
ಬಾಲಿವುಡ್ (Bollywood) ಹಿರಿಯ ನಟ ಗೋವಿಂದ (Govinda) ಈ ವರ್ಷದ ಆರಂಭದಿಂದಲೇ ಸುದ್ದಿಯಲ್ಲಿದ್ದವರು. ಯಾವ್ದೇ ಬ್ಲಾಕ್ ಬಾಸ್ಟರ್ ಮೂವಿ ಮಾಡಿ ಅವ್ರು ಸದ್ದು ಮಾಡಿಲ್ಲ. ನಟ ಗೋವಿಂದ ತಮ್ಮ ಪತ್ನಿ ಸುನೀತಾ ಅಹುಜಾ ಅವರಿಗೆ ಡಿವೋರ್ಸ್ ನೀಡ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಅದಾದ್ಮೇಲೆ ಗೋವಿಂದಾ ಕೆಲ ನಟಿಯರ ಜೊತೆ ಅಫೇರ್ ನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಪ್ರತಿ ಬಾರಿ ಪತಿ ಪರ ನಿಂತಿದ್ದ ಸುನೀತಾ ಅಹುಜಾ (Sunita Ahuja), ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಡಿವೋರ್ಸ್ ಪಡೀತಿಲ್ಲ ಎಂದೇ ಹೇಳ್ತಾ ಬಂದಿದ್ದಾರೆ. ಈಗ ಕರ್ವಾ ಚೌತ್ ದಿನ ಸೋಶಿಯಲ್ ಮೀಡಿಯಾದಲ್ಲಿ ಗೋವಿಂದಾ ನೀಡಿರುವ ಗಿಫ್ಟ್ ಫೋಟೋ ಪೋಸ್ಟ್ ಮಾಡಿ, ಮತ್ತೊಮ್ಮೆ ಸಂಬಂಧ ಗಟ್ಟಿಯಾಗಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ.
ಬಾಲಿವುಡ್ ನಲ್ಲಿ ನಿನ್ನೆ ಕರ್ವಾ ಚೌತ್ ಸಂಭ್ರಮ ಮನೆ ಮಾಡಿತ್ತು. ಬಹುತೇಕ ಎಲ್ಲ ನಟಿಯರು ಕರ್ವಾ ಚೌತ್ ಆಚರಿಸಿದ್ದಾರೆ. ನಟಿ ಶಿಲ್ಪಾಶೆಟ್ಟಿ, ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ ಸೇರಿದಂತೆ ಬಾಲಿವುಡ್ ನಟಿಯರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಮಧ್ಯೆ ಗೋವಿಂದಾ ಪತ್ನಿ ಸುನೀತಾ ಅಹುಜಾ ಹೆಚ್ಚು ಸುದ್ದಿ ಮಾಡಿದ್ದಾರೆ. ಇದಕ್ಕೆ ಕಾರಣ ಗೋವಿಂದಾ ನೀಡಿರುವ ಗಿಫ್ಟ್. ಗೋವಿಂದಾ ತಮ್ಮ ಪತ್ನಿ ಸುನಿತಾಗೆ ದುಬಾರಿ ಬಂಗಾರದ ಹಾರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಬಂಗಾರದ ದೊಡ್ಡ ನೆಕ್ಲೇಸ್ ಧರಿಸಿರುವ ಸುನೀತಾ ಅಹುಜಾ, ಸೋನಾ ಕಿತನಾ ಸೋನಾ ಹೇ ಅಂತ ಶೀರ್ಷಿಕೆ ಹಾಕಿದ್ದಾರೆ. ಇದು ಕರ್ವಾ ಚೌತ್ ಗಿಫ್ಟ್ ಅಂತಾನೂ ಬರೆದುಕೊಂಡಿದ್ದಾರೆ.
ನೇಸರ ಜೊತೆ ಅದಿತಿ ಪ್ರಭುದೇವ ಫೋಟೋಶೂಟ್…ಹೇಗಿದೆ ಅಮ್ಮ-ಮಗಳ ಮುದ್ದಾದ ಜೋಡಿ…
ಡ್ರೆಸ್ ಮೇಲೆ ಬಂಗಾರದ ದೊಡ್ಡ ಹಾರವನ್ನು ಸುನೀತಾ ಹಾಕಿಕೊಂಡಿದ್ದಾರೆ. ಎಂದಿನಂತೆ ನಗ್ತಾ ಇರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಸುನೀತಾ ಅಹುಜಾ ಪೋಸ್ಟ್ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದು ಬರೀ ಫ್ಯಾನ್ಸ್ ಗೆ ಸಂತೋಷ ನೀಡಿಲ್ಲ, ಗೋವಿಂದಾ ಹಾಗೂ ಸುನೀತಾ ಅಹುಜಾ ಮಧ್ಯೆ ಸಂಬಂಧ ಬಿರುಕು ಬಿಟ್ಟಿದೆ ಎನ್ನುತ್ತಿದ್ದವರ ಬಾಯಿ ಮುಚ್ಚಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಜನರು ಸುನೀತಾ ಅಹುಜಾ ಕಾಲೆಳೆಯುವ ಕೆಲ್ಸ ಮಾಡಿದ್ದಾರೆ. ಹಾಲ್ಮಾರ್ಕ್ ತೋರಿಸಿ ಮೇಡಂ. ಇತ್ತೀಚಿನ ದಿನಗಳಲ್ಲಿ ಚಿನ್ನ ವಜ್ರಗಳಿಗಿಂತ ದುಬಾರಿಯಾಗುತ್ತಿದೆ, ಆದ್ದರಿಂದ ನಾವು ಅದನ್ನು ನಂಬುವುದಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಬಂಗಾರ ಮನೆಗೆ ಬಂತು ಇನ್ಮುಂದೆ ಇಡಿಯವರು ಮನೆಗೆ ಬರ್ತಾರೆ ಅಂತ ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
Kantara Chapter 1: ಕಾಂತಾರ ಸಾಕು, ಕರ್ನಾಟಕದ ಹೊಸ ಕತೆ ಹೇಳಿ!
ಹಿರಿಯ ನಟ ಗೋವಿಂದಾ ಹಾಗೂ ಸುನೀತಾ ತಮ್ಮ ಕೆಮೆಸ್ಟ್ರಿ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಬಾಲಿವುಡ್ ಫೆವರೆಟ್ ಜೋಡಿಯಲ್ಲಿ ಇವ್ರೂ ಸೇರಿದ್ದಾರೆ. ಆದ್ರೆ ಇತ್ತೀಚಿಗೆ ಜೋಡಿ ಬಗ್ಗೆ ಸಾಕಷ್ಟು ವದಂತಿ ಹರಡಿತ್ತು. ಗೋವಿಂದಾ ಹಾಗೂ ಸುನೀತಾ ದೂರವಾಗಿದ್ದಾರೆ, ಗೋವಿಂದಾಗೆ ಬೇರೆ ನಟಿ ಜೊತೆ ಸಂಬಂಧವಿದೆ ಎಂಬೆಲ್ಲ ಸುದ್ದಿ ಹರಡಿದ ಟೈಂನಲ್ಲಿ ಸುನೀತಾ ಈ ಬಗ್ಗೆ ಸ್ಪಷ್ಟನೆ ನೀಡಿದ್ರು. ನಮ್ಮಿಬ್ಬರನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ. ಗೋವಿಂದ ನನ್ನನ್ನು ತುಂಬಾ ಪ್ರೀತಿ ಮಾಡ್ತಾರೆ ಎಂದಿದ್ರು. ಗೋವಿಂದ ಮತ್ತು ಸುನೀತಾ 1987 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 37 ವರ್ಷಗಳ ದಾಂಪತ್ಯವನ್ನು ಅವರು ಯಶಸ್ವಿಯಾಗಿ ನಡೆಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.