
ಕೇವಲ 12 ತಿಂಗಳಿನಲ್ಲಿ ಮೂರು ಸಿನಿಮಾ ಮಾಡಿ, ಆ ಮೂರೂ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಕಂಡು, ಕೋಟಿ ಕೋಟಿ ರುಪಾಯಿ ಹಣಗಳಿಸುವುದು ಕಡಿಮೆ ಮಾತಲ್ಲ. ಇದು ರಣವೀರ್ ಸಿಂಗ್ ಎನ್ನುವ ಪ್ರತಿಭಾವಂತ ನಟನ ಪಾಲಿಗೆ ಸಾಧ್ಯವಾಗಿದೆ.
ರಣವೀರ್ ಕೈಯಲ್ಲಿ ದೀಪಿಕಾ ಚಪ್ಪಲಿ: ಏನಿದು ಫೋಟೋ ಕಥೆ?
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’, ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಬಾ’, ಜೋಯಾ ಅಕ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಈ ಮೂರೂ ಚಿತ್ರಗಳು ರಣವೀರ್ ಪಾಲಿಗೆ ಸೂಪರ್ ಹಿಟ್ ಖ್ಯಾತಿ ಕೊಟ್ಟ ಚಿತ್ರಗಳು. ಇವುಗಳ ಒಟ್ಟು ಕಲೆಕ್ಷನ್ 800 ಕೋಟಿ ರುಪಾಯಿ. ಸ್ವತಃ ರಣವೀರ್‌ಗೂ ಈ ಬಗ್ಗೆ ತುಂಬಾ ಸಂತೋಷವೂ ಇದೆ. ಅದನ್ನವರು
ಹೇಳಿಕೊಂಡ ರೀತಿ ಇದು. ‘ಸಿನಿಮಾ ಗೆದ್ದು, ನಿರ್ಮಾಪಕ ಖುಷಿಯಾಗುವುದು ನನಗೂ ಖುಷಿ ಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಚಿತ್ರಗಳು ಗೆಲ್ಲಬೇಕು. ಬಾಲಿವುಡ್ ದೊಡ್ಡದಾಗಿ ಬೆಳೆಯಬೇಕು. ಐ ಲವ್ ಹಿಂದಿ ಫಿಲ್ಮ್, ಐ ಲವ್ ಇಂಡಸ್ಟ್ರೀ, ನಾನು ಇಡೀ ಇಂಡಸ್ಟ್ರಿಯ ನಾಯಕತ್ವ ವಹಿಸಲು ತಯಾರಿದ್ದೇನೆ. ಬಾಲಿವುಡ್ ಅತಿ ಎತ್ತರಕ್ಕೆ ಬೆಳೆಯಬೇಕು ಎಂಬುದೇ ನನ್ನ ಆಸೆ’ ಎಂದು ಕೋಟಿ ಕೋಟಿ ಸರದಾರ ಸಿಂಗ್ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.