ರಾಕಿಂಗ್ ಸ್ಟಾರ್ ಪುರಿ ಜಗನ್ನಾಥ್ ಸಿನಿಮಾಗೆ ನೋ ಎಂದಿದ್ದೇಕೆ?

Published : Aug 19, 2019, 10:15 AM IST
ರಾಕಿಂಗ್ ಸ್ಟಾರ್ ಪುರಿ ಜಗನ್ನಾಥ್ ಸಿನಿಮಾಗೆ ನೋ ಎಂದಿದ್ದೇಕೆ?

ಸಾರಾಂಶ

‘ಇಸ್ಮಾರ್ಟ್ ಶಂಕರ್’ ಸಿನಿಮಾ ಖ್ಯಾತಿಯ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಬೇಕಾಗಿತ್ತು. ಆ ಚಿತ್ರದ ಕತೆಯನ್ನು ಪುರಿ ಜಗನ್ನಾಥ್, ಯಶ್‌ಗೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಚಿತ್ರವನ್ನು ಯಶ್ ತಿರಸ್ಕರಿಸಿದ್ದಾರೆ.

ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

ಯಶ್ ತಿರಸ್ಕರಿಸಿದ ಆ ಚಿತ್ರವನ್ನು ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಜತೆಗೆ ಪುರಿ ಜಗನ್ನಾಥ್ ಸಿನಿಮಾ ಮಾಡಲಿದ್ದಾರೆಂದಾಗ ಟಾಲಿವುಡ್‌ನಲ್ಲಿ ಹೆಚ್ಚು ಗಾಸಿಪ್ ಆಗಿದ್ದು ‘ಜನ ಮನ ಗಣ’ ಚಿತ್ರ. ಕೊನೆಗೆ
ಅದೆನಾಯ್ತೋ ಗೊತ್ತಿಲ್ಲ. ಆ ಚಿತ್ರದಲ್ಲಿ ಮಹೇಶ್ ಬಾಬು ಅಭಿನಯಿಸುತ್ತಿಲ್ಲ ಎನ್ನುವಾಗಲೇ ಆ ಚಿತ್ರಕ್ಕೆ ತಳುಕು ಹಾಕಿಕೊಂಡಿದ್ದು ಕನ್ನಡ ಸ್ಟಾರ್ ನಟ ಯಶ್ ಹೆಸರು. ಆ ಸಂಬಂಧ ಪುರಿ ಹಾಗೂ ಯಶ್ ನಡುವೆ ಬೆಂಗಳೂರಿನಲ್ಲೇ ಎರಡು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನುವ ಸುದ್ದಿಗಳು ಟಾಲಿವುಡ್ ಅಂಗಳದಿಂದಲೇ ಕೇಳಿ ಬಂದಿದ್ದವು.

ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

ಆ ಸಿನಿಮಾಕ್ಕೀಗ ವಿಜಯ್ ದೇವರಕೊಂಡ ಬಂದಿದ್ದಾರೆ. ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬರಲಿದ್ದಾರೆನ್ನುವ ಸುದ್ದಿಗಳು ಇವೆ. 

ಕಥೆ ಇಷ್ಟವಾಗದಿದ್ದು ಕಾರಣವಾ?

ಯಶ್ ಈ ಸಿನಿಮಾ ಯಾಕೆ ಕೈ ಬಿಟ್ಟರು ಅನ್ನೋದು ಕುತೂಹಲಕರ ವಿಷಯ. ಅದಕ್ಕೆ ಕಾರಣ ಕತೆಯೇ ಎನ್ನುತ್ತಿವೆ ಮೂಲಗಳು. ‘ಕೆಜಿಎಫ್’ ಚಿತ್ರದ ಬಹುದೊಡ್ಡ ಸಕ್ಸಸ್ ನಂತರ ನಟ ಯಶ್ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ಯಾವುದೇ ಸಿನಿಮಾದ ಕತೆಗಳನ್ನು ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳಬೇಕಿದೆ.

ಅಷ್ಟೇ ಅಲ್ಲದೆ, ಬೇರೆ ಭಾಷೆಯ ಸಿನಿಮಾ ಮಾಡುವಾಗಲೂ ತುಂಬಾ ಯೋಚಿಸಬೇಕಿದೆ. ಅದೆಲ್ಲವನ್ನು ಯೋಚಿಸುವಾಗ ಪುರಿ ಜಗನ್ನಾಥ್ ಹೇಳಿದ ಕತೆ ಮತ್ತು ಅಲ್ಲಿದ್ದ ಅವರ ಪಾತ್ರ ಅಷ್ಟಾಗಿ ಇಷ್ಟವಾಗದ ಕಾರಣದಿಂದಲೇ ಕೆಜಿಎಫ್ 2 ಚಿತ್ರದ ಚಿತ್ರೀಕರಣದ ನೆಪದಲ್ಲಿ ಪುರಿ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?