
ಮುಂಬೈ (ಜ.18): ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ #10yearsChallenge ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದೆ. ಬಾಲಿವುಡ್ ಸೆಲಬ್ರಿಟಿಗಳೆಲ್ಲರೂ 10 ವರ್ಷದ ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ ಎಂದು ಅಭಿಮಾನಿಗಳಿಗೆ ತೋರಿಸಲು ಉತ್ಸುಕರಾಗಿದ್ದಾರೆ.
ಖ್ಯಾತ ನಿರ್ದೇಶಕ ಕರಣ್ ಜೋಹರ್ 10 ವರ್ಷದ ಹಿಂದಿನ ಹಾಗೂ ಈಗಿನ ಫೋಟೋ ಹಾಕಿ, ಒಂದು ದಶಕ! ಈಗ ಹೇರ್ ಡೈ ಬಳಸುವುದು ಹೆಚ್ಚಾಗಿದೆ ಎಂದು ಬರೆದುಕೊಂಡಿದ್ದಾರೆ.
ಜನ್ನತ್-2 ಖ್ಯಾತಿಯ ಇಶಾ ಗುಪ್ತಾ ಫೋಟೋ ಶೇರ್ ಮಾಡಿ, ನನ್ನನ್ನು ಹತ್ತು ವರ್ಷ ಹಿಂದಕ್ಕೆ ಕೊಂಡೊಯ್ದಿದೆ. ಎಂದು ಭಾವುಕರಾಗಿದ್ದಾರೆ.
ನಟಿ ಆಯೆಷಾ ಟೋಕಿಯಾ ತಮ್ಮ 10ವರ್ಷಹಿಂದಿನ ಫೋಟೋ ಶೇರ್ ಮಾಡಿ, ಕಳೆದ ಹತ್ತು ವರ್ಷಗಳಲ್ಲಿ ಅಚ್ಚರಿ ಎನಿಸುವಷ್ಟು ಲೈಫ್ ಬದಲಾಗಿದೆ. ಮದುವೆ, ತಾಯ್ತನ, ಸಂತೋಷ ಹೀಗೆ ಪ್ರತಿ ಕ್ಷಣವನ್ನೂ ನಾನು ಆನಂದಿಸಿದ್ದೇನೆ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.
ನಟಿ ಕತ್ರಿನಾ ಕೈಫ್ ತುಸು ಭಿನ್ನವಾಗಿ ಚಾಲೆಂಜ್ ಸ್ವೀಕರಿಸಿದ್ದಾರೆ. ಭರತ್ ಸಿನಿಮಾ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾ, ನನ್ನನ್ನು ಇನ್ನೂ 10 ವರ್ಷ ಉಳಿಯುವಂತೆ ಮಾಡಿ ಎಂದು ಕೇಳಿ ಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.