ದರ್ಶನ್ ಕಾರು ಅಪಘಾತ : ಟ್ವಿಸ್ಟ್ ಮೇಲೆ ಟ್ವಿಸ್ಟ್

Published : Sep 26, 2018, 10:12 PM ISTUpdated : Sep 27, 2018, 07:54 AM IST
ದರ್ಶನ್ ಕಾರು ಅಪಘಾತ : ಟ್ವಿಸ್ಟ್ ಮೇಲೆ ಟ್ವಿಸ್ಟ್

ಸಾರಾಂಶ

ಮೈಸೂರು ನಗರ ಪೊಲೀಸ್ ಆಯುಕ್ತರ ಪ್ರಕಾರ ಕಾರಿನಲ್ಲಿದ್ದವರು 5 ಮಂದಿ. ಆದರೆ ದರ್ಶನ್ ಸ್ನೇಹಿತರು, ಸಂಬಂಧಿಕರು ಹೇಳುತ್ತಿರುವುದು ನಾಲ್ವರನ್ನು. ಆದರೆ ಎಂಎಲ್ಸಿ ವರದಿಯಲ್ಲಿ 6 ಜನ ಗಾಯಾಳುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಾದರೆ ದರ್ಶನ್ ಜತೆ ಕಾರಿನಲ್ಲಿದ್ದ 5ನೇ ವ್ಯಕ್ತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

ಬೆಂಗಳೂರು[ಸೆ.26]: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಕಾರಲ್ಲಿ ಪ್ರಯಾಣಿಸುತ್ತಿದ್ದವರು 5 ಅಥವಾ 6 ಜನರೋ  ಅನ್ನೋ ಗೊಂದಲ ಸೃಷ್ಟಿಯಾಗಿದೆ. ಪೊಲೀಸರ ನಡೆ ಬಗ್ಗೆ ಹಲವು ಅನುಮಾನಗಳು ಮೂಡುತ್ತಿದೆ. 

ಕಾರು ಅಪಘಾತದಲ್ಲಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಗೆ ಮೂರನೇ ದಿನವೂ ಚಿಕಿತ್ಸೆ ಮುಂದುವರೆದಿದೆ. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ದಂಡೇ ಆಸ್ಪತ್ರೆಯತ್ತ ಹರಿದು ಬಂದರೆ ಮತ್ತೊಂದೆಡೆ ಪ್ರಕರಣದಲ್ಲಿ ಹಲವು ಗೊಂದಲಗಳು ಮುಂದುವರೆದಿವೆ. 

ಮೈಸೂರು ನಗರ ಪೊಲೀಸ್ ಆಯುಕ್ತರ ಪ್ರಕಾರ ಕಾರಿನಲ್ಲಿದ್ದವರು 5 ಮಂದಿ. ಆದರೆ ದರ್ಶನ್ ಸ್ನೇಹಿತರು, ಸಂಬಂಧಿಕರು ಹೇಳುತ್ತಿರುವುದು ನಾಲ್ವರನ್ನು. ಆದರೆ ಎಂಎಲ್ಸಿ ವರದಿಯಲ್ಲಿ 6 ಜನ ಗಾಯಾಳುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಾದರೆ ದರ್ಶನ್ ಜತೆ ಕಾರಿನಲ್ಲಿದ್ದ 5ನೇ ವ್ಯಕ್ತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

ಎಫ್ ಐಆರ್ ನಲ್ಲಿ 4 ಮಂದಿ ಹೆಸರು
ಎಫ್ಐಆ ಆರ್'ನಲ್ಲಿ ಕಾರು ಚಾಲಕ ರಾಯ್ ಆಂಟೋನಿ, ನಟ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ನಾಲ್ಕು ಮಂದಿ ಹೆಸರು ಮಾತ್ರ ಉಲ್ಲೇಖಿಸಿಲಾಗಿದೆ. ಆದರೆ, ಆಸ್ಪತ್ರೆಯ ಎಂ.ಎಲ್.ಸಿ ವರದಿಯಲ್ಲಿ ಈ ನಾಲ್ವರ ಜೊತೆಗೆ ಪ್ರಕಾಶ್ ಹಾಗೂ ವಿನಯ್ ಶಂಕರ್ ಎಂಬ ಹೆಸರು ನಮೂದಿಸಲಾಗಿದೆ. ಇವೆಲ್ಲವನ್ನು ಗಮನಿಸಿದರೆ  ಎಲ್ಲವೂ ಗೊಂದಲಮಯಗೂಡಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!