಿತು. ಸೆಲೆಬ್ರಿಟಿ ಜೀವನ ಕೊಟ್ಟ ವೇದಿಕೆ ಇದು.

ಇಷ್ಟೆಲ್ಲ ಹೆಸರು ಬಂದಿದ್ದರೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲವಲ್ಲ?
ಬಿಗ್‌ಬಾಸ್‌ನಿಂದ ಬಂದ ಮೇಲೆ ಕಿರುತೆರೆಗೇ ಹೋಗಬೇಕಾ, ಇಲ್ಲ ಸಿನಿಮಾಗಳತ್ತ ನೋಡಬೇಕಾ ಎನ್ನುವ ಗೊಂದಲ ಇತ್ತು. ಹೀಗಾಗಿ ನಾಲ್ಕೈದು ತಿಂಗಳು ಸುಮ್ಮನೆ ಕೂರುವಂತಾಯಿತು. ಕೊನೆಗೆ ಕಿರುತೆರೆ ಸದ್ಯಕ್ಕೆ ಬೇಡ ಎಂದುಕೊಂಡು
ಸಿನಿಮಾಗಳತ್ತ ಬಂದೆ. ಅವಕಾಶಗಳು ಸಿಗುವುದು ಕಡಿಮೆ ಆದವು.

ಈಗ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?

ಕೆಂಗುಲಾಬಿ, ಶಾರ್ದುಲ, ಯಾರಿಗೆ ಯಾರುಂಟು ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವೆ. ಈ ಮೂರು ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗಡೆ ಸಜ್ಜಾಗಿವೆ.

ಈ ಮೂರು ಚಿತ್ರಗಳಲ್ಲಿ ನಿಮ್ಮ ಪಾತ್ರ ಹೇಗಿದೆ?

ಕಾದಂಬರಿಯನ್ನು ಆಧರಿಸಿ ಮಾಡಿರುವ ಚಿತ್ರ ಕೆಂಗುಲಾಬಿ. ಇಲ್ಲಿ ನಾನು ವೇಶ್ಯೆಯ ಪಾತ್ರ ಮಾಡಿದ್ದೇನೆ. ಉತ್ತರ ಕರ್ನಾಟಕದಿಂದ ಬಂದಿರುವ ಹೆಣ್ಣುಮಗಳಿನ ಕತೆ. ನನ್ನ ವಯಸ್ಸಿಗೆ ಮೀರಿದ ಪಾತ್ರ ಅದು. ‘ಹುಲಿರಾಯ’ ನಂತರ ಅರವಿಂದ್ ಕೌಶಿಕ್ ನಿರ್ದೇಶಿರುವ ‘ಶಾರ್ದುಲ’ ಪಕ್ಕಾ ಹಾರರ್ ಸಿನಿಮಾ. ಒರಟ ಪ್ರಶಾಂತ್ ಜತೆ ಕಾಣಿಸಿಕೊಳ್ಳುತ್ತಿರುವ ‘ಯಾರಿಗೆ ಯಾರುಂಟು’ ರೆಗ್ಯುಲರ್ ಕಮರ್ಷಿಯಲ್ ಸಿನಿಮಾ.

ಹಾಗಾದರೆ ನೀವು ಮತ್ತೆ ಕಿರುತೆರೆಗೆ ಹೋಗಲ್ವಾ?
ಸದ್ಯಕ್ಕೆ ಹೋಗಲ್ಲ. ನಾನು ‘ಪಟ್ರೆ ಲವ್ಸ್ ಪದ್ಮಾ’ ಚಿತ್ರದ ನಂತರ ಧಾರಾವಾಹಿಗಳತ್ತ ಹೋಗಿದ್ದು. ರಾಧಾ ಕಲ್ಯಾಣ ಹಾಗೂ ಮನೆ ಮಗಳು. ಈ ಎರಡೂ ಧಾರಾವಾಹಿಗಳು ನನಗೆ ಒಳ್ಳೆಯ ಹೆಸರು ಕೊಟ್ಟವು. ರಾಧೆ ಅಂತಲೇ ಫೇಮಸ್ ಆದೆ.
ಸತತವಾಗಿ ಎರಡು ವರ್ಷ ಧಾರಾವಾಹಿ ಬಂತು. ‘ರಾಧಾ ಕಲ್ಯಾಣ’ ನಂತರ ನಾನು ಸಿನಿಮಾ ಮಾಡುತ್ತೇನೆ ಎಂದರೆ ಎಲ್ಲರೂ ಕಿರುತೆರೆ ನಟಿ ಅಂತಲೇ ನೋಡಿದರು. ಬಿಗ್‌ಬಾಸ್‌ನಿಂದ ಬಂದ ಮೇಲೂ ಕೂಡ ಹಾಗೆ ನೋಡಿದರು. ಆ ಬಗ್ಗೆ ನನಗೆ ಬೇಸರ ಇದೆ. ಚಿತ್ರ ನಟಿ ಅಂತ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಆಸೆ. ಹೀಗಾಗಿ ಸಿನಿಮಾಗಳತ್ತಲೇ ಹೆಚ್ಚು ಗಮನ ಕೊಟ್ಟಿದ್ದೇನೆ.

ಅಂದ್ರೆ ಕಿರುತೆರೆ ಅಂದ್ರೆ ಕಡಿಮೆ ಅಂತಾನಾ?
ಹಾಗೇನು ಇಲ್ಲ. ನನಗೆ ಕಿರುತೆರೆಯಲ್ಲಿ ಬೇಡಿಕೆ ಇದ್ದಾಗಲೇ ಸಿನಿಮಾಗಳ ಕಡೆ ಗಮನ ಕೊಟ್ಟಿದ್ದೇನೆ ಅಂದರೆ ಇಲ್ಲೂ ಗುರುತಿಸಿಕೊಳ್ಳಬೇಕು ಎಂಬುದು. ರಂಗಭೂಮಿಗೆ ಹೋಗದವರಿಗೆ ಕಿರುತೆರೆ ಥಿಯೇಟರ್‌ನಂತೆ. ಇಲ್ಲಿ ತಾವೇನು ಅಂತ ಸಾಬೀತು ಮಾಡಿದರೆ ಎಂಥ ಪಾತ್ರ ಕೊಟ್ಟರೂ ನ್ಯಾಯ ಸಲ್ಲಿಸುವ ಧೈರ್ಯ ಬರುತ್ತಿದೆ.

ಸಂದರ್ಶನ: -ಆರ್ ಕೇಶವಮೂರ್ತಿ 
 

click me!