ಸಪ್ತಪದಿ ತುಳಿಯಲಿದೆ ಈ ಕಿರುತೆರೆ ಜೋಡಿ!

Published : Jan 28, 2019, 12:35 PM ISTUpdated : Jan 28, 2019, 03:11 PM IST
ಸಪ್ತಪದಿ ತುಳಿಯಲಿದೆ ಈ ಕಿರುತೆರೆ ಜೋಡಿ!

ಸಾರಾಂಶ

  ಈ ಜೋಡಿ ಮಿ. ಆ್ಯಂಡ್ ಮಿಸಸ್ ರಂಗೇಗೌಡ ಎಂದೇ ಫೇಮಸ್. ಈ ಧಾರವಾಹಿ ನಂತರ ಇಬ್ಬರೂ ಬೇರೆ ಬೇರೆ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದು, ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ ಮಿ.ಆ್ಯಂಡ್ ಮಿಸಸ್ ರಂಗೇಗೌಡ ಧಾರವಾಹಿ ಖ್ಯಾತಿಯ ರಘು ಹಾಗೂ ಅಮೃತಾ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ನಮ್ಮನೆ ಯುವರಾಣಿ' ಧಾರವಾಹಿ ನಟ ಸಾಕೇತ್ ಅಲಿಯಾಸ್ ರಘುವಿಗೆ ನೈಜ ಜೀವನದಲ್ಲಿ ಯುವರಾಣಿಯಾಗುತ್ತಿದ್ದಾರೆ 'ಕುಲವಧು' ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ರಾಮೂರ್ತಿ.

ಮಿ. ಆ್ಯಂಡ್ ರಂಗೇಗೌಡ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ 'ಕುಲವಧು' ಧಾರಾವಾಹಿ ತಂಡದಿಂದ ಲಾಂಚ್‌ ಆದ 'ನಮ್ಮನೆ ಯುವರಾಣಿ' ಸೀರಿಯಲ್‌ನಲ್ಲಿಯೂ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು.

ಮುದ್ದು ಮುಖದ ಆಮೃತಾ ಧಾರವಾಹಿಗಳಲ್ಲಿ ಹೆಸರು ಮಾಡಿದ್ದಲ್ಲದೇ, ಸಿನಿಮಾ ಕ್ಷೇತ್ರದಲ್ಲಿಯೂ ಈಗಾಗಲೇ ತಮ್ಮ ಕಮಾಲ್ ತೋರಿಸಿದ್ದು, 'H/34 ಪಲ್ಲವಿ ಟಾಕಿಸ್' ಹಾಗೂ 'ಸೈಕೋ ಶಂಕ್ರ'ದಲ್ಲಿಯೂ ಅಭಿನಯಿಸಿದ್ದಾರೆ.

ಮಾರ್ಚ್ 6 ರಂದು ಹುಟ್ಟು ಹಬ್ಬ ಆಚರಿಸಿಕೊಂಡ ಅಮೃತಾ ಬರ್ತ್ ಡೇ ಪೋಸ್ಟಿನಲ್ಲಿ 'ವಾಡ್ರೋಬ್ ಐಡಿಯಾ' ಎಂದು ಧರಿಸಿರುವ ಉಡುಪಿಗೆ ಐಡಿಯಾ ಕೊಟ್ಟ ರಘು ಅವರಿಗೆ ಥ್ಯಾಂಕ್ಸ್ ಹೇಳಿದ್ದರು. ಆಗಲೇ ಈ ಇಬ್ಬರ ನಡುವೆ ಕುಚು ಕುಚು ನಡೆಯುತ್ತಿದೆ ಎಂಬ ಗಾಸಿಪ್ ಕೇಳಿ ಬಂದಿತ್ತು.

ಮದ್ವೆ ಬಗ್ಗೆ ಅಮೃತಾ ಹೇಳುವುದೇನು?

ಇದೀಗ ರಘು ತಮ್ಮ ಫೇಸ್‌ಬುಕ್ ಪೋಸ್ಟಿನಲ್ಲಿ 'ಇಟ್ಸ್ ಅಫಿಷಿಯಲ್. ನಿಜ ಜೀವನದಲ್ಲೂ ಮಿ. ಆ್ಯಂಡ್ ಮಿಸಸ್ ರಂಗೇಗೌಡ... ಜೀವನದ ಮೌಲ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ವಂಡರ್‌ಫುಲ್ ಹುಡುಗಿ ನನಗೆ ಸಿಕ್ಕಿದ್ದಾಳೆ. ಥ್ಯಾಂಕ್ಸ್ ನನ್ನ ಜೀವನದಲ್ಲಿ ಬಂದಿದ್ದಕ್ಕೆ. ಇನ್ನು ನಾನೇ ಸ್ಟ್ರಾಂಗೆಸ್ಟ್' ಎಂದು ಬರೆದು ಕೊಂಡಿದ್ದಾರೆ. ಆ ಮೂಲಕ ಈ ಜೋಡಿ ಹಸೆಮಣೆ ಏರುತ್ತಿರುವುದನ್ನು ಕನ್ಫರ್ಮ್ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ದ್ವೇಷ ತೀರಿಸಿಕೊಂಡ ಗಿಲ್ಲಿ ನಟ
2025ರಲ್ಲಿ ಕಿರುತೆರೆಯಿಂದ ದೂರ ಸರಿದ ನಟಿಯರು: ಈಗ ಮಾಡ್ತಿರೋದು ಏನು?