
ಬೆಂಗಳೂರು (ಆ. 03): ಕಿಚ್ಚ ಸುದೀಪ್, ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏನಪ್ಪಾ, ಇದು ಸರ್ಪ್ರೈಸ್ ಅಂತಿದಿರಾ? ಹೌದು. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ದರ್ಶನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಮುನಿಸಿಕೊಂಡಿದ್ದ ಸುದೀಪ್ ದರ್ಶನ್ ಮತ್ತೆ ಒಂದಾಗಲಿದ್ದಾರೆ. ಸ್ಯಾಂಡಲ್’ವುಡ್ ಹಿರಿಯಣ್ಣ ಅಂಬರೀಶ್ ಇವರಿಬ್ಬರಿಗೆ ಸಂಧಾನ ಮಾಡಿಸಲಿದ್ದಾರೆ. ಆಡಿಯೋ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ದರ್ಶನ್’ರನ್ನು ಒಂದು ಮಾಡಲಿದ್ದಾರೆ ಅಂಬರೀಶ್. ನಿರ್ಮಾಪಕ ಜಾಕ್ ಮಂಜು ದರ್ಶನ್ ಗೆ ಆಡಿಯೋ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಆಡಿಯೋ ಕಾರ್ಯಕ್ರಮಕ್ಕೆ ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರು ಆಗಮಿಸುತ್ತಿದ್ದಾರೆ.
ಕುಚಿಕೋ ಗೆಳೆಯರ ಮನಸ್ತಾಪಕ್ಕೆ ಕಾರಣವೇನು?
ದರ್ಶನ್ ಗೆ ಮೆಜೆಸ್ಟಿಕ್ ಸಿನೆಮಾದಲ್ಲಿ ನಟಿಸಲು ನಾನೇ ಅವಕಾಶ ಕೊಟ್ಟಿದ್ದು ಅಂತಾ ಸುದೀಪ್ ಹೇಳಿದ್ದರು. ಸುದೀಪ್ ಮಾತಿನಿಂದ ದರ್ಶನ್ ನೊಂದುಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ನಾನು ಕಷ್ಟಪಟ್ಟು ಬೆಳೆದು ಮೇಲೆ ಬಂದವನು. ಹೀಗಿರುವಾಗ, `ಮೆಜೆಸ್ಟಿಕ್’ ಸಿನಿಮಾದಲ್ಲಿ ಅವರೇ ಅವಕಾಶ ಕೊಡಿಸಿದ್ದರೆ ಅದನ್ನು ಮೊದಲು ಸಾಬೀತುಪಡಿಸಲಿ. ಅದು ಬಿಟ್ಟು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಲ್ಲಿ-ಇಲ್ಲಿ ಮಾತನಾಡುವುದು ಬೇಡ’ ಎಂದು ದರ್ಶನ್ ಹೇಳಿದ್ದರು. ಅಲ್ಲಿಂದಲೇ ಇಬ್ಬರ ನಡುವಿನ ಮನಸ್ತಾಪ ಶುರುವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.