ಒಂದೇ ತಟ್ಟೆಯಲ್ಲಿ ಊಟ ಮಾಡಿದ ದಚ್ಚುನ ನೋಡೋ ಸ್ಥಿತಿಯಲ್ಲೂ ನಾನಿಲ್ಲ - ದರ್ಶನ್​ಗಾಗಿ ಕಣ್ಣೀರಿಟ್ಟ ನಟಿ ಚಿತ್ರಾ ಶೆಣೈ

Suchethana D   | CMS
Published : Nov 20, 2026, 05:57 PM IST
Chitra Shenoy about Darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೆನೆದು ನಟಿ ಚಿತ್ರಾ ಶೆಣೈ ಕಣ್ಣೀರಾಗಿದ್ದಾರೆ. ತಮ್ಮಿಬ್ಬರ ಆತ್ಮೀಯ ಒಡನಾಟ ಹಾಗೂ ದರ್ಶನ್ ಅವರ ಔದಾರ್ಯವನ್ನು ಅವರು ನೆನಪಿಸಿಕೊಂಡಿದ್ದಾರೆ. ಒಂದೇ ತಟ್ಟೆಯಲ್ಲಿ ಊಟಮಾಡಿದ ದರ್ಶನ್​ ಅವರನ್ನು ನೋಡಲು ಕೂಡ ಆಗುತ್ತಿಲ್ಲ ಎನ್ನುವ ಬಗ್ಗೆ ನಟಿ ಕಣ್ಣೀರು ಹಾಕಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ ಅವರಿಗೆ ಸದ್ಯ ಬಿಡುಗಡೆಯ ಭಾಗ್ಯವೇ ಇಲ್ಲವೇನೋ ಎನ್ನುವಂತಾಗಿದೆ. ಅವರು ಜೈಲುವಾಸಿಯಾಗಿ ಎರಡು ವರ್ಷಗಳಾಗಿದ್ದು, ಒಂದರ ಮೇಲೊಂದರಂತೆ ನಡೆಯುತ್ತಿರುವ ಘಟನೆಗಳಿಂದ ಅವರಿಗೆ ಕೋರ್ಟ್​ಗಳು ಜಾಮೀನು ಕೂಡ ನೀಡುತ್ತಿಲ್ಲ. ಇದರಿಂದ ಅವರ ಅಭಿಮಾನಿಗಳು ಪ್ರತಿನಿತ್ಯವೂ ದುಃಖಿತರಾಗುತ್ತಿದ್ದಾರೆ. ಇದೇ ವೇಳೆ ದರ್ಶನ್​ ಅವರ ಔದಾರ್ಯ, ಅವರ ಮಾಡಿದ ಉಪಕಾರ, ಅವರ ಜೊತೆಗಿನ ಒಡನಾಟಗಳ ಕುರಿತು ಹಲವು ಕಲಾವಿದರು ಸಂದರ್ಶನಗಳಲ್ಲಿ ಮಾತನಾಡುತ್ತಾ ದುಃಖ ತೋಡಿಕೊಳ್ಳುತ್ತಿದ್ದಾರೆ.

ಇದೀಗ ನಟಿ ಚಿತ್ರಾ ಶೆಣೈ (ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಅಮ್ಮ ಮಂದಾಕಿನಿ ಪಾತ್ರ ಮಾಡಿರುವ ನಟಿ) ದರ್ಶನ್​ ಅವರನ್ನು ನೆನೆದು ಕಣ್ಣೀರಾಗಿದ್ದಾರೆ. ದರ್ಶನ್​ ಮತ್ತು ಚಿತ್ರಾಶೆಣೈ ಅವರು ಬಹಳ ಅತ್ಯಾಪ್ತರು. ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಕ್ಲೋಸ್​ ಆಗಿರುವವರು. ಚಿತ್ರಾ ಅವರು ದರ್ಶನ್​ ಅವರನ್ನು ದಚ್ಚು ಎಂದೇ ಸಂಬೋಧಿಸುತ್ತಾ ಅವರ ಜೊತೆಗಿನ ಒಡನಾಟವನ್ನು ನೆನದು ಭಾವುಕರಾಗಿದ್ದಾರೆ. ನ್ಯೂಸೋ ನ್ಯೂಸು ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ನಟಿ ದರ್ಶನ್​ ಜೊತೆಗಿನ ಒಡನಾಡವನ್ನು ಹಂಚಿಕೊಂಡಿದ್ದಾರೆ.

ಒಂದೇ ತಟ್ಟೆಯಲ್ಲಿ ಊಟ ಮಾಡಿದೋರು

'ದಚ್ಚು ನನಗೆ ಐ-ಫೋನ್​ ತಗೋ ನೀನು ಎಂದು ಒತ್ತಾಯ ಮಾಡಿದ್ದ. ನನಗೆ ಐ-ಫೋನ್​ ಎಲ್ಲಾ ಯೂಸ್​ ಮಾಡಲು ಬರಲ್ಲ ಕಣೋ ಎಂದಾಗ, ನಿಂತಲ್ಲೇ ಸ್ಯಾಮ್​ಸಂಗ್​ನ ಹೊಸ ಮಾಡೆಲ್​ ಯಾವುದಿದೆ ಅದು ಕೊಡಪ್ಪ ಎಂದು ಕೂಡಲೇ, ನಿಂತಲ್ಲೇ ತಂದುಕೊಟ್ಟ. ಅಂಥ ಪ್ರೀತಿ ಅವನಿಗೆ. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ನಾವು. ಆದರೆ ಇಂದು ಅವನು ಸಂಕಷ್ಟದಲ್ಲಿ ಇದ್ದಾನೆ. ಕೊನೆಯ ಪಕ್ಷ ಅವನನ್ನು ನೋಡಲು ಕೂಡ ಹೋಗಲು ಆಗದ ಸ್ಥಿತಿಯಲ್ಲಿ ನಾನಿದ್ದೇನೆ. ಕೊನೆಯ ಪಕ್ಷ ಒಂದೆರಡು ಸಮಾಧಾನದ ಮಾತುಗಳನ್ನಾಡಿ ಬರಲು ಕೂಡ ಅಸಹಾಯಕಳಾಗಿದ್ದೇನೆ ಎಂದು ಚಿತ್ರಾ ನೊಂದು ನುಡಿದಿದ್ದಾರೆ.

ಅವನನ್ನು ನೋಡಲು ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ. ನಾವು ಎಷ್ಟೇ ದೊಡ್ಡ ಕಲಾವಿದರಾದರೂ ಇಂಥ ಘಟನೆಗಳ ಸಂದರ್ಭದಲ್ಲಿ ಜೈಲಿನಲ್ಲಿ ಇರುವವರನ್ನು ನೋಡಲು ಬಿಡುವುದಿಲ್ಲ. ಎಷ್ಟೋ ಮಂದಿ ನನಗೆ ಕೇಳ್ತಾರೆ, ನೀವಿಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದೀರಿ. ಹೋಗಿ ನೋಡಿ ಬರಲ್ವಾ ಅಂತ ಪ್ರಶ್ನಿಸ್ತಾರೆ. ಆದರೆ ಅವರನ್ನು ನೋಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲಿ ಹಾಗೆಲ್ಲಾ ಯಾರನ್ನು ಬಿಡ್ತಾರೋ, ಇಲ್ಲವೋ ಗೊತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾನಿದ್ದೇನೆ ಎಂದು ನೊಂದು ನುಡಿದಿದ್ದಾರೆ ಚಿತ್ರಾ ಶೆಣೈ (Chitra Shenoy)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಟ್ಟಿಗೆ ನಟಿಸುತ್ತಾ ಪ್ರೀತಿಯಲ್ಲಿ ಬಿದ್ದ ಟಾಲಿವುಡ್ ಜೋಡಿಗಳು! ಇವರ ಲವ್ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗ್
ವಿಷ್ಣುವರ್ಧನ್ ಆರತಿಯ ಈ ಹಾಡು ಭಾರತದ ಮೊಟ್ಟ ಮೊದಲ ಸ್ಲೋ ಮೋಶನ್ ಸಾಂಗ್, 1972ರಲ್ಲೇ ದಾಖಲೆ