ತಂದೆ ತೀರಿಕೊಂಡಿದ್ದು ತಿಳಿದರೂ ಗಿಮಿಕ್‌ ಶೂಟಿಂಗ್‌ ಮುಗಿಸಿಕೊಟ್ಟ ಗಣೇಶ್‌

By Kannadaprabha News  |  First Published Aug 14, 2019, 10:27 AM IST

‘ಕಲಾವಿದನ ಮನಸು ಡಿಸ್ಟರ್ಬ್‌ ಆದರೆ ನಟಿಸುವುದು ಎಷ್ಟುಕಷ್ಟಎನ್ನುವುದು ಮೊದಲ ಬಾರಿಗೆ ಅರಿವಾಗಿದ್ದು ಆಗಲೇ. ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂದು ಗಿಮಿಕ್  ಶೂಟಿಂಗ್‌ ಮುಗಿಸಿಕೊಟ್ಟೆ’ ಎಂದು ಗಣೇಶ್ ಭಾವುಕರಾದರು.


ಕಲಾವಿದರ ಬದುಕು ತುಂಬಾ ಕಷ್ಟಅಂತ ಕೇಳಿ ತಿಳಿದಿದ್ದೆ. ಆದರೆ ನಿಜವಾದ ಕಲಾವಿದರ ಕಷ್ಟಹೇಗಿರುತ್ತೆ ಅಂತ ನನಗೆ ಗೊತ್ತಾಗಿದ್ದು ಆಗಲೇ. ಅವತ್ತು ಆಗಸ್ಟ್‌ 27, 2018. ಮಧ್ಯಾಹ್ನ 3.30 ಕ್ಕೆ....!

- ಗಣೇಶ್‌ ಹೀಗೆ ಹೇಳುತ್ತಾ ಒಂದು ಕ್ಷಣ ಭಾವುಕರಾದರು. ಮುಂದೆ ಮಾತನಾಡುವುದಕ್ಕೆ ಅವರಿಗೆ ಕಷ್ಟಎನಿಸಿತು. ಯಾಕಂದ್ರೆ, ಆಗಸ್ಟ್‌ 27ರ ಮಧ್ಯಾಹ್ನ 3.30ಕ್ಕೆ ಅವರು ಚಿತ್ರೀಕರಣದ ಸೆಟ್‌ನಲ್ಲಿದ್ದಾಗ ಫೋನ್‌ ಕಾಲ್‌ ಮೂಲಕ ಕೇಳಿದ್ದು ತಂದೆ ನಿಧನರಾದ ಸುದ್ದಿ.

Latest Videos

‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

ಅವತ್ತು ಯಲಹಂಕದ ಬಂಗಲೆಯೊಂದರಲ್ಲಿ ‘ಗಿಮಿಕ್‌’ ಶೂಟಿಂಗ್‌ ನಡೆಯುತ್ತಿತ್ತು. ಪ್ಲಾನ್‌ ಮಾಡಿಕೊಂಡಂತೆ ಅವತ್ತು ಸಂಜೆಯೊಳಗೆ ಉಳಿದ ಚಿತ್ರೀಕರಣ ಮುಗಿಸಬೇಕಿತ್ತು. ಅಂದೇ ಗಣೇಶ್‌ ತಂದೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಗಣೇಶ್‌ ಬೆಳಗ್ಗೆ ಶೂಟಿಂಗ್‌ ಸ್ಪಾಟ್‌ಗೆ ಹೋಗುವ ಮುನ್ನ ಆಸ್ಪತ್ರೆಗೆ ಹೋಗಿಯೇ ಸೆಟ್‌ ತಲುಪಿದ್ದರು.

ಮಧ್ಯಾಹ್ನ 3.30ರ ಸಮಯಕ್ಕೆ ಮೇಕಪ್‌ ಹಾಕಿ ಕ್ಯಾಮರಾ ಮುಂದೆ ನಿಂತಿದ್ದ ಗಣೇಶ್‌ ಅವರಿಗೆ ಶಾಕಿಂಗ್‌ ಸುದ್ದಿ ಬಂತು. ತಂದೆ ತೀರಿಕೊಂಡಿದ್ದರು. ಹಾಗಂತ ಅವರು ತಕ್ಷಣ ಹೊರಡಲಿಲ್ಲ. ನಿರ್ಮಾಪಕರು ಲಕ್ಷಾಂತರ ರೂಪಾಯಿ ಬಂಗಲೆ ಬಾಡಿಗೆ ಕಟ್ಟಿಚಿತ್ರೀಕರಣ ನಡೆಸುತ್ತಿದ್ದಾರೆ. ಇಡೀ ಚಿತ್ರತಂಡ ದುಡಿಯುತ್ತಿದೆ.

ಜಮೀರ್‌ ಅಹಮದ್‌ ಪುತ್ರ ಜಾಯೇದ್‌ ನಟನೆಯ ಚಿತ್ರ ಸದ್ಯದಲ್ಲೇ ತೆರೆಗೆ

ಅದನ್ನೆಲ್ಲಾ ಯೋಚಿಸಿದ ಅವರು ತಂದೆಯ ನಿಧನದ ಸುದ್ದಿ ಗೊತ್ತಾದರೂ ಏನೂ ಹೇಳದೆ ತಮ್ಮ ಪಾಲಿನ ಚಿತ್ರೀಕರಣ ಮುಗಿಸಿ ಅಲ್ಲಿಂದ ತೆರಳಿದರು. ಆಮೇಲೆ ಚಿತ್ರತಂಡಕ್ಕೆ ಈ ವಿಷಯ ಗೊತ್ತಾಯಿತು. ಈ ಸಂಗತಿ ನೋವಿನಿಂದಲೇ ಹೇಳಿದ್ದು ನಿರ್ದೇಶಕ ನಾಗಣ್ಣ. ಗಣೇಶ್‌ ಬದ್ಧತೆ, ಅವರ ನಿರ್ಮಾಪಕರ ಮೇಲಿನ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ತಕ್ಷಣ ಪ್ರತಿಕ್ರಿಯಿಸಿದ ಗಣೇಶ್‌, ‘ಕಲಾವಿದನ ಮನಸು ಡಿಸ್ಟರ್ಬ್‌ ಆದರೆ ನಟಿಸುವುದು ಎಷ್ಟುಕಷ್ಟಎನ್ನುವುದು ಮೊದಲ ಬಾರಿಗೆ ಅರಿವಾಗಿದ್ದು ಆಗಲೇ. ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂದು ಶೂಟಿಂಗ್‌ ಮುಗಿಸಿಕೊಟ್ಟೆ’ ಎಂದು ಭಾವುಕರಾದರು. ಆಗಸ್ಟ್‌ 15ರಂದು ಗಿಮಿಕ್‌ ಬಿಡುಗಡೆಯಾಗುತ್ತಿದೆ.

click me!