
ಕಳೆದ ವರ್ಷದ ಕಡೇ ಘಳಿಗೆಯಿಂದಲೇ ಸುದ್ದಿಯಾಗಿರೋ ಚಿತ್ರ ಅನುಕ್ತ. ಆಗಲೇ ಇದರ ಟೀಸರ್ ಬಿಡುಗಡೆಯಾಗಿತ್ತು. ಬಳಿಕ ರೊಮ್ಯಾಂಟಿಕ್ ಹಾಡೂ ಅನಾವರಣಗೊಂಡಿತ್ತು. ಇದರಲ್ಲಿ ನಾಯಕ ಕಾರ್ತಿಕ್ ಅತ್ತಾವರ್ ಜೊತೆ ನಟಿಸಂಗೀತಾ ಭಟ್ ರೊಮ್ಯಾನ್ಸ್ ಮೂಡಲ್ಲಿ ಕಾಣಿಸಿಕೊಂಡಿದ್ದರು.
ಹರೀಶ್ ಬಂಗೇರ ನಿರ್ಮಾಣದ ಈ ಚಿತ್ರದ ಮೂಲಕ ಸಂಗೀತಾ ಮತ್ತಷ್ಟು ಶೈನಪ್ ಆಗ್ತಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಇದೀಗ ಈ ಚಿತ್ರದ ಟ್ರೈಲರ್ ಹಾಗೂ ಭಿನ್ನವಾದ ಪೋಸ್ಟರ್‌ಗಳ ಮೂಲಕ ಹವಾ ಸೃಷ್ಟಿಸಿ ಬಿಡುಗಡೆಗೆ ತಯಾರಾಗಿದೆ. ಆದರೆ ಈ ಹೊತ್ತಿನಲ್ಲಿಯೇ ನಾಯಕಿ ಸಂಗೀತಾ ಭಟ್ ಚಿತ್ರರಂಗದಿಂದಲೇ ದೂರವಾಗಿದ್ದಾರೆ.
ಅದಕ್ಕೆ ಕಾರಣ #MeToo ವಿವಾದ. ಮೀಟೂ ಅಭಿಯಾನ ಆರಂಭವಾದಾಗ ಆ ಬಗ್ಗೆ ತಮ್ಮ ವಿಚಾರಗಳನ್ನ ಸಂಗೀತಾಸಾಮಾಜಿಕ ಜಾಲ ತಾಣಗಳ ಮೂಲಕ ಹಂಚಿಕೊಂಡಿದ್ದರು. ಆ ಬಳಿಕ ನಡೆದ ವಿದ್ಯಾಮಾನಗಳಿಂದಾಗಿ ಚಿತ್ರರಂಗದಿಂದಲೇ ದೂರ ಸರಿಯೋ ನಿರ್ಧಾರವನ್ನು ಸಂಗೀತಾ ಭಟ್ ಮಾಡಿದಂತಿದೆ. ಆ ನಿಟ್ಟಿನಲ್ಲಿ ನೋಡಿದರೆ 'ಅನುಕ್ತ' ಅವರ ಕೊನೆಯ ಚಿತ್ರ ಅಂತಲೂ ಹೇಳಲಾಗುತ್ತಿದೆ.
ಇದೆಲ್ಲ ಏನೇ ಇದ್ದರೂ, ಅನುಕ್ತ ಚಿತ್ರದಲ್ಲಿ ಸಂಗೀತಾ ಒಂದೊಳ್ಳೆ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಕಾರ್ತಿಕ್ ಅತ್ತಾವರ್‌ಗೆ ಜೋಡಿಯಾಗಿ ನಟಿಸಿರೋ ಅವರ ಪಾತ್ರ ಪ್ರೇಕ್ಷಕರನ್ನು ಕಾಡುವಂತಿದೆಯಂತೆ. ಇದರ ಯಶಸ್ಸಿನ ನಂತರವಾದರೂ ಸಂಗೀತಾ ಮನಸು ಬದಲಾಯಿಸುತ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.