ಅಂಬಿ ಆಡಿಯೋ ರಿಲೀಸ್‌ಗೆ ಧನುಷ್

Published : Aug 04, 2018, 11:05 AM ISTUpdated : Aug 04, 2018, 11:09 AM IST
ಅಂಬಿ ಆಡಿಯೋ ರಿಲೀಸ್‌ಗೆ  ಧನುಷ್

ಸಾರಾಂಶ

ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಮುಕ್ತಾಯಗೊಂಡಿದೆ. ಬಿಡುಗಡೆಗೆ ಸಿದ್ದವಾಗಿದೆ. ಆಡಿಯೋ ರಿಲೀಸ್ ಅದ್ದೂರಿಯಾಗಿ ನಡೆಯಲಿದೆ. ಸ್ಟಾರ್ ನಟರು ಆಗಮಿಸಲಿದ್ದಾರೆ. ಕಾಲಿವುಡ್ ನಟ ಧನುಶ್ ಕೂಡಾ ಆಗಮಿಸಲಿದ್ದಾರೆ. 

ಬೆಂಗಳೂರು (ಆ. 04): ಅಂಬರೀಷ್ ಹಾಗೂ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಬಹುತೇಕ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

ನಿರ್ಮಾಪಕ ಜಾಕ್ ಮಂಜು ಈ ತಿಂಗಳ ಕೊನೆಯಲ್ಲೇ ಚಿತ್ರವನ್ನು ತೆರೆಗೆ ತಂದರೆ ಒಳ್ಳೆಯದು ಎನ್ನುವ ಲೆಕ್ಕಚಾರದಲ್ಲಿದ್ದಾರೆ. ಅದಕ್ಕೆ ಪೂರಕವಾಗಿಯೇ ಚಿತ್ರದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಅವರು ಬ್ಯುಸಿ ಆಗಿದ್ದು, ಆಗಸ್ಟ್ 15 ರೊಳಗೆ ನಗರದಲ್ಲಿ ಅದ್ಧೂರಿಯಾಗಿಯೇ ಆಡಿಯೋ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಅರಮನೆ ಆವರಣದಲ್ಲಿನ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ.

ಅವತ್ತಿನ ಕಾರ್ಯಕ್ರಮಕ್ಕೆ ಕಾಲಿವುಡ್ ನಟ ಧನುಷ್ ಆಗಮಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಚಿತ್ರತಂಡ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್. ಅಲ್ಲಿ ಈ ಚಿತ್ರವನ್ನು ನಿರ್ಮಿಸಿ, ತೆರೆಗೆ ತಂದಿದ್ದು ನಟ ಧನುಷ್. ಹಾಗೆಯೇ ಚಿತ್ರದಲ್ಲೂ ಅವರೇ ಅಭಿನಯಿಸಿದ್ದರು.

ಅದೇ ನಂಟಿನೊಂದಿಗೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಧನುಷ್ ಆಗಮಿಸುತ್ತಿದ್ದಾರೆನ್ನಲಾಗಿದೆ. ಹಾಗೆಯೇ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ವಿಭಿನ್ನವಾಗಿಯೇ ನಡೆಸಲು ನಿರ್ಮಾಪಕ ಜಾಕ್ ಮಂಜು ನಿರ್ಧರಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!