ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದ ಅಂಜಲಿ, ಸಿನಿಮಾಗಳಲ್ಲಿನ ಬೆಡ್‌ರೂಮ್ ಹಾಗೂ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವಾಗ ತಮ್ಮ ಎದ್ದೇಳುವ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದಾರೆ.
ಚೆನ್ನೈ (ಜ.16): ದಕ್ಷಿಣ ಭಾರತದ ಜನಪ್ರಿಯ ನಟಿಯಲ್ಲಿ ಒಬ್ಬರಾಗಿರುವ ಅಂಜಲಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಮುಂದಿನ ತಮಿಳು ಚಿತ್ರ ಯೆಝು ಕಡಲ್ ಯೆಝು ಮಲೈ ಕೆಲಸದಲ್ಲಿ ಬ್ಯುಸಿಯಾಗಿರುವ ಅಂಜಲಿ ಇತ್ತೀಚೆಗೆ ಮಾಧಮ್ಯ ಸಂವಾದದಲ್ಲಿ ಮಾತನಾಡಿರುವ ವಿಚಾರ ಸಾಕಷ್ಟು ಚರ್ಚೆಯಾಗಿತ್ತಿದೆ. ಇದರಲ್ಲಿ ಅವರು ಸಿನಿಮಾಗಳಲ್ಲಿ ಕಿಸ್ಸಿಂಗ್ ಹಾಗೂ ಬೆಡ್‌ರೂಮ್ ದೃಶ್ಯಗಳಲ್ಲಿ ನಟಿಸುವಾಗ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ತಾವೂ ಕೆಲವು ಸಿನಿಮಾಗಳಲ್ಲಿ ಇಂಥ ದೃಶ್ಯಗಳಲ್ಲಿ ನಟಿಸಿದ್ದು, ಅವುಗಳ ಅನುಭವ ಹಂಚಿಕೊಳ್ಳುವುದರೊಂದಿಗೆ ಇದೆಷ್ಟು ಅನ್‌ಕಂಫರ್ಟಬಲ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಒಬ್ಬ ನಟಿಯಾಗಿ ಇಂಥ ದೃಶ್ಯಗಳಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿರೋದಿಲ್ಲ. ಯಾಕೆಂದರೆ, ಸಿನಿಮಾಕ್ಕೆ ಆ ದೃಶ್ಯಗಳು ಅಗತ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಹಾಟ್ ಸೀನ್‌ಗಳಲ್ಲಿ ನಟಿಸುವಾಗ ಸಹ ನಟ ನನ್ನ ಬಗ್ಗೆ ಏನು ಅಂದುಕೊಳ್ಳುತ್ತಿರಬಹುದು ಎಂದೇ ನಾನು ಚಿಂತೆ ಮಾಡುತ್ತಿರುತ್ತೇನೆ ಎಂದು ಹೇಳಿದ್ದಾರೆ. ನನಗೆ ಬೆಡ್‌ರೂಮ್ ಸೀನ್‌ಗಳು, ಕಿಸ್ಸಿಂಗ್ ಸೀನ್‌ಗಳನ್ನು ಮಾಡುವಾಗ ಬಹಳ ಮುಜುಗರವಾಗುತ್ತದೆ. ಹೀರೋ ಎದುರು ಸಂಕೋಚ ಮರೆಮಾಚುವ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತಿರುತ್ತೇನೆ ಎಂದು ಹೇಳಿದ್ದಾರೆ.
ಇಬ್ಬರು ಲವರ್ ನಡುವಿನ ಕೆಮಿಸ್ಟ್ರಿಗೂ ಇಬ್ಬರೂ ನಟರ ನಡುವಿನ ಕೆಮಿಸ್ಟ್ರಿಗೂ ಬಹಳ ವ್ಯತ್ಯಾಸಗಳಿರುತ್ತದೆ ಎನ್ನುವುದು ನನಗೆ ಗೊತ್ತಿದೆ. ಇದೇ ಕಾರಣಕ್ಕಾಗಿ ಹೀರೋಗೆ ಮುತ್ತಿಡುವಾಗ ಹಾಗೂ ಆತನೊಂದಿಗೆ ಬೆಡ್‌ರೂಮ್ ಸೀನ್ ಮಾಡುವಾಗ ತೀರಾ ಮುಜುಗರಕ್ಕೆ ಒಳಗಾಗುತ್ತೇನೆ ಎಂದಿದ್ದಾರೆ. 2006ರಲ್ಲಿ ತೆಲುಗಿನ ರೋಮಾಂಟಿಕ್ ಥ್ರಿಲ್ಲರ್ ಫೋಟೋ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಅಂಜಲಿ ಪಾದಾರ್ಪಣೆ ಮಾಡಿದ್ದರು. ಶಿವ ನಾಗೇಶ್ವರ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ಹಾಗೂ ಮುಕ್ತಾ ಕೂಡ ಪ್ರಂಉಕ ಪಾತ್ರ ನಿರ್ವಹಿಸಿದ್ದರು. ಮಾಚರ್ಲಾ ನಿಯೋಜಕವರ್ಗಂ, ವಕೀಲ್ ಸಾಬ್, ಬೈರಾಗಿ, ಮತ್ತು ಪಾವ ಕಥೆಗಳು ಮುಂತಾದ ಚಲನಚಿತ್ರಗಳೊಂದಿಗೆ ಅವರು ದೊಡ್ಡ ಅಭಿಮಾನಿ ವರ್ಗ ಸಂಪಾದಿಸಿದ್ದಾರೆ.
ಇದರೊಂದಿಗೆ ತಮ್ಮ ಮದುವೆಯ ಕುರಿತಾದ ರೂಮರ್‌ಗಳ ಬಗ್ಗೆಯೂ ಮಾತನಾಡಿರುವ ಅವರು, ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಬಹಳ ಮಂದಿ ಸ್ನೇಹಿತರಿದ್ದಾರೆ. ಹಾಗಾಗಿ ನಾನು ಯಾರೊಂದಿಗೆ ಮದುವೆಯಾಗಬೇಕು, ಡೇಟ್ ಮಾಡಬೇಕು ಎಂದು ಮೀಡಿಯಾಗಳೇ ನಿರ್ಧಾರ ಮಾಡುತ್ತದೆ. ಕೆಲವು ತಿಂಗಳ ಹಿಂದೆ ನಾನು ತಮಿಳು ನಟ ಜೈ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಗಾಸಿಪ್ ಹಬ್ಬಿಸಿದ್ದರು. ಬಳಿಕ ನಾನು ಅಮೆರಿಕ ಮೂಲದ ಉದ್ಯಮಿಯನ್ನು ಮದುವೆಯಾಗಿ ಅಮೆರಿಕದಲ್ಲಿಯೇ ನೆಲೆಸಿದ್ದಾಗಿ ಸುದ್ದಿ ಮಾಡಿದ್ದರು. ಹಾಗಾಗಿ ಈ ಸುದ್ದಿಗಳನ್ನು ನೋಡುವಾಗ ನಾನು ನಕ್ಕು ಸುಮ್ಮನಾಗುತ್ತೇನೆ. ನಿಮಗೆ ಗೊತ್ತಿಲ್ಲದೆ ನಾನು ಮದುವೆಯಾಗಲು ಸಾಧ್ಯವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ದಿವ್ಯಾ ದುರೈಸಾಮಿ ಪ್ರತಿ ಫೋಟೋಗೂ 'ಟೆಸ್ಲಾ' ಕಾಮೆಂಟ್ ಮಾಡೋದ್ಯಾಕೆ ಪಡ್ಡೆ ಹುಡುಗ್ರು!
ಅಂಜಲಿ ಅವರ ಕೊನೆಯ ಸಿನಿಮಾ ಮಲಯಾಳಂ ಭಾಷೆಯ ಕ್ರೈಮ್ ಥ್ರಿಲ್ಲರ್-ಡ್ರಾಮಾ ಚಿತ್ರ ಇರಟ್ಟ ಈಗಾಗಲೇ ಬಿಡುಗಡೆಯಾಗದೆ. ಇದನ್ನು ರೋಹಿತ್ ಎಂಜಿ ಕೃಷ್ಣನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಜೋಜು ಜಾರ್ಜ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ಅಂಜಲಿ, ಆರ್ಯ ಸಲೀಂ ಮತ್ತು ಶ್ರೀಕಾಂತ್ ಮುರಳಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಿನ್ನ ಪೋರ್ನ್ ಫಿಲ್ಮ್‌ಅಲ್ಲಿ ಕಾಣೋ ಆಸೆ ಎಂದವನಿಗೆ ಚಳಿ ಬಿಡಿಸಿದ ನಟಿ!