ವಿವಿಧ ರಾಜ್ಯದ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸುತ್ತೂರು ಮಠದ ಶಾಲೆಯಲ್ಲಿ 23 ಜೋಡಿ ಅವಳಿ ಮಕ್ಕಳು!

By Suvarna News  |  First Published Aug 14, 2024, 10:11 PM IST

ಸುತ್ತೂರು ಮಠದ ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಕರ್ನಾಟಕ ಅಷ್ಟೇ ಅಲ್ಲದೇ ಭಾರತದ ವಿವಿಧ ರಾಜ್ಯಗಳ 4 ಸಾವಿಕಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 23 ಜೋಡಿ ಅವಳಿ ಮಕ್ಕಳು ಇರುವುದು ವಿಶೇಷ.


ಮೈಸೂರು (ಆ.14): ಸುತ್ತೂರು ಮಠದ ಜೆಎಸ್‌ಎಸ್ ವಸತಿ ಶಾಲೆಯಲ್ಲಿ 23 ಜೋಡಿ ಅವಳಿ ಮಕ್ಕಳು ಇರುವುದು ವಿಶೇಷ. ಈ ಶಾಲೆಯ ಬೃಹತ್ ಕಟ್ಟಡವನ್ನು ಉದ್ಘಾಟಿಸಿದವರು ರಾಷ್ಟ್ರಪತಿಗಳು. ಇದರ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದವರು ಮಹಿಳಾ ರಾಷ್ಟ್ರಪತಿಗಳು. ಇಲ್ಲಿ ಕಲಿಯುತ್ತಿದ್ದಾರೆ ಒಂದರಿಂದ 10ನೇ ತರಗತಿಗಳವರೆಗೆ ಕರ್ನಾಟಕ ರಾಜ್ಯದ 4 ಸಾವಿರ ಮಕ್ಕಳೊಂದಿಗೆ ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯ, ಮಣಿಪುರ, ಅರುಣಾಚಲಪ್ರದೇಶ, ಮಿಜೋರಾಂ, ಅಷ್ಟೇ ಅಲ್ಲದೆ ಒರಿಸ್ಸಾ, ಜಾರ್ಖಂಡ್, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ 300 ಹೆಚ್ಚು ಮಕ್ಕಳು.

ಯಾವುದೇ ಜಾತಿ, ಮತ, ಭೇದ ಭಾವಗಳಿಲ್ಲದೆ ಶಿಕ್ಷಣ ವಂಚಿತ ಮಕ್ಕಳನ್ನು ಮೈಸೂರು ಜಿಲ್ಲೆಯ ಸುತ್ತೂರಿನ ಸುಂದರ ಪರಿಸರದಲ್ಲಿ ತಮ್ಮ ಮಮತೆಯ ಮಡಿಲಿನಲ್ಲಿ ಸಾಕಿ ಸಲಹುತ್ತಿರುವವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳವರು.

Tap to resize

Latest Videos

ಸುತ್ತೂರು ಮಠದ ಈ ವಸತಿ ಶಾಲೆಯಲ್ಲಿ ಕಲಿತ ಅದೆಷ್ಟೋ ಮಕ್ಕಳು ಈಗ ಸೇನೆಗೆ ಸೇರಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಅದೆಷ್ಟೋ ಮಂದಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ಜೀವನದ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದಾರೆ. ತಾವು ಕಲಿತ ಶಾಲೆಗೆ ಆಗಾಗ ಬಂದು, ಗುರು ಹಿರಿಯರನ್ನು ಕಂಡು ಗೌರವಿಸುತ್ತಿದ್ದಾರೆ.

ಆಶ್ರಯ ಮನೆಯಲ್ಲಿ ಅಂಗನವಾಡಿ, ನಿತ್ಯ ಭಯದ ವಾತಾವರಣದಲ್ಲಿ ಕಾಲ ಕಳೆಯುವ ಮಕ್ಕಳು!

ಪ್ರತಿ ವರ್ಷ ಸುತ್ತೂರಿನ ಜೆಎಸ್‌ಎಸ್ ವಸತಿ ಶಾಲೆಗೆ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಒಂದು ಸಂದರ್ಶನ ಏರ್ಪಡಿಸಲಾಗುತ್ತದೆ.

ಈ ಬಾರಿ ಆಯ್ಕೆಯಾಗಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ 23 ಜೋಡಿ ಅವಳಿ ಮಕ್ಕಳಿದ್ದಾರೆ. ಅವರಲ್ಲಿ ಬೆಳಗಾವಿಯ ಪಂಕಜ್ ಮತ್ತು ಪವನ್ ಜೋಡಿ, ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಮಂಡ್ಯದ ಪ್ರತೀಕ್ ಮತ್ತು ಪ್ರಕುಲ್ ಎರಡನೇ ತರಗತಿಯಲ್ಲಿದ್ದಾರೆ. ಧಾರವಾಡದ ಧ್ಯಾನ್ ಮತ್ತು ಧ್ರುವ ಮೂರನೇ ತರಗತಿಯಲ್ಲಿದ್ದಾರೆ.

ಫೇಸ್ ಬುಕ್ ಗೆಳೆತನಲ್ಲಿ ವಿಳಾಸ ವಿನಿಮಯ, ಲಂಡನ್‌ ನಿಂದ ಚಿನ್ನ ಬಂದಿದೆಯೆಂದು ಬೆದರಿಸಿ 12 ಲಕ್ಷ ವಂಚನೆ!

5ನೇ ತರಗತಿಯಲ್ಲಿ ಪೂರ್ವಿಕ ಮತ್ತು ಸಾನ್ವಿಕ, 7ನೇ ತರಗತಿಯಲ್ಲಿ ಕೋಲಾರ ಜಿಲ್ಲೆಯ ಸಾಯಿ ದರ್ಶನ್ ಮತ್ತು ಪ್ರೀತಮ್, ಚಾಮರಾಜನಗರದ ಆರ್. ಪ್ರತೀಕ್ ಮತ್ತು ಆರ್. ಪ್ರಜಿತ್, ಮಂಡ್ಯದ ಯೋಗ ಪ್ರಭ ಮತ್ತು ಯೋಗ ಪ್ರಿಯ, ಮೈಸೂರಿನ ಸಾನಿಕ ಮತ್ತು ಭೂಮಿಕಾ, ಬಾಗಲಕೋಟೆಯ ಸೃಷ್ಟಿ ಮತ್ತು ಸ್ನೇಹ, 8ನೇ ತರಗತಿಯಲ್ಲಿ ಚಿತ್ರದುರ್ಗದ ಪಾರ್ವತಿ ಮತ್ತು ಪ್ರಕೃತಿ, ದಾವಣಗೆರೆಯ ಗಂಗಾಧರ ಮತ್ತು ಗಿರಿಧರ, ಬೆಂಗಳೂರಿನ ಇಂಚರ ಮತ್ತು ಯುವರಾಜ, ಮೈಸೂರಿನ ಶೀಲಾ ಮತ್ತು ಶಿಲ್ಪಾ, ಅಲ್ಲದೆ ಮೇಘಾಲಯದ ಅವಳಿಗಳಾದ ವಾಂಕಿ ಸುಲ್ಲೆಟ್ ಮತ್ತು ಶಿಲಾಂಗ್ ಸಿಲೆಟ್ ಅವರು 7ನೇ ತರಗತಿಯಲ್ಲಿ ವ್ಯಾಸಂಗ ನಿರತರಾಗಿದ್ದಾರೆ.

ಈ ಅವಳಿಗಳಲ್ಲಿ ಬಹುತೇಕ ಹೆಣ್ಣು ಮಕ್ಕಳಿದ್ದಾರೆ. ಅಂತೆಯೇ ಹೆಣ್ಣು ಗಂಡು ಅವಳಿ ಇಬ್ಬರು ಇದ್ದಾರೆ. ಇವರ ಆಸಕ್ತಿ, ಅಧ್ಯಯನದ ಕುರಿತು ಕೆಲವು ಶಿಕ್ಷಕರು ವಿಶೇಷವಾಗಿ ಗಮನಿಸುತ್ತಿದ್ದಾರೆ. ಅವರಿಗೆ ಅವಶ್ಯಕತೆ ಇರುವ ಮಾರ್ಗದರ್ಶನ ಮತ್ತು ತರಬೇತಿಗಳನ್ನು ನೀಡುವುದರ ಮೂಲಕ ಸಂಸ್ಥೆಯ ಉದಾತ್ತ ಉದ್ದೇಶಗಳನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.

click me!