'ಬೌನ್ಸರ್ & ಬಾಡಿಗಾರ್ಡ್‌ಗಳಂತೆ ಇದ್ದೆವು'.. ಟಾಕ್ಸಿಕ್ ಶೂಟಿಂಗ್‌ ಬಗ್ಗೆ ಮಾತನ್ನಾಡುತ್ತ ಯಶ್ ಹೀಗೆ ಹೇಳಿದ್ದೇಕೆ?

Published : Aug 14, 2026, 04:50 PM IST
Yash

ಸಾರಾಂಶ

ಕಿಯಾರಾ ಅಡ್ವಾಣಿ ಅವರ ಡೆಡಿಕೇಷನ್ ಮತ್ತು ಯಶ್ ಅವರ ಈ ಕಾಳಜಿಯ ಕಥೆಗಳು ಈಗ ಸಿನಿಮಾದ ಮೇಲಿನ ಕುತೂಹಲವನ್ನು ನೂರು ಪಟ್ಟು ಹೆಚ್ಚಿಸಿವೆ. ಸದ್ಯಕ್ಕಂತೂ ಕಿಯಾರಾ, ‘ಬಾಡಿಗಾರ್ಡ್’ ಗೀತೂ ಮೋಹನ್‌ದಾಸ್ ಕಥೆಗಳು, ರಾಕಿಂಗ್ ಸ್ಟಾರ್ ಅಸಲಿ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದು, ಎಲ್ಲವೂ ವೈರಲ್ ಆಗುತ್ತಿವೆ!

Yash talk about Kiara Advani: ಕಿಯಾರಾ ಡೆಡಿಕೇಷನ್ ಕಂಡು ಬೆಚ್ಚಿಬಿದ್ದ ಟಾಕ್ಸಿಕ್ ಸಾಮ್ರಾಜ್ಯ ಬೆಚ್ಚಿಬಿದ್ದಿತ್ತು!

'ಕೆಜಿಎಫ್' ಸರಣಿಯ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಈಗ 'ಟಾಕ್ಸಿಕ್' (Toxic: A Fairy Tale for Grown-Ups) ಎಂಬ ವಿಷಪೂರಿತ ಮಾಯಾಲೋಕದೊಂದಿಗೆ ಮತ್ತೆ ಅಖಾಡಕ್ಕಿಳಿದಿದ್ದಾರೆ. ಟಾಕ್ಸಿಕ್ ಸಿನಿಮಾ ಇಡೀ ಜಗತ್ತಿಗೇ ನಿರೀಕ್ಷೆ ಹುಟ್ಟಿಸಿದೆ. ಸದ್ಯ ಈ ಸಿನಿಮಾದ ಪ್ರಚಾರಕಾರ್ಯದಲ್ಲಿ ನಟ ಯಶ್ ಹಾಗೂ ಟಾಕ್ಸಿಕ್ ಚಿತ್ರತಂಡ ಭಾಗಿಯಾಗಿದೆ. ಆದರೆ, ಈ ಸ್ಟೋರಿ ಸುದ್ದಿಯಲ್ಲಿರುವ ಸಮಗತಿ ಎಂದರೆ, ಸಿನಿಮಾದ ಬರೀ ಆಕ್ಷನ್ ಅಥವಾ ಗನ್ ಸೌಂಡ್ ಅಲ್ಲ; ಬದಲಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರ ಅದ್ಭುತ ವೃತ್ತಿಪರತೆ ಮತ್ತು ಆ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಮಾತನ್ನಾಡಿದ ಯಶ್ ಅವರ ಮಾನವೀಯತೆ!

ಬಾಕ್ಸ್ ಆಫೀಸ್ ಸುಲ್ತಾನನ ಸೆಟ್‌ನಲ್ಲಿ 'ಗರ್ಭಿಣಿ' ನಟಿಯ ಸಾಹಸ!

ಇತ್ತೀಚೆಗೆ ನಟ ಯಶ್ ಅವರು 'ಆಪ್ ಕಿ ಅದಾಲತ್'(Aap ki Adalat) ಚೇರ್‌ನಲ್ಲಿ ಕುಳಿತ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಇತ್ತೀಚೆಗೆ ನಡೆದ 'ಟಾಕ್ಸಿಕ್' ಆಡಿಯೋ ಲಾಂಚ್‌, ಹಾಗೂ ಆಪ್‌ ಕಿ ಅದಾಲತ್‌ ವೇದಿಕೆಯಲ್ಲಿ ನಟ ಯಶ್ ಅವರು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದಿರುವ ಕೆಲವು ಸೀಕ್ರೆಟ್ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅದು, ಈ ಸಿನಿಮಾದ ಚಿತ್ರೀಕರಣ ನಡೆಯುವಾಗ ನಾಯಕಿ ಕಿಯಾರಾ ಅಡ್ವಾನಿ ಗರ್ಭಿಣಿಯಾಗಿದ್ದರು ಎಂಬಸಮಗತಿ.

ಹೌದು, ಒಂದು ಕಡೆ ಗ್ಯಾಂಗ್‌ಸ್ಟರ್‌ಗಳ ನಡುವಿನ ಯುದ್ಧ, ಸತತ ಮಳೆ, ಕಠಿಣ ಆಕ್ಷನ್ ಸನ್ನಿವೇಶಗಳು.. ಇವೆಲ್ಲದರ ನಡುವೆ ಕಿಯಾರಾ ತಮ್ಮ ದೈಹಿಕ ಸ್ಥಿತಿಯನ್ನು ಲೆಕ್ಕಿಸದೆ ಕ್ಯಾಮೆರಾ ಮುಂದೆ ನಿಂತಿದ್ದರು. ಕಿಯಾರಾ ಅವರ ಈ ಬದ್ಧತೆ ಕಂಡು ಸ್ವತಃ ಯಶ್ ಅವರೇ ಫಿದಾ ಆಗಿದ್ದಾರೆ.

ಯಶ್ ಮತ್ತು ಗೀತು ಮೋಹನ್‌ದಾಸ್: ಸೆಟ್‌ನ ಹೊಸ 'ಬೌನ್ಸರ್‌ಗಳು'!

ಕಿಯಾರಾ ಅವರು ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆಯೇ, ಸೆಟ್‌ನಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಯಶ್ ಈ ಬಗ್ಗೆ ಹಾಸ್ಯ ಚಟಾಕಿ ಹಾರಿಸುತ್ತಾ, "ನಾವು ಆ ಸಮಯದಲ್ಲಿ ಬರಿ ನಟ ಅಥವಾ ನಿರ್ದೇಶಕರಾಗಿರಲಿಲ್ಲ, ಬದಲಾಗಿ ಕಿಯಾರಾ ಅವರಿಗೆ ಬೌನ್ಸರ್ ಮತ್ತು ಬಾಡಿಗಾರ್ಡ್‌ಗಳಂತೆ ಕೆಲಸ ಮಾಡಿದೆವು," ಎಂದಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಯಶ್ ಇಬ್ಬರೂ ಸೇರಿ ಕಿಯಾರಾ ಅವರ ಸುರಕ್ಷತೆಯ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದರು. ಆಕ್ಷನ್ ಸೀನ್‌ಗಳಲ್ಲಂತೂ ಕಿಯಾರಾಗೆ ಸಣ್ಣದೊಂದು ಗಾಯವಾಗದಂತೆ ಎಚ್ಚರ ವಹಿಸಲಾಗಿತ್ತು.

'ತಬಾಹಿ' ಎಬ್ಬಿಸಿದ ಟ್ರೋಲ್ ಬಿರುಗಾಳಿಗೆ ಯಶ್ ಕೊಟ್ಟ ಉತ್ತರವೇನು?

ಸಿನಿಮಾದ 'ತಬಾಹಿ' ಹಾಡು ಬಿಡುಗಡೆಯಾದಾಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆದಿತ್ತು. ಯಶ್ ಮತ್ತು ಕಿಯಾರಾ ನಡುವಿನ ಕೆಮಿಸ್ಟ್ರಿ ನೋಡಿ ಕೆಲವರು ಟ್ರೋಲ್ ಮಾಡಿದ್ದರು. ಆದರೆ, ಯಶ್ ಮಾತ್ರ ಕಿಯಾರಾ ಪರವಾಗಿ ಬ್ಯಾಟ್ ಬೀಸಿದ್ದಾರೆ. "ನಟನೆಯಲ್ಲಿ ಪಾತ್ರಕ್ಕೆ ಏನು ಬೇಕೋ ಅದನ್ನು ಮಾಡುವುದು ಕಲೆ. ಕಿಯಾರಾ ಅಂತಹ ಸವಾಲಿನ ಸಂದರ್ಭದಲ್ಲೂ ಉತ್ತಮವಾಗಿ ಅಭಿನಯಿಸಿದ್ದಾರೆ," ಎನ್ನುವ ಮೂಲಕ ಟ್ರೋಲರ್‌ಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬಲಿಷ್ಠ ತಾರಾಬಳಗದ 'ಟಾಕ್ಸಿಕ್' ಪಯಣ!

ಇನ್ನು ಟ್ರೇಲರ್‌ನಲ್ಲಿ ಕಂಡಂತೆ, ಇದು ಬರೀ ಸಿನಿಮಾ ಅಲ್ಲ, ಇದೊಂದು ವಿಷಕಾರಿ ಜಗತ್ತಿನ ಕಥೆ. ಇಲ್ಲಿ ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರಂತಹ ದೈತ್ಯ ಪ್ರತಿಭೆಗಳಿದ್ದಾರೆ. ಗೋವಾದ ಗ್ಯಾಂಗ್‌ಸ್ಟರ್ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಅಧಿಕಾರ ಮತ್ತು ಸಂಬಂಧಗಳ ನಡುವಿನ ಸಂಘರ್ಷ ಎದ್ದುಕಾಣುತ್ತಿದೆ. ಯಶ್ ಕೇವಲ ನಟನಾಗಿ ಮಾತ್ರವಲ್ಲದೆ, ಚಿತ್ರದ ಸ್ಕ್ರಿಪ್ಟ್ ಮತ್ತು ನಿರ್ಮಾಣದಲ್ಲೂ ತೊಡಗಿಸಿಕೊಂಡು ಪಕ್ಕಾ 'ಪ್ಯಾನ್ ವರ್ಲ್ಡ್' ಪ್ರಾಜೆಕ್ಟ್ ಸಿದ್ಧಪಡಿಸಿದ್ದಾರೆ.

ಆಗಸ್ಟ್ 26: ರಾಕಿ ಭಾಯ್ ದರ್ಬಾರ್ ರೀ-ಲೋಡೆಡ್!

ಹಲವು ಬಾರಿ ಡೇಟ್ ಬದಲಿಸಿಕೊಂಡು ಬಂದ 'ಟಾಕ್ಸಿಕ್' ಈಗ ಅಂತಿಮವಾಗಿ 2026ರ ಆಗಸ್ಟ್ 26ಕ್ಕೆ ಲಾಕ್ ಆಗಿದೆ. ಕನ್ನಡದ ಜೊತೆಗೆ ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ಈ ಸಿನಿಮಾ, ಯಶ್ ಅವರ ಕೆರಿಯರ್‌ನಲ್ಲಿ ಮತ್ತೊಂದು ಮೈಲಿಗಲ್ಲಾಗುವುದು ಗ್ಯಾರಂಟಿ ಎಂದು ಇಡೀ ಜಗತ್ತು ನಂಬಿದೆ. ಅದೇ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ.

ಕಿಯಾರಾ ಅಡ್ವಾಣಿ ಅವರ ಡೆಡಿಕೇಷನ್ ಮತ್ತು ಯಶ್ ಅವರ ಈ ಕಾಳಜಿಯ ಕಥೆಗಳು ಈಗ ಸಿನಿಮಾದ ಮೇಲಿನ ಕುತೂಹಲವನ್ನು ನೂರು ಪಟ್ಟು ಹೆಚ್ಚಿಸಿವೆ. ಸದ್ಯಕ್ಕಂತೂ ಕಿಯಾರಾ ಅವರನ್ನು 'ಬಾಡಿಗಾರ್ಡ್' ರೀತಿ ಕಾದ ರಾಕಿಂಗ್ ಸ್ಟಾರ್ ಅಸಲಿ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Exclusive: ಸುಂದರ್‌ ರಾಜ್‌ 75ಕ್ಕೆ 250: ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ
ಅಭಿಮಾನಿಯ ಕಟ್ಟ ಕಡೆಯ ಆಸೆಯನ್ನೇ ಈಡೇರಿಸದ ನಟ ಯಶ್​: ಆದರೆ ಕೊಟ್ಟ ಕಾರಣಕ್ಕೆ ದೇಶವೇ ಫಿದಾ