ದುಬಾರಿ ಬೈಕ್‌ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !

By Web Desk  |  First Published Jun 27, 2019, 10:59 AM IST

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಬಹು ದಿನಗಳ ಕನಸು ನನಸಾಗಿದೆ. ದುಬಾರಿ ಬೈಕ್‌ ಖರೀದಿ ಮಾಡುವುದು ಅವರ ಆಸೆಯಾಗಿತ್ತು. ಇದೀಗ ಹೊಸ ಅತಿಥಿಯನ್ನು ಅವರ ಮನೆಗೆ ಬರ ಮಾಡಿಕೊಂಡಿರುವ ಬಗ್ಗೆ ಮನೋರಂಜನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.


'ಚೀಲಂ' ಹಾಗೂ 'ಪ್ರಾರಂಭ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಜೂ. ಕ್ರೇಜಿಸ್ಟಾರ್ ಮನೋರಂಜನ್‌ ಬಹುದಿನಗಳ ಆಸೆ ನೆರೆವೇರಿದ್ದಾಗಿ ಈ ಬಗ್ಗೆ ಅಭಿಮಾನಿಗಳ ಜೊತೆ ಟ್ಟಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

ಅಂದ್ಹಾಗೆ ಯಾವುದಪ್ಪಾ ಈ ದುಬಾರಿ ಬೈಕ್ ಅಂತಾನಾ? ಅದು 15 ಲಕ್ಷ ರು. ಬೆಲೆಯ 'ಡುಕಾಟಿ 959' ಬೈಕ್. 955 ಸಿಸಿ ಹೊಂದಿರುವ ಡುಕಾಟಿ ಬೈಕ್‌ 14 ಕಿಮೀ. ಮೈಲೇಜ್‌ ಕೊಡುತ್ತದೆ.

Tap to resize

Latest Videos

undefined

'ಶಾಲಾದಿನಗಳಿಂದ ಒಂದು ಸೂಪರ್ ಬೈಕ್‌ ಅಥವಾ ಬಿಗ್‌ಬೈಕ್‌ ಕೊಳ್ಳಬೇಕು ಎಂಬುದು ನನ್ನ ಆಸೆಯಾಗಿತ್ತು. ಆಗಿನ ಕಾಲದಲ್ಲಿ ಅಂತಹದನ್ನು ಕಾಣುವುದೇ ಅಪರೋಪವಾಗಿತ್ತು. ಈಗ ನನ್ನ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಅದುವೇ ನನ್ನ ಡ್ರೀಮ್ ಬೈಕ್ ಡುಕಾಟಿ 969' ಎಂದು ಫೋಟೋದೊಂದಿಗೆ ಮನೋರಂಜನ್ ಮಾಹಿತಿ ಹಂಚಿಕೊಂಡಿದ್ದಾರೆ.

 

I always had this wish to ride and own a Superbike or Bigbike right from my schooling, though it was rare to even find them around.

And today there is one new addition to my family,
And that's my Dream bike Ducati959.❤ pic.twitter.com/R3moNuMseR

— Manoranjan R (@ActorManoranjan)
click me!