
‘ಪ್ರಾಣ’ ಎನ್ನುವ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು, ಮುಂದೆ ‘ನೆನಪಿರಲಿ’ ಪ್ರೇಮ್ ಎಂದೇ ಸ್ಟಾರ್ ಪಟ್ಟಕ್ಕೇರಿದರು. ಅವರ ಹೆಸರಿನಲ್ಲಿರುವ ‘ನೆನಪಿರಲಿ’ ಎನ್ನುವ ಮಾತಿನಂತೆ ಈ ಹದಿನೇಳು ವರ್ಷಗಳಲ್ಲಿ ಪ್ರೇಮ್ ಅವರನ್ನು ಯಾರೂ ಮರೆಯಲಿಲ್ಲ ಎಂಬುದು ಅವರ ಸಿನಿಮಾ ಕೆರಿಯರ್‌ಗೆ ಸಲ್ಲಬಹುದಾದ ಬಹು ದೊಡ್ಡ ಯಶಸ್ಸು. ಆದರೂ, ‘ಈಗ ಸಾಗಿ ಬಂದ ದಾರಿ ಚಿಕ್ಕದು. ಸಾಗಬೇಕಿರುವ ದಾರಿ ಬಹು ದೂರದ ವರೆಗೂ ಚಾಚಿಕೊಂಡಿದೆ. ಎಲ್ಲರ ಪ್ರೀತಿಯಿಂದ, ನನ್ನ ಶ್ರಮದಿಂದ ಆ ದಾರಿಯಲ್ಲಿ ಮತ್ತಷ್ಟುಒಳ್ಳೆಯ ಸಿನಿಮಾಗಳ ಮೂಲಕ, ಅಭಿಮಾನದ ನೆರಳಿನಲ್ಲಿ ಗಟ್ಟಿಯಾಗಿ ಸಾಗಬೇಕಿದೆ’ ಎನ್ನುವ ಪ್ರೇಮ್ ಅವರಿಗೆ ಈ 17ರ ಪಯಣ ದುಪಟ್ಟಾಗಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.
ಈಗ ಸಾಗಿ ಬಂದ ದಾರಿ ಚಿಕ್ಕದು. ಸಾಗಬೇಕಿರುವ ದಾರಿ ದೂರದವರೆಗೂ ಚಾಚಿಕೊಂಡಿದೆ. ಎಲ್ಲರ ಪ್ರೀತಿಯಿಂದ, ನನ್ನ ಶ್ರಮದಿಂದ ಆ ದಾರಿಯಲ್ಲಿ ಮತ್ತಷ್ಟು ಒಳ್ಳೆಯ ಸಿನಿಮಾಗಳ ಮೂಲಕ, ಅಭಿಮಾನದ ನೆರಳಿನಲ್ಲಿ ಗಟ್ಟಿಯಾಗಿ ಸಾಗಬೇಕಿದೆ - ಪ್ರೇಮ್
ಪ್ರೇಮ್ ಅವರ ಬದುಕಿನ ಗೆಲುವು- ಸೋಲು ಎರಡೂ ಒಟ್ಟಿಗೆ ಬಂದಿವೆ. ಆದರೂ ನಟನಾಗಿ ಎಂದಿಗೂ ಸೋಲದ ಪ್ರೇಮ್, ಅವರಿಗೆ ಹೆಸರು ತಂದುಕೊಟ್ಟಸಿನಿಮಾಗಳು ಹಲವು. ಇಲ್ಲಿವರೆಗೂ 24 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಚಾರ್‌ಮಿನಾರ್, ಮಳೆ, ಚೌಕಾ ಮುಂತಾದ ಚಿತ್ರಗಳು. ಇನ್ನೂ ಶತ್ರು ಹಾಗೂ ದಳಪತಿ ಚಿತ್ರಗಳು ಇವರಿಗೆ ಆ್ಯಕ್ಷನ್ ಇಮೇಜ್ ನಿಡೀದವು. ಸವಿ ಸವಿ ನೆನಪು, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಚಂದ್ರ ಚಿತ್ರಗಳು ಪ್ರೇಮ್ ಅವರನ್ನು ಕನ್ನಡದ ಚಾಕ್‌ಲೇಟ್ ಬಾಯ್‌ನಂತೆ ತೋರಿಸಿದವು. ನೆನಪಿರಲಿ, ಚಾರ್‌ಮಿನಾರ್ ಚಿತ್ರಗಳು ವೃತ್ತಿ ಬದುಕಿನ ಬಹು ದೊಡ್ಡ ತಿರುವುಗಳಾದವು. ಹೀಗೆ ಈ 17 ವರ್ಷಗಳಲ್ಲಿ ಹತ್ತಾರು ತಿರುವು, ಸೋಲು, ಗೆಲುವು ಕಂಡುಕೊಂಡು ಬರುತ್ತಿರುವ ‘ಪ್ರಾಣ’ದ ಹುಡುಗ ಪ್ರೇಮ್, ಕನ್ನಡ ಚಿತ್ರರಂಗದ ನಿಜವಾದ ಲವ್ಲಿ ಸ್ಟಾರ್.
ಚಿತ್ರರಂಗಕ್ಕೆ ಬಂದಿದ್ದು: 2004
ಮೊದಲ ಸಿನಿಮಾ: ಪ್ರಾಣ
ನಟಿಸಿದ ಒಟ್ಟು ಚಿತ್ರಗಳು: 24
ಹೆಸರಲ್ಲಿ ಜತೆಯಾದ ಚಿತ್ರ: ನೆನಪಿರಲಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.