ಬಿಗ್​​ಬಾಸ್-6 ಮನೆಯಿಂದ ಇಬ್ಬರು ಔಟ್, ಮೂವರು ಗ್ರಾಂಡ್​​ ಫಿನಾಲೆಗೆ ಎಂಟ್ರಿ

Published : Jan 26, 2019, 09:50 PM IST
ಬಿಗ್​​ಬಾಸ್-6 ಮನೆಯಿಂದ ಇಬ್ಬರು ಔಟ್, ಮೂವರು ಗ್ರಾಂಡ್​​ ಫಿನಾಲೆಗೆ ಎಂಟ್ರಿ

ಸಾರಾಂಶ

ಬಿಗ್​​ಬಾಸ್​​ ಸೀಸನ್​​ 6 ಗ್ರಾಂಡ್​​ ಫಿನಾಲೆಗೆ ವೇದಿಕೆ ರೆಡಿ! 5 ಸ್ಪರ್ಧಿಗಳಲ್ಲಿ ಇಬ್ಬರು ಸ್ಪರ್ಧಿ ಔಟ್! ಮೂವರು ಸ್ಪರ್ಧಿಗಳ ನಡುವೆ ಮುಂದುವರೆಯಲಿರುವ ಬಿಗ್​ಬಾಸ್​ ಗ್ರಾಂಡ್​​ ಫಿನಾಲೆ. ಹಾಗಾದ್ರೆ ಔಟ್ ಯಾರು? ಫೈನಲ್ ಪ್ರವೇಶಿಸಿದ ಕಂಟೆಸ್ಟೆಂಟ್ ಯಾರು? ಬನ್ನಿ ನೋಡೋಣ..  

ಕನ್ನಡ ಜನಪ್ರಿಯ ಶೋ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್​​ಬಾಸ್​​ ಸೀಸನ್​​ 6 ಗ್ರಾಂಡ್​​ ಫಿನಾಲೆಗೆ ವೇದಿಕೆ ರೆಡಿ ಆಗಿದ್ದು, ನಾಳೆ ಅಂದ್ರೆ ಭಾನುವಾರ ದೊಡ್ಮನೆ ಆಟಕ್ಕೆ ತೆರೆ ಬೀಳಲಿದೆ.

ಈ ಬಾರಿಯ ಬಿಗ್​ಬಾಸ್​​ ರಿಯಾಲಿಟಿ ಶೋ ಕಾರ್ಯಕ್ರಮದ ಟಾಪ್​​ 5 ಸ್ಪರ್ಧಿಗಳಲ್ಲಿ ರೇಡಿಯೋ ಜಾಕಿ ರ‍್ಯಾಪಿಡ್ ರಶ್ಮಿ ಹಾಗೂ ಆಂಡಿ ಬಿಗ್​ಬಾಸ್​ ಮನೆಯಿಂದ ಹೊರ ಬಿದ್ದಿದ್ದಾರೆ. 

ರಾಕೇಶ್‌ ಹೇಳಿದ ಬಿಗ್‌ಬಾಸ್‌ ಕತೆ.. 91 ದಿನಗಳ ಸುದೀರ್ಘ ಪ್ರಯಾಣ

ಗ್ರಾಂಡ್​​ ಫಿನಾಲೆ ವೇಳೆಯೇ ಹೊರಬಿದ್ದಿರುವುದು ರಶ್ಮಿಗೆ ಮತ್ತು ಆಂಡಿ ನಿರಾಸೆ ಮೂಡಿಸಿದ್ದು, ಇಷ್ಟು ದಿನ ಬಿಗ್​ಬಾಸ್​​ ಮನೆಯಲ್ಲಿ ತನ್ನ ನೇರ ಮಾತಿನ ಮೂಲಕ ರ‍್ಯಾಪಿಡ್​​ ರಶ್ಮಿ ಎಲ್ಲರನ್ನು ಸೆಳೆದಿದ್ದರು. 

ಸಿಂಗರ್​ ನವೀನ್​ ಸಜ್ಜು, ನಟಿ ಕವಿತಾ, ಶಶಿ, ರ‍್ಯಾಪಿಡ್​ ರಶ್ಮಿ ಮತ್ತು ಆಂಡಿ ಈ ಬಾರಿಯ ಬಿಗ್​ಬಾಸ್​​ ಸೀಸನ್​​ 6 ಶೋನಲ್ಲಿ ಟಾಪ್​ 5 ಸ್ಪರ್ಧಿಗಳಾಗಿದ್ದರು. ಈ ಪೈಕಿ ಇದೀಗ ರ‍್ಯಾಪಿಡ್ ರಶ್ಮಿ ಮತ್ತು ಆಂಡಿ ಹೊರ ಬಿದ್ದಿದ್ದಾರೆ. 

ಬಿಗ್‌ಬಾಸ್‌ಗೆ ‘ಭಾವಪೂರ್ಣ’ ಶ್ರದ್ಧಾಂಜಲಿ ಸಲ್ಲಿಸಿದ ವೀಕ್ಷಕರು!

ಇನ್ನುಳಿದ ಸ್ಪರ್ಧಿಗಳಾದ ನವೀನ್​ ಸಜ್ಜು, ನಟಿ ಕವಿತಾ, ಶಶಿ ನಾಳೆ [ಭಾನುವಾರ] ನಡೆಯುವ ಗ್ರಾಂಡ್​​ ಫಿನಾಲೆಗೆ ಎಂಟ್ರಿ ಪಡೆದುಕೊಳ್ಳಲಿದ್ದು, ಇದರಲ್ಲಿ ಗೆದ್ದವರು 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿ ಮುಡಿಗೇರಿಸಿಕೊಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Yash: ಬಸ್ ಚಾಲಕನ ಮಗ ಇಂದು ಭಾರತದ ರಾಕಿ ಭಾಯ್; ಮೋದಿ-ಯಶ್ ಜೀವನಕ್ಕಿದೆ ಆ ಒಂದು ಕನೆಕ್ಷನ್!
‘Believer’ ಹಾಡು ಬದಲಿಸಿದ ಬದುಕು: ಹೇಮಲತಾ ಈಗ ಕನ್ನಡದ ಬಿಗ್‌ ಬಾಸ್‌ ಮನೆಗೆ ಹೋಗ್ತಾರಾ?