ತಮ್ಮ ಹಳೆಯ ರೊಮ್ಯಾನ್ಸ್‌ಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತನಾಡಿರುವ ನಿರ್ಮಾಪಕ ವಿಕ್ರಮ್ ಭಟ್, ಸುಶ್ಮಿತಾ ಸೇನ್ ಮತ್ತು ಅಮೀಶಾ ಪಟೇಲ್ ಇಬ್ಬರಿಗೂ ಫೋನ್ ಕರೆಗಳ ಮೂಲಕ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.
ಬಾಲಿವುಡ್ ಚಿತ್ರಗಳ ನಿರ್ಮಾಪಕ ವಿಕ್ರಮ್ ಭಟ್, ನಟಿಯರಾದ ಸುಶ್ಮಿತಾ ಸೇನ್ ಮತ್ತು ಅಮೀಶಾ ಪಟೇಲ್ ಜೊತೆಗಿನ ತಮ್ಮ ಹಳೆಯ ಸಂಬಂಧದ ಬಗ್ಗೆ ಖುಲ್ಲಂಖುಲ್ಲಾ ಮಾತಾಡಿದ್ದಾರೆ. 2000 ಇಸವಿಗೂ ಮುನ್ನ ಇವರೊಂದಿಗೆ ಸಂಬಂಧ ಹೊಂದಿದ್ದ ವಿಕ್ರಮ್ ಭಟ್, ತಾವು ಈ ಇಬ್ಬರಿಗೂ ಕರೆ ಮಾಡಿ ಕ್ಷಮೆ ಕೇಳಿರುವುದಾಗಿ ಹೇಳಿದ್ದಾರೆ.
'ನಾನು ತಪ್ಪುಗಳನ್ನು ಮಾಡಿದ್ದೇನೆ, ಬಹಳಷ್ಟು ತಪ್ಪುಗಳನ್ನು ಮಾಡಿದ್ದೇನೆ, ಆದರೆ ನಾನು ಅದರಿಂದ ಕಲಿತಿದ್ದೇನೆ' ಎಂದು ಭಟ್ ಒಪ್ಪಿಕೊಂಡಿದ್ದಾರೆ.
ಸಿದ್ಧಾರ್ಥ್ ಕಾನನ್ ಅವರೊಂದಿಗಿನ ಇಂಟರ್‌ವ್ಯೂನಲ್ಲಿ ಮಾತಾಡಿದ ವಿಕ್ರಮ್ ಭಟ್ , ತಮ್ಮ ಮಾಜಿ ಪತ್ನಿ ಅದಿತಿ ಭಟ್ ಮತ್ತು ನಟಿಯರಾದ ಸುಶ್ಮಿತಾ ಸೇನ್ ಮತ್ತು ಅಮೀಶಾ ಪಟೇಲ್ ಅವರೊಂದಿಗಿನ ಅವರ ಸಂಬಂಧಗಳ ಬಗ್ಗೆ ತೆರೆದಿಟ್ಟಿದ್ದಾರೆ. ಸುಶ್ಮಿತಾ ಜೊತೆಗಿನ ಸಂಬಂಧದಿಂದಾಗಿ ಪತ್ನಿ, ಬಾಲ್ಯದ ಗೆಳತಿ ಅದಿತಿ ಭಟ್ ಜೊತೆಗಿನ ವಿವಾಹ ಸಂಬಂಧ ಅಂತ್ಯವಾಗಿತ್ತು.
ಹಾಗಾಗಿ, ಈ ಸಂದರ್ಭದಲ್ಲಿ ಸುಶ್ಮಿತಾ ಅವರೊಂದಿಗಿನ ಸಂಬಂಧಕ್ಕೆ ನೀವು ವಿಷಾದಿಸುತ್ತೀರಾ ಎಂದು ಸಂದರ್ಶಕ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ವಿಕ್ರಂ, 'ನಾನು ನನ್ನ ಜೀವನದಲ್ಲಿ ಯಾವುದಕ್ಕೂ ವಿಷಾದಿಸುವುದಿಲ್ಲ, ಒಂದು ವಿಷಯವಲ್ಲ, ಒಂದು ತಪ್ಪು ಅಲ್ಲ, ನಾನು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇನೆ, ಅದರಿಂದಾದ ನೋವಿನಿಂದ ಕಲಿತಿದ್ದೇನೆ. ಬಹುಶಃ ಇನ್ನೂ ಹೆಚ್ಚಿನ ಕಲಿಕೆ ಉಳಿದಿದೆ, ಇದು ನನ್ನ ಏಕೈಕ ಪ್ರಯಾಣವಾಗಿದೆ' ಎಂದಿದ್ದಾರೆ.
ಇಷ್ಟಕ್ಕೂ ಮೀಡಿಯಾದಲ್ಲಿ ಹೈಲೈಟ್ ಆದ ಈ ಎರಡು ಸಂಬಂಧಗಳ ಹೊರತಾಗಿ ತಾನು ಇನ್ನೂ ಸಂಬಂಧಗಳನ್ನು ಹೊಂದಿದ್ದೆ. ಆದರೆ, ಅವುಗಳ ಬಗ್ಗೆ ನಾನು ಪಶ್ಚಾತ್ತಾಪ ಪಡುವುದಿಲ್ಲ. ಇವೆಲ್ಲವೂ ಇಂದಿನ ನನ್ನ ಆಧ್ಯಾತ್ಮಿಕ ಪಯಣಕ್ಕೆ ದಾರಿ ಮಾಡಿಕೊಟ್ಟಿವೆ ಎಂದಿದ್ದಾರೆ ಭಟ್.
4 ಕೋಟಿ ಮೌಲ್ಯದ ಕಾರ್‌ನಲ್ಲಿ ಆಕಾಶ್ ಅಂಬಾನಿ ರಣಬೀರ್ ಕಪೂರ್ ಸುತ್ತಾಟ; ಇವರ ಗೆಳೆತನ ಎಂಥದ್ದು ಗೊತ್ತಾ?
ಅಂಕಹೀ ಅವರ ಜೀವನಾಧರಿತ ಚಿತ್ರ
2006ರಲ್ಲಿ ತೆರೆ ಕಂಡ ಊರ್ಮಿಳಾ ಮಾತೋಂಡ್ಕರ್ ನಟಿಸಿದ ಅವರ ನಿರ್ದೇಶನದ 'ಅಂಕಹಿ' ಚಿತ್ರ ತಮ್ಮ ಜೀವನದ ಅರೆ ಕಾಲ್ಪನಿಕ ಆವೃತ್ತಿಯಾಗಿದೆ ಎಂದು ವಿಕ್ರಂ ಹೇಳಿದ್ದಾರೆ. ಆ ಚಿತ್ರದಲ್ಲಿ ಸುಶ್ಮಿತಾ ಮತ್ತು ನನ್ನ ಹೆಂಡತಿಯೊಂದಿಗಿನ ನನ್ನ ಪರಿಸ್ಥಿತಿಯನ್ನು ಬಿಂಬಿಸಿದ್ದೇನೆ ಎಂದಿದ್ದಾರೆ.
ಈ ವಿಷಯದ ಬಗ್ಗೆ ಚಿತ್ರ ನಿರ್ಮಿಸಿದ್ದಕ್ಕಾಗಿ ನಿಮ್ಮ ಹೆಂಡತಿಗೆ ಅಸಮಾಧಾನವಿಲ್ಲವೇ ಎಂದು ಕೇಳಿದಾಗ ವಿಕ್ರಮ್, 'ನಾನು ಯಾರನ್ನಾದರೂ ದೂಷಿಸಿದ್ದರೆ ಅದು ನನ್ನನ್ನೇ. ನಾನು ಸುಶ್ಮಿತಾ ಪಾತ್ರವನ್ನು ಅಥವಾ ನನ್ನ ಮಾಜಿ ಪತ್ನಿಯನ್ನು ದೂಷಿಸಲಿಲ್ಲ. ಹಾಗಾಗಿ ಯಾರಾದರೂ ಏಕೆ ಅಸಮಾಧಾನಗೊಳ್ಳುತ್ತಾರೆ?' ಎಂದು ಪ್ರಶ್ನಿಸಿದ್ದಾರೆ.