ಕಿರುತೆರೆ ನಟಿ ಬಿಚ್ಚಿಟ್ಟ ಬ್ಯಾಡ್‌ ರಿಲೇಷನ್‌ಶಿಪ್ ಕಥೆ!

Published : Jan 27, 2019, 01:05 PM IST
ಕಿರುತೆರೆ ನಟಿ ಬಿಚ್ಚಿಟ್ಟ ಬ್ಯಾಡ್‌ ರಿಲೇಷನ್‌ಶಿಪ್ ಕಥೆ!

ಸಾರಾಂಶ

ಬ್ಯಾಡ್ ರಿಲೇಷನ್‌ಶಿಪ್‌ಯಿಂದ ಹೊರ ಬಂದರೆ ಜೀವನದಲ್ಲಿ ಎಲ್ಲೋ ಹೋಗಬಹುದು ಎಂಬುವುದಕ್ಕೆ ಇದೇ ಸಾಕ್ಷಿ. ಕಿರುತೆರೆ ಖ್ಯಾತ ನಟಿ ಮೋನಾ ವಾಸು "ಮಿಲ್ಲಿ" "ರಾಧಾ ಕಿ ಭೇಟಿಯಾನ್‌ ಕುಚ್ ಕರ್ ದಿಖಾಹೆಂಗೇ" ಹಾಗೂ "ಯುಧಾ" ಧಾರವಾಹಿಯಲ್ಲಿ ನಟಿಸಿದ್ದಾರೆ.

ಕಿರುತೆರೆ ಮೂಲಕ ಬಾಲಿವುಡ್‌ ಎಂಟ್ರಿ ಕೊಡಬೇಕೆಂದು ಮನಸ್ಸು ಮಾಡಿದ ನಟಿಗೆ ಜೀವನ ತಡೆದದ್ದು ಬ್ಯಾಡ್ ರಿಲೇಷನ್‌ಶಿಪ್. '2014 ರಿಂದ 2015 ವರೆಗೂ ಕೆಟ್ಟದನ್ನೇ ಅನುಭವಿಸಿದ್ದೀನಿ. ಆ ಸಮಯದಲ್ಲಿ ಹಣಕಾಸಿನ ತೊಂದರೆ ಹೆಚ್ಚಾಗಿತ್ತು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿದು ಹೋಗಿದ್ದೆ. ಇದರಿಂದ ಹೊರಗೆ ಬರಲು ಸಹಾಯ ಮಾಡಿದ್ದು ಧ್ಯಾನ' ಎಂದು ಹಂಚಿಕೊಂಡಿದ್ದರು.

ಅಷ್ಟಕ್ಕೂ ಮೋನಾಳ ಸಂಬಂಧ ಇದ್ದದ್ದು ನಟನೊಂದಿಗೆ. ಆದರೆ ಅವರ ಹೆಸರು ಹಂಚಿಕೊಳ್ಳಲು ಇಷ್ಟಪಡದ ಮೋನಾ " ಇದರಿಂದ 5 ವರ್ಷಗಳ ಕಾಲ ಕಷ್ಟ ಪಟ್ಟಿದ್ದೇನೆ. ಕೆಲಸದ ಕಡೆ ಗಮನ ಕಡಿಮೆ ಆಗಿತ್ತು. ಕೆಲಸಗಳು ಕೈ ಬಿಟ್ಟವು. ಅದರಲ್ಲೂ ಆ ವ್ಯಕ್ತಿ ಹಾಗೂ ನಾನು ಒಂದೇ ಇಂಡಸ್ಟ್ರಿಯವರಾದ ಕಾರಣ ಹೆಣ್ಣಾಗಿ ನನಗೆ ತೊಂದರೆ ಹೆಚ್ಚಾಗಿತ್ತು" ಎಂದು ಮೋನಾ ಹೇಳಿದ್ದಾರೆ.

ಇದರಿಂದ ಹೊರಬರಲು ಬಹಳ ಕಷ್ಟಪಟ್ಟ ಮೋನಾ ನಾನು ಮತ್ತೊಮ್ಮೆ ಪ್ರೀತಿ ಮಾಡುವುದಿಲ್ಲ. ಗಂಡಸರ ಮೇಲೆ ನನಗೆ ನಂಬಿಕೆ ಹೋಗಿದೆ ಎಂದರು. ಸದ್ಯ ಮೋನಾ ಕಿರುತೆರೆ ಧಾರವಾಹಿ "ವಿಕ್ರಂ ಬೆಟ್ಟಾ ಕಿ ರಹಸ್ಯ ಗೀತಾ" ದಲ್ಲಿ ನಟಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?