ರವಿಚಂದ್ರನ್‌ ಪುತ್ರ ವಿಕ್ರಮ್‌ ಚಿತ್ರದ ಫಸ್ಟ್‌ಲುಕ್‌!

By Web Desk  |  First Published Aug 8, 2019, 9:09 AM IST

ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಮ್‌ ರವಿಚಂದ್ರನ್‌ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ‘ತ್ರಿವಿಕ್ರಮ’ ಚಿತ್ರದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಪುತ್ರನ ಸಿನಿಮಾದ ಫಸ್ಟ್‌ ಲುಕ್‌ ಅನ್ನು ಬುಧವಾರ ಬೆಳಗ್ಗೆ ನಟ ರವಿಚಂದ್ರನ್‌ ಲಾಂಚ್‌ ಮಾಡಿದರು. 


ಸಹನಾ ಮೂರ್ತಿ ನಿರ್ದೇಶನದ ಚಿತ್ರವಿದು. ವಿಕ್ರಂ ಅವರಿಗಿಲ್ಲಿ ಜೋಡಿಯಾಗಿ ಆಕಾಂಕ್ಷ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈ ಮೂಲದ ಆಕ್ಷಾಂಕ್ಷ ಶರ್ಮಾ ಮಾಡೆಲಿಂಗ್‌ ಜಗತ್ತಿನಲ್ಲಿ ಹೆಸರು ಮಾಡಿದ್ದು, ಟಾಲಿವುಡ್‌ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟವರು. ಇದೀಗ ‘ತ್ರಿವಿಕ್ರಮ’ ಮೂಲಕ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ ನಿರ್ದೇಶಕ ಸಹನಾಮೂರ್ತಿ.

ದುಬಾರಿ ಬೈಕ್‌ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !

Tap to resize

Latest Videos

undefined

ವಿಕ್ರಮ್‌ ಹಾಗೂ ಆಕಾಂಕ್ಷ ಶರ್ಮಾ ಅವರೊಂದಿಗೆ ಚಿತ್ರದಲ್ಲಿ ಸಾಧು ಕೋಕಿಲ, ಆದಿ ಲೋಕೇಶ್‌, ಸುಚೇಂದ್ರ ಪ್ರಸಾದ್‌, ಚಿಕ್ಕಣ್ಣ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಇದೆ. ಆಗಸ್ಟ್‌ 9 ರಿಂದ ಚಿತ್ರೀಕರಣ ಶುರುವಾಗುತ್ತಿದೆ. ಪುನೀತ್‌ ರಾಜ್‌ ಕುಮಾರ್‌ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡುತ್ತಿದ್ದಾರೆ. ಸೋಮಣ್ಣ ಈ ಚಿತ್ರದ ನಿರ್ಮಾಪಕ. ಅರ್ಜುನ್‌ ಜನ್ಯಾ ಸಂಗೀತವಿದೆ. ಸಂತೋಷ್‌ ರೈ ಪಾತಾಜೆ ಕ್ಯಾಮರಾ ಹಿಡಿಯುತ್ತಿದ್ದಾರೆ.

ರವಿಚಂದ್ರನ್ ಮಗಳ ಮದುವೆ Exclusive ಫೋಟೋಸ್!

‘ಇದೊಂದು ಶುದ್ಧ ಪ್ರೇಮ ಕತೆಯ ಕಮರ್ಷಿಯಲ್‌ ಚಿತ್ರ. ಈಗಿನ ಟ್ರೆಂಡ್‌ಗೆ ತಕ್ಕಂತೆ ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌, ರೊಮಾನ್ಸ್‌ ಎಲ್ಲಾ ರೀತಿಯ ಮವರಂಜನೆಯೂ ಇರುತ್ತದೆ. ವಿಕ್ರಂ ಇದೇ ಮೊದಲು ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿರುವುದರಿಂದ ಅವರನ್ನು ಜೋಷ್‌ ಆಗಿ ತೋರಿಸುವ ಸವಾಲು ಕೂಡ ನನ್ನ ಮುಂದಿದೆ. ಕತೆ ಅದಕ್ಕೆ ತಕ್ಕಂತೆಯೇ ಇದೆ. ಕಥಾ ನಾಯಕ ಒಬ್ಬ ಮಧ್ಯಮ ವರ್ಗದ ಹುಡುಗ. ಆತನ ಬದುಕಿನಲ್ಲಿರುವ ಎದುರಾಗುವ ಸವಾಲುಗಳು, ಪ್ರೀತಿ-ಪ್ರೇಮ, ಇತ್ಯಾದಿಗಳ ಮೂಲಕ ಆತ ತಾನಂದು ಕೊಂಡಿದ್ದನ್ನು ಹೇಗೆ ಗೆಲ್ಲುತ್ತಾನೆ ಎನ್ನುವುದನ್ನು ಅವರ ಪಾತ್ರ ಹೇಳುತ್ತದೆ’ ಎನ್ನುತ್ತಾರೆ ನಿರ್ದೇಶಕ ಸಹನಾ ಮೂರ್ತಿ.

click me!