
ಆಗಸ್ಟ್ 15 ರಂದು ಕತಾರ್‌ನಲ್ಲಿ ನಡೆದ ಅದ್ಧೂರಿ ಪ್ರಶಸ್ತಿ ಸಮಾರಂಭದಲ್ಲಿ 8 ಅವಾರ್ಡ್‌ಗಳು ಬಹುಕೋಟಿ ಸಿನಿಮಾ 'ಕೆಜಿಎಫ್' ಪಾಲಾಗಿದ್ದು, 3 ಅವಾರ್ಡ್‌ಗಳು 'ಅಯ್ಯೋಗ' ಚಿತ್ರಕ್ಕೆ, 3 ಟಗರು ಚಿತ್ರಕ್ಕೆ ಹಾಗೂ 1 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಪಾಲಾಗಿದೆ.
ಪ್ರಶಸ್ತಿ ಸಿಕ್ಕ ಖುಷಿಯಲ್ಲಿರುವಾಗಲೇ ಇನ್ನೊಂದು ಖ್ಯಾತೆ ಶುರುವಾಗಿದೆ. ದೇಶದಾದ್ಯಂತ ತೆರೆ ಕಂಡು ಯಶಸ್ಸು ಗಳಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಟಗರು' ಚಿತ್ರಕ್ಕೆ ಕೇವಲ 3 ಪ್ರಶಸ್ತಿ ಬಂದಿರುವುದಕ್ಕೆ ನಟ ಹಾಗೂ ನಿರ್ದೇಶಕ ರಘುರಾಮ್ ಸೈಮಾ ಅವಾರ್ಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
SIIMA Awards 2019 ಗೆದ್ದ ಕನ್ನಡ ತಾರೆಯರ ಪಟ್ಟಿ!
'#Award's ಪಡೆದುಕೊಳ್ಳೋದು ಸಂಸ್ಕಾರ. ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು @siims ಅವರ ಪಕ್ಷಪಾತ ನಿರ್ಧಾರ. #Tagaru ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.