
ಬೆಂಗಳೂರು (ಆ. 27): ಸದ್ಯ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿರುವುದು ‘ಪತಿಬೇಕು.ಕಾಂ’ ಚಿತ್ರದ ಟ್ರೇಲರ್. ನಿರೂಪಕಿ ಶೀತಲ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಅನ್ನು ಸುದೀಪ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದರು.
ಈಗ ಟ್ರೇಲರ್ ನೋಡಿ ಮೆಚ್ಚಿಕೊಂಡ ನಟ ಶಿವರಾಜ್‌ಕುಮಾರ್ ಅವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ‘ಯಾಕಪ್ಪಾ ದೇವರೇ ಆಡೂಸ್ತ್ಯಾ ಕ್ಯಾಬರೆ...ಅಷ್ಟು
ಇಷ್ಟನಾ ಹೆಣ್ಮಕ್ಕಳ ತೊಂದರೆ’ ಎನ್ನುವ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಜತೆಗೆ ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಈ ಸಿನಿಮಾ ಎಲ್ಲ ಜನರು ನೋಡಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಶಿವಣ್ಣ ಬಿಡುಗಡೆ ಮಾಡಿದ ಹಾಡು ಒಂದೇ ದಿನದಲ್ಲಿ 50 ಸಾವಿರ ಹಿಟ್ಸ್ ಪಡೆದುಕೊಂಡಿದೆ. ಚಿತ್ರದ ಟ್ರೇಲರ್ ಕಳೆದ ತಿಂಗಳು 26 ರಂದು ಸುದೀಪ್ ಅವರು ಬಿಡುಗಡೆ ಮಾಡಿದ್ದು 4 ಲಕ್ಷ ನೋಡುಗರನ್ನು ತನ್ನತ್ತ ಸೆಳೆದಿದೆ. ಈ ಹಿಂದೆ ‘ತರ್ಲೆನನ್ಮಕ್ಳು’ ಚಿತ್ರವನ್ನು ನಿರ್ದೇಶಿಸಿ ರಾಕೇಶ್ ಅವರ ಎರಡನೇ ಸಿನಿಮಾ ಇದಾಗಿದ್ದು, ಮುಂದಿನ ತಿಂಗಳು ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಪಕ್ಕಾ ಮನರಂಜನೆಯ ಕತೆಯನ್ನು ಒಳಗೊಂಡು ಈ ಚಿತ್ರಕ್ಕೆ ಇಬ್ಬರು ಸ್ಟಾರ್ ಗಳಾದ ಸುದೀಪ್ ಹಾಗೂ ಶಿವಣ್ಣ ಸಾಥ್ ನೀಡಿರುವುದು ಚಿತ್ರತಂಡದ ಉತ್ಸಾಹಕ್ಕೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.