ಕಸ ಗುಡಿಸಿದ ಕತ್ರೀನಾ ಕರಾಮತ್ತು, ಕಾಲೆಳೆದ ಅಕ್ಷಯ್.. ವಿಡಿಯೋ

Published : Feb 03, 2020, 07:50 PM ISTUpdated : Feb 03, 2020, 08:03 PM IST
ಕಸ ಗುಡಿಸಿದ ಕತ್ರೀನಾ ಕರಾಮತ್ತು, ಕಾಲೆಳೆದ ಅಕ್ಷಯ್.. ವಿಡಿಯೋ

ಸಾರಾಂಶ

ಬಾಲಿವುಡ್ ತಾರೆಗಳು ಏನು ಮಾಡಿದರೂ ಸುದ್ದಿ/ ಕಸ ಗುಡಿಸಿದ ಕತ್ರೀನಾ ಕಾಲು ಎಳೆದ ಅಕ್ಷಯ್ ಕುಮಾರ್/ ಸ್ವಚ್ಛ ಭಾರತ ಅಣಿಯಾನಕ್ಕೆ ಹೊಸ ಅಂಬಾಸಿಡರ್ ಸಿಕ್ಕಿಂಗೆ ಆಯ್ತು/

ಬೆಂಗಳೂರು[ಫೆ. 03]  ಬಾಲಿವುಡ್ ತಾರೆಗಳು ಏನೂ ಮಾಡಿದರೂ ಸುದ್ದಿಯಾಗುತ್ತದೆ. ಶೂಟಿಂಗ್ ಮಾಡಿದರೂ ಸುದ್ದಿ. ಶೂಟಿಂಗ್ ಸೆಟ್ ನಲ್ಲಿ ಬಿದ್ದ ಕಸ ಎತ್ತಿದ್ದರೂ ಸುದ್ದಿ. ಬಾಲಿವುಡ್ ತಾರೆ ಕತ್ರೀನಾ ಕೈಫ್ ಪೊರಕೆ ಹಿಡಿದಿದ್ದಾರೆ. ಕತ್ರೀನಾ ಕಸ ಗುಡಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವುದು ಅಕ್ಷಯ್ ಕುಮಾರ್ ಎನ್ನುವುದು ಮತ್ತೊಂದು ವಿಶೇಷ.

ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್  ಕುಮಾರ್ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಕಸ ಬಿದ್ದಿರುವುದನ್ನು ಕಂಡ ಕತ್ರೀನಾ ತಾವೇ ಮುಂದಾಗಿ ಪೊರಕೆ ಕೈಯಲ್ಲಿ ಎತ್ತಿಕೊಂಡಿದ್ದಾರೆ. 

ಇದೇನು ಶೂಟಿಂಗ್ ಅಲ್ಲ ಆದರೆ ಕತ್ರೀನಾ ಸ್ವಯಂ ಪ್ರೇರಣೆಯಿಂದ ಕಸ ಗುಡಿಸಲು ಮುಂದಾಗಿದ್ದಾರೆ. ಕತ್ರೀನಾ ಅವರೇ ನೀವು ಏನು ಮಾಡುತ್ತಿರುವುರಿ? ಸ್ವಚ್ಛ ಭಾರತ ಅಭಿಯಾನಕ್ಕೆ ಹೊಸ ರಾಯಭಾರಿ ಸಿಕ್ಕಂತಾಗಿದೆ ಎಂದು ಅಕ್ಷಯ್ ಕುಮಾರ್ ಬರೆದು ಪೋಸ್ಟ್ ಮಾಡಿದ್ದಾರೆ.

ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡ ಕತ್ರೀನಾ ನಿದ್ದೆಗೆ ಕೊಳ್ಳಿ ಇಟ್ಟರು

ಕರಣ್ ಜೋಹರ್ ನತ್ತು ರೋಹಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ರೋಹಿತ್ ಶೆಟ್ಟಿ ಅವರೇ ನಿರ್ದೇಶಕ. ಅಕ್ಷಯ್ ಕುಮಾರ್ ಈ ಚಿತ್ರಕ್ಕೆ 100 ಕೋಟಿ ರೂ. ಅಧಿಕ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಅಕ್ಷಯ್ ಕುಮಾರ್ ಮಾತ್ರವಲ್ಲದೇ ಅಜಯ್ ದೇವಗನ್, ರಣವೀರ್ ಸಿಂಗ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಮಾರ್ಚ್ 27 ರಂದು ತೆರೆಗೆ ಅಪ್ಪಳಿಸಲಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್​ ಎಂಗೇಜ್​ಮೆಂಟ್​ ಕುರಿತು ರಾಶಿಕಾ ಹೇಳಿದ್ದೇನು?
ನಾನು ಸೀತೆಯಲ್ಲ, ನಿಮ್ಮ ಧರ್ಮ ನಿಮ್ಮಲ್ಲೇ ಇರಲಿ - ಮಾಡೆಲಿಂಗ್​ಗೆ ಮರಳಿದ ಮಹಾಕುಂಭದ ವೈರಲ್​ ಸಾಧ್ವಿ!