ನಟ ಪವನ್ ಕಲ್ಯಾಣ್ ಗೆ ಕೊರೋನಾ/ ರಾಜಕಾರಣದಲ್ಲಿಯೂ ತೊಡಗಿಸಿಕೊಂಡಿದ್ದ ನಾಯಕ/ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವರ್ ಸ್ಟಾರ್/ ದೇಶದಲ್ಲಿ ಪ್ರತಿ ದಿನ ಎರಡು ಲಕ್ಷ ಕೇಸ್ ಗಳು
ಹೈದರಾಬಾದ್ (ಏ. 16) ದೇಶದಲ್ಲಿ ಕೊರೋನಾ ಎರಡನೇ ಅಬ್ಬರ ಇದೆ. ಕರ್ನಾಟಕದ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೂ ವೈರಸ್ ತಗುಲಿದೆ. ದಿನಂಪ್ರತಿ 2 ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಕೇಸ್‌ಗಳು ಪತ್ತೆಯಾಗುತ್ತಿದ್ದು 'ಪವರ್ ಸ್ಟಾರ್' ಪವನ್ ಕಲ್ಯಾಣ್ ಅವರಿಗೂ ಸೋಂಕು ತಗುಲಿದೆ.
ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದೆ. ಸೋಶಿಯಲ್ ಮೀಡಿಯಾ ಮುಖೇನ ಈ ವಿಚಾರ ಹಂಚಿಕೊಂಡಿದ್ದಾರೆ. ರಾಜಕಾರಣದಲ್ಲಿಯೂ ತೊಡಗಿಕೊಂಡಿದ್ದ ಪವನ್ 15 ದಿನಗಳ ಹಿಂದೆ ಪವನ್ ಹಿಂದೂಪುರದಲ್ಲಿ ಪಾದಯಾತ್ರೆ ಮಾಡಿದ್ದರು. ಆನಂತರ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಆಗ ವರದಿಯು ನೆಗೆಟಿವ್ ಬಂದಿತ್ತು.
ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಸಿಎಂ ಯಡಿಯೂರಪ್ಪ
ಪವನ್‌ಗೆ ಜ್ವರ ಮತ್ತು ಇನ್‌ಫೆಕ್ಷನ್ ಇದೆ. ಹಾಗಾಗಿ, ಅವರೀಗ ಆಕ್ಸಿಜನ್ ಸಪೋರ್ಟ್‌ನಲ್ಲಿದ್ದಾರೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇಶದಲ್ಲಿ ಕೊರೋನಾ ಅಲೆ ಅಬ್ಬರಿಸುತ್ತಲೇ ಇದೆ.
ಕರ್ನಾಟಕದಲ್ಲಿ ಉಪಚುನಾವಣೆಗೆ ಶನಿವಾರ ಮತದಾನ ನಡೆಯಲಿದೆ. ಇನ್ನೊಂದು ಕಡೆ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ನಾಯಕರು ಸೋಂಕಿಗೆ ತುತ್ತಾಗಿದ್ದು ರಾಂಡಮ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಕ್ರಮ ತೆಗೆದುಕೊಂಡಿದೆ.