ಐ ಲವ್ ಯೂ: ಪ್ರೇಕ್ಷಕರ ಮನಸೋಕಿದ ಸಂಬಂಧದ ಸೂಕ್ಷ್ಮ ಕಥೆ!

Published : Jun 27, 2019, 03:57 PM ISTUpdated : Jun 27, 2019, 03:59 PM IST
ಐ ಲವ್ ಯೂ: ಪ್ರೇಕ್ಷಕರ ಮನಸೋಕಿದ ಸಂಬಂಧದ ಸೂಕ್ಷ್ಮ ಕಥೆ!

ಸಾರಾಂಶ

ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿಯೇ ಕಲಾತ್ಮಕ ಅಂಶಗಳನ್ನೂ ಪ್ರೇಕ್ಷಕರತ್ತ ದಾಟಿಸುವ ಕಲೆ ನಿರ್ದೇಶಕ ಆರ್. ಚಂದ್ರು ಅವರಿಗೆ ಕರಗತ. ಈ ಕಲೆಯ ಕಾರಣದಿಂದಲೇ ಪಕ್ಕಾ ಲವ್ ಸಬ್ಜೆಕ್ಟ್‌ಗಳ ಮೂಲಕವೇ ಯುವ ಪಡೆಯೊಂದಿಗೆ ಫ್ಯಾಮಿಲಿ ಪ್ರೇಕ್ಷಕರನ್ನೂ ಹಿಡಿದಿಟ್ಟುಕೊಳ್ಳುವುದು ಅವರಿಂದ ಸಾಧ್ಯವಾಗಿದೆ.  

ಆರಂಭದಲ್ಲಿ ಬೇರೆಯದ್ದೇ ರೀತಿಯಲ್ಲಿ ಸೌಂಡ್ ಮಾಡಿದ್ದ ಐ ಲವ್ ಯೂ ಚಿತ್ರದ ಮೂಲಕವಂತೂ ಫ್ಯಾಮಿಲಿ ಆಡಿಯನ್ಸ್ ಮತ್ತು ಆರ್ ಚಂದ್ರು ಅವರ ನಡುವಿನ ಬಂಧ ಮತ್ತಷ್ಟು ಆಪ್ತವಾಗಿದೆ.

ಐ ಲವ್ ಯೂ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಒಟ್ಟಾಗಿರೋ ಎರಡನೇ ಚಿತ್ರ. ಈ ಜೋಡಿಯ ಎರಡನೇ ಪ್ರಯತ್ನ ಎಂಥಾ ಕಮಾಲ್ ಸೃಷ್ಟಿಸಲಿದೆ ಎಂಬ ಕುತೂಹಲ ಚಿತ್ರರಂಗದಲ್ಲಿಯೇ ಇತ್ತು. ಆದರೀಗ ಈ ಜೋಡಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೈಲಿಗಲ್ಲಾಗುವ ರೀತಿ ದಾಖಲೆಗೆ ರೂವಾರಿಯಾಗಿದೆ.

ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

ಉಪ್ಪಿ ವೃತ್ತಿ ಬದುಕಿನ ಈ ವರೆಗಿನ ಅಷ್ಟೂ ದಾಖಲೆಗಳನ್ನು ಬ್ರೇಕ್ ಮಾಡುವಂಥ ಕಲೆಕ್ಷನ್‍ನೊಂದಿಗೆ ಚಂದ್ರು ಬತ್ತಳಿಕೆಯ ಅಪರೂಪದ ಚಿತ್ರವಾಗಿ ಐ ಲವ್ ಯೂ ಸಾಗಿದೆ.

ಯಶಸ್ಸಿಗೆ ಕಾರಣವಾಗಿರೋದು ಕಥೆಯ ಸೊಗಸು ಮತ್ತು ನಿರೂಪಣೆಯ ಕುಸುರಿ. ಆರ್ ಚಂದ್ರು ಅವರಿಲ್ಲಿ ಪ್ರೀತಿ ಪ್ರೇಮ ಮತ್ತು ಮೋಹಗಳ ಕಥೆಯನ್ನು ಇದೀಗ ಸವಕಲಾಗುತ್ತಿರೋ ಸಂಬಂಧಗಳೊಂದಿಗೆ ನಾಜೂಕಿನಿಂದಲೇ ಬೆಸೆದಿದ್ದಾರೆ. ಎಲ್ಲ ಸಂಬಂಧಗಳೂ ಯಾಂತ್ರಿಕವಾಗಿರೋ ಈ ಕಾಲ ಮಾನದಲ್ಲಿ ಅದರ ಮಹತ್ವವೇನೆಂಬುದನ್ನು ಐ ಲವ್ ಯೂ ಮೂಲಕವೇ ಅವರು ಸಾರಿದ್ದಾರೆ.

ನೂರನೇ ದಿನದತ್ತ ಐ ಲವ್ ಯೂ ಯಾನ

ಪ್ರತಿಯೊಬ್ಬರಿಗೂ ನಾಟುವಂಥಾ ಪರಿಣಾಮಕಾರಿ ಸಂದೇಶವನ್ನೂ ಕೊಟ್ಟಿದ್ದಾರೆ. ಭರ್ಜರಿ ಎಂಟರ್ ಟೈನ್ಮೆಂಟ್ ಜೊತೆ ಬದುಕಿನ ವಾಸ್ತವದ ಮುಖಾಮುಖಿ ಮತ್ತು ಎಲ್ಲರ ಬದುಕಿಗೂ ಹತ್ತಿರವಾದ ಕಥಾ ಹಂದರದೊಂದಿಗೆ ಐ ಲವ್ ಯೂ ಚಿತ್ರ ಪ್ರೇಕ್ಷಕರ ಮನ ಸೋಕಿದೆ. ಆದ್ದರಿಂದಲೇ ಯುವ ಸಮೂಹದ ಜೊತೆಗೇ ಎಲ್ಲ ವರ್ಗದ ಪ್ರೇಕ್ಷಕರೂ ಐ ಲವ್ ಯೂ ಮೇಲೆ ಮೋಹಿತರಾಗಿದ್ದಾರೆ.

ಫ್ಯಾಮಿಲಿ ಪ್ರೇಕ್ಷಕರ ದಂಡೇ ರಾಜ್ಯಾದ್ಯಂತ ಥೇಟರಿನತ್ತ ಹರಿದು ಬರುತ್ತಿದೆ. ಇದುವೇ ಐ ಲವ್ ಯೂ ಚಿತ್ರದ ಯಶಸ್ಸಿನ ನಾಗಾಲೋಟಕ್ಕೆ ಹೊಸ ಕಸುವು ತುಂಬಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?