Aamir Khan: 3ನೆಯವಳ ಎಂಟ್ರಿ ಆಗ್ತಿದ್ದಂಗೇ ಮಾಜಿ ಪತ್ನಿಯರ ಬಗ್ಗೆ ಆಮೀರ್​ ಮಾತು- ಅಸಹ್ಯದ ಪರಮಾವಧಿ ಎಂದ ಫ್ಯಾನ್ಸ್​!

Published : Jun 21, 2025, 02:05 PM IST
Aamir Khan about ex wives

ಸಾರಾಂಶ

ಈ ಹಿಂದೆ ರೀನಾ ಮತ್ತು ಕಿರಣ್​ ಅವರಿಗೆ ಡಿವೋರ್ಸ್​ ಕೊಟ್ಟು ಈಗ ಗೌರಿ ಎಂಬಾಕೆಯನ್ನು ಮದ್ವೆಯಾಗಲು ಹೊರಟಿರೋ ಆಮೀರ್​ ಖಾನ್​, ಮಾಜಿ ಪತ್ನಿಯನ್ನು ಹಾಡಿ ಹೊಗಳಿ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅವರು ಹೇಳಿದ್ದೇನು ಕೇಳಿ... 

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್​​ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಇದೀಗ ಮೂರನೆಯ ಮದುವೆಗೆ ರೆಡಿಯಾಗಿದ್ದಾರೆ. ಆಕೆಯ ಹೆಸರು ಗೌರಿ. ಅವರನ್ನು ಇದಾಗಲೇ ಆಮೀರ್​ ಜನರಿಗೆ ಪರಿಚಯಿಸಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್​ ರಾವ್​ ಅವರಿಂದ ಆಜಾದ್​ ರಾವ್​ ಖಾನ್​ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್​ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್​ ಅವರ ಮದುವೆ ಸಮಾರಂಭಕ್ಕೆ ಕಿರಣ್​ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.

ಇದೀಗ ತಮ್ಮ ಮಾಜಿ ಪತ್ನಿಯರ ಕುರಿತು ಭಾರಿ ಹೊಗಳಿಕೆಯ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ನಾನು ನನ್ನ ಕುಟುಂಬವನ್ನು ರೀನಾ ಮತ್ತು ಕಿರಣ್​ ಇಲ್ಲದೇ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ. ಅವರು ನನ್ನ ಕುಟುಂಬದ ಭಾಗವೇ ಆಗಿದ್ದಾರೆ. ನಾವು ಇಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ. ಆಗಲೂ ಪ್ರೀತಿಸುತ್ತಿದ್ದೆ, ಈಗಲೂ ಪ್ರೀತಿ, ಗೌರವ ಇದೆ. ಆದರೆ ಅವರ ಜೊತೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತಿಳಿದಾಗ ದೂರವಾಗಬೇಕು ಎಂದು ದೂರವಾಗಿದ್ದೇನೇ ವಿನಾ, ಇಬ್ಬರ ಮೇಲೆ ಈಗಲೂ ಅಪಾರ ಪ್ರೀತಿ ಇದೆ ಎಂದಿದ್ದಾರೆ! ರೀನಾ ಮತ್ತು ಕಿರಣ್​ ಇಬ್ಬರೂ ನನ್ನ ಲೈಫ್​ನಲ್ಲಿ ವಿಶೇಷ ವ್ಯಕ್ತಿಗಳು. ರೀನಾ ಜೊತೆ ಮದುವೆಯಾದಾಗ ಇಬ್ಬರೂ ಚಿಕ್ಕವರಿದ್ವಿ. ಇಬ್ಬರೂ ಒಟ್ಟಿಗೇ ಬೆಳೆದ್ವಿ. ಅವರಿಬ್ಬರನ್ನೂ ಪಡೆದ ನಾನೇ ಧನ್ಯ ಎಂದಿದ್ದಾರೆ 3ನೇ ಮದುವೆಗೆ ರೆಡಿಯಾಗ್ತಿರೋ ಆಮೀರ್​ ಖಾನ್​!

ಈಗಲೂ ನಮ್ಮಗಳ ನಡುವೆ ತುಂಬಾ ಒಳ್ಳೆಯ ರಿಲೇಷನ್​ಷಿಪ್​ ಇದೆ. ಪತಿ-ಪತ್ನಿ ಆಗಿಲ್ಲ ಅಷ್ಟೇ ಎಂದು ಹೇಳುವ ಮೂಲಕ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇದರ ಅರ್ಥ ಮಾಜಿಗಳೂ ಇರಲಿ, ಮತ್ತೊಂದೂ ಬರಲಿ ಎಂದೇ ಎಂದು ಕೇಳುತ್ತಿದ್ದಾರೆ ನೆಟ್ಟಿಗರು. ಪತ್ನಿಯನ್ನು ಇಷ್ಟೆಲ್ಲಾ ಪ್ರೀತಿ ಮಾಡುವವ ಡಿವೋರ್ಸ್​ ಕೊಟ್ಟಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇದೊಂದು ಅಸಹ್ಯ, ಅಸಭ್ಯದ ಪರಮಾವಧಿಯಾಗಿದೆ. ನಾಚಿಕೆ ಇಲ್ಲದ ಹೇಳಿಕೆಯಾಗಿದೆ. ಈ ವಯಸ್ಸಿನಲ್ಲಿ 3ನೇ ಮದುವೆಯಾಗುತ್ತಿರುವುದೂ ಅಲ್ಲದೇ, ಮಾಜಿ ಪತ್ನಿಯರನ್ನು ಹೊಗಳಿ ತಾವೊಬ್ಬರು ದೊಡ್ಡ ವ್ಯಕ್ತಿ ಎಂದು ತೋರಿಸಿಕೊಳ್ಳುವ ಪ್ರಯತ್ನ ಅಷ್ಟೇ, ನಾಚಿಕೆಯಾಗಬೇಕು ಎಂದು ಸಕತ್​ ಟ್ರೋಲ್​ ಮಾಡಲಾಗುತ್ತಿದೆ.

ಈಗ ಮೂರನೆಯ ಬಾರಿಗೆ ಹಿಂದೂ ಹುಡುಗಿಯ ಜೊತೆ ಮದುವೆ ತಯಾರಿ ನಡೆಸುತ್ತಿದ್ದಂತೆಯೇ, ಹಿಂದಿನ ಮದುವೆಯಿಂದ ಆಗಿರುವ ನೋವಿನ ಕುರಿತು ಮಾತನಾಡಿದ್ದ ವಿಡಿಯೋ ಕೆಲ ದಿನಗಳ ಹಿಂದೆ ವಿಡಿಯೋ ವೈರಲ್​ ಆಗಿತ್ತು. ಇದರಲ್ಲಿ ತಾವು ತಮ್ಮ ಟಾಕ್ಸಿಕ್​ ಸಂಬಂಧದಿಂದ ಕುಡುಕುನಾಗಿದ್ದ ಬಗ್ಗೆ ಮಾತನಾಡಿದ್ದಾರೆ. ಫುಲ್​ ಬಾಟಲಿ ಖಾಲಿ ಮಾಡುತ್ತಿದ್ದೆ ಎಂದಿದ್ದಾರೆ. ಕೆಲವರು ಎರಡು ಪೆಗ್ ತೆಗೆದುಕೊಳ್ಳುತ್ತಾರೆ. ಆದರೆ ನಾನು ಹಾಗೆ ಇರಲಿಲ್ಲ. ನಾನು ಕುಡಿಯಲು ಕುಳಿತರೆ ಸಂಪೂರ್ಣ ಬಾಟಲಿಯನ್ನೇ ಕುಡಿದು ಮುಗಿಸುತ್ತಿದ್ದೆ. ಆದರೆ ಕೊನೆಗೆ ಜ್ಞಾನೋದಯ ಆಯಿತು. ಜೀವನದಲ್ಲಿ ಮತ್ತೆ ನಾನು ಎಂದಿಗೂ ಮದ್ಯವನ್ನು ಮುಟ್ಟಬಾರದು ಎಂದು ನಿರ್ಧರಿಸಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಮದ್ಯ ಸೇವಿಸಿಲ್ಲ ಎಂದಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!