ರಿಲೀಸಾಗಿದೆ ಸುದೀಪ್‌ ಸಿನಿಮಾದ ಹೈವೋಲ್ಟೇಜ್‌ ಟ್ರೇಲರ್‌!

By Web Desk  |  First Published Aug 23, 2019, 8:50 AM IST

ಕಾತರದಿಂದ ಕಾದು ಕುಳಿತಿರುವ ಕಿಚ್ಚನ ಅಭಿಮಾನಿಗಳಿಗೆ ಸೆ.12ಕ್ಕೆ ಪೈಲ್ವಾನ್‌ ದರ್ಶನವಾಗಲಿದೆ. ಅದಕ್ಕೂ ಮೊದಲು ಪೈಲ್ವಾನನ ಸಣ್ಣ ಝಲಕ್‌ ಟ್ರೇಲರ್‌ ಮೂಲಕ ನಿನ್ನೆ (ಆ.22)ರಂದು ಬಿಡುಗಡೆಗೊಂಡಿತ್ತು. ಇದಕ್ಕೆ ಕ್ಷಣಾರ್ಧದಲ್ಲಿ ಅಭಿಮಾನಿಗಳಿಂದ ತುಂಬು ಹುಮ್ಮಸ್ಸಿನ ಮೆಚ್ಚುಗೆಯೂ ದೊರೆತಾಗಿದೆ. ಇದಕ್ಕೂ ಮೊದಲು ಆ. 18ರ ಭಾನುವಾರ ಬೆಂಗಳೂರಿನ ಕೋರಮಂಗಲ ಇನ್‌ಡೋರ್‌ ಸ್ಟೇಡಿಯಂನಲ್ಲಿ ಝೀ ಕನ್ನಡ ವಾಹಿನಿ ಸಹಯೋಗದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಹಾಡುಗಳು ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದವು.


ಅಲ್ಲಿ ನೆರೆದಿದ್ದ ಅಭಿಮಾನಿಗಳೆಲ್ಲಾ ಪೈಲ್ವಾನ್‌ ಪೈಲ್ವಾನ್‌ ಎನ್ನುವ ಘೋಷ ಮೊಳಗಿಸುತ್ತಾ ಸುದೀಪ್‌ ಆಗಮನಕ್ಕಾಗಿ ಕಾದು ಕುಳಿತಿದ್ದರು. ಗ್ರ್ಯಾಂಡ್‌ ಎಂಟ್ರಿ ಕೊಟ್ಟಕಿಚ್ಚ ಅಭಿಮಾನಿಗಳನ್ನು ರಂಚಿಸುವುದಕ್ಕಾಗಿಯೇ ಪೈಲ್ವಾನ್‌ ಚಿತ್ರದ ಹಾಡೊಂದಕ್ಕೆ ಭರ್ಜರಿ ಸ್ಟೆಪ್‌ ಹಾಕಿದರು. ಆಮೇಲೆ ಶುರುವಾಗಿದ್ದು ಅವರ ಮಾತು. ‘ಈ ಚಿತ್ರ ತಯಾರಾಗಿದ್ದು ಟೀಂ ವರ್ಕ್ನಿಂದ. ನನ್ನಿಂದ ಏನು ಆಗಬಹುದೋ ಅಷ್ಟನ್ನು ನಾನು ಮಾಡಿದ್ದೇನೆ. ಕ್ರೀಡೆಯನ್ನು ಆಧರಿಸಿದ ಚಿತ್ರವಾದ್ದರಿಂದ ಇದಕ್ಕೆ ಸಾಕಷ್ಟುಪೂರ್ವ ತಯಾರಿ ಬೇಕಾಗಿತ್ತು. ಅಭಿಮಾನಿಗಳಿಗಾಗಿ, ನನ್ನ ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ನಾನು ಅದನ್ನೆಲ್ಲಾ ಮಾಡಿದ್ದೇನೆ’ ಎಂದು ಸುದೀಪ್‌ ಹೇಳಿಕೊಂಡರು.

ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಮುಖದ ಮೇಲೆ ಹೊಡೆದಂತೆ ಹೇಳುತ್ತಾರೆ ಕಿಚ್ಚನ ಪುತ್ರಿ!

Tap to resize

Latest Videos

ಈ ಹಿಂದೆ ‘ರಾಜಕುಮಾರ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ಕಿಚ್ಚ ಸುದೀಪ್‌. ಅದೇ ಕಾರಣಕ್ಕೆ ಈಗ ‘ಪೈಲ್ವಾನ್‌’ ಚಿತ್ರದ ಆಡಿಯೋ ಬಿಡುಗಡೆಗೆ ಪುನೀತ್‌ ರಾಜ್‌ಕುಮಾರ್‌ ಅವರನ್ನು ವಿಶೇಷ ಅಥಿತಿಯನ್ನಾಗಿ ಆಹ್ವಾನಿಸಲಾಗಿತ್ತು. ಆ ಪ್ರೀತಿಗೆ ಬೆಲೆಕೊಟ್ಟು ಪುನೀತ್‌ ರಾಜ್‌ಕುಮಾರ್‌ ಸಮಾರಂಭಕ್ಕೆ ಬಂದು ಇಡೀ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಪುನೀತ್‌ ಮತ್ತು ಸುದೀಪ್‌ ಅವರ ಹಳೆಯ ಫೋಟೋವನ್ನು ಇಟ್ಟುಕೊಂಡು ಅದೇ ರೀತಿ ಹೊಸದಾಗಿ ಮತ್ತೊಂದು ಫೋಟೋಶೂಟ್‌ ಮಾಡಲಾಯಿತು.

ಮೊದಲ ಬಾರಿಗೆ ಯಶ್‌ಗೆ ‘ಗಜಕೇಸರಿ’ ಸಿನಿಮಾ ಮಾಡಿ ಗಜಕೇಸರಿ ಕೃಷ್ಣ ಆಗಿದ್ದರು. ಆಮೇಲೆ ಸುದೀಪ್‌ ಅವರಿಗೆ ‘ಹೆಬ್ಬುಲಿ’ ನಿರ್ದೇಶನ ಮಾಡಿ ಹೆಬ್ಬುಲಿ ಕೃಷ್ಣ ಆಗಿದ್ದರು. ಈಗ ಮತ್ತೆ ಸುದೀಪ್‌ಗೆ ರೋಚಕವಾದ ‘ಪೈಲ್ವಾನ್‌’ ಸಿನಿಮಾ ಮಾಡಿ ಪೈಲ್ವಾನ್‌ ಕೃಷ್ಣ ಆಗಿದ್ದಾರೆ. ಜೊತೆಗೆ ತಮ್ಮದೇ ಆರ್‌ಆರ್‌ಆರ್‌ ಮೋಷನ್‌ ಪಿಕ್ಚರ್‌ ಹೌಸ್‌ನಿಂದ ಚಿತ್ರ ತಯಾರು ಮಾಡುವ ಮೂಲಕ ನಿರ್ಮಾಪಕರೂ ಆಗಿದ್ದಾರೆ. ಇದಕ್ಕೆ ಸಾಥ್‌ ನೀಡಿರುವುದು ಪತ್ನಿ ಸ್ವಪ್ನ ಕೃಷ್ಣ ಮತ್ತು ಸಹೋದರ ದೇವರಾಜ್‌.

ಇದೇನಿದು ಕಿಚ್ಚ ಟ್ವೀಟ್, ಅಷ್ಟಕ್ಕೂ ಟಾಂಟ್ ಕೊಟ್ಟಿದ್ದು ಯಾರಿಗೆ?

ಒಟ್ಟು ಆರು ಹಾಡುಗಳಿರುವ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಸಂಜಿತ್‌ ಹೆಗ್ಡೆ, ವಿಜಯ್‌ ಪ್ರಕಾಶ್‌, ಅರ್ಮಾನ್‌ ಮಲ್ಲಿಕ್‌, ವ್ಯಾಸರಾಜ್‌ ಮೊದಲಾದವರು ದನಿ ನೀಡಿ ಕೈ ಜೊಡಿಸಿದ್ದಾರೆ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಮೂಲಕ ಕಾರ್ತಿಕ್‌ ಗೌಡ ದೇಶಾದ್ಯಂತ ಚಿತ್ರದ ಹಂಚಿಕೆ ಮಾಡುತ್ತಿದ್ದಾರೆ.

ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್‌

ಸುದೀಪ್ ಜೊತೆ ‘ಕಣ್ಣು ಮಣಿಯೇ..ಕಣ್ಣ ಹೊಡಿಯೇ’ ಎಂದು ಹಾಡಿದ ಸಂಜಿತ್ ಹೆಗ್ಡೆ

ಸುದೀಪ್‌ ಬತ್‌ರ್‍ಡೇಗೆ ಪೈಲ್ವಾನ್‌ ಟ್ರೇಲರ್‌ ಬರಲಿದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇಡೀ ಚಿತ್ರತಂಡ ನಿನ್ನೆಯೇ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ(ಆ.22) ಟ್ರೇಲರ್‌ ದರ್ಶನ ಮಾಡಿಸಿತ್ತು. ಸೆ. 12ಕ್ಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಮೋಷನ್‌ನಲ್ಲಿ ಹಿಂದೆ ಬೀಳಬಾರದು ಎನ್ನುವ ಉದ್ದೇಶದೊಂದಿಗೆ ಶೀಘ್ರವಾಗಿ ಟ್ರೇಲರ್‌ ಬಿಡುಗಡೆ ಮಾಡಿಕೊಂಡಿದೆ ತಂಡ. ಚಿತ್ರದ ಎಲ್ಲಾ ಕಾರ್ಯಗಳೂ ಮುಗಿದಿದ್ದು ಉಳಿದ ಸಮಯವನ್ನೆಲ್ಲಾ ಪ್ರಮೋಷನ್‌ಗಾಗಿಯೇ ಮೀಸಲಿಡಲಿದ್ದೇವೆ ಎಂದು ಸುದೀಪ್‌ ಕೂಡ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದರು.

ಐದು ಭಾಷೆಗಳಲ್ಲಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. 

 

click me!