ಶಾಲಾ ಮಕ್ಕಳಿಗೆ ತಮಿಳುನಾಡಲ್ಲಿ AI, ಕೋಡಿಂಗ್‌ ಪಠ್ಯಕ್ರಮ; ಕರ್ನಾಟಕದ ಮಕ್ಕಳಿಗೆ ಇದು ಸಿಗುತ್ತಾ?

ತಮಿಳುನಾಡಿನಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಯಾಗಿ ಪರಿಚಯಿಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಮತ್ತು ಕೋಡಿಂಗ್, ಮೆಷಿನ್ ಲರ್ನಿಂಗ್ ಮತ್ತು ರೊಬೊಟಿಕ್ಸ್‌ನಂತಹ ವಿಷಯಗಳನ್ನು ಕಲಿಸಲಾಗುವುದು.

Tamil Nadu Schools to Introduce AI and Coding for Classes 6 and 9 gow

ಚೆನ್ನೈ (ಎ.2): ಪಸ್ತುತ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್‌ ಇಂಟೆಲಿಜನ್ಸ್‌ (ಎಐ) ಹೆಚ್ಚು ಮನೆಮಾತಾಗಿದೆ. ಆದರೆ ಎಐ ಬಗ್ಗೆ ತಿಳಿದಿರುವವರು ಅತ್ಯಂತ ವಿರಳ, ಅದರ ಬಳಕೆ ಹೇಗೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬಳಕೆ ಮತ್ತು ದುರ್ಬಳಕೆ ಎರಡೂ ಕೂಡ ಆಗುತ್ತಿದೆ. ಸಾಕಷ್ಟು ಜನರಿಗೆ ಎಐ ಬಗ್ಗೆ ಕಲಿಯಲು ಆಸಕ್ತಿ ಇರಬಹುದು. ಇದಕ್ಕಾಗಿ ಕೋರ್ಸ್ ಗಳನ್ನು ಅನುಸರಿಸಬಹುದು. ಆದರೆ ತಮಿಳುನಾಡಿನಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು ಕಂಪ್ಯೂಟರ್ ವಿಜ್ಞಾನ, ಕೃತಕ ಬುದ್ಧಿಮತ್ತೆ (AI), ಕೋಡಿಂಗ್ ಮತ್ತು ಆನ್‌ಲೈನ್ ಪರಿಕರಗಳ ಮೂಲಭೂತ ಅಂಶಗಳನ್ನು ತಮ್ಮ ಪಠ್ಯಕ್ರಮದ ಭಾಗವಾಗಿ ಪಠ್ಯೇತರ ಚಟುವಟಿಕೆಯಲ್ಲಿ ಕಲಿಯಲಿದ್ದಾರೆ.

ಮೊದಲಿಗೆ ಶಿಕ್ಷಕರಿಗೆ ತರಬೇತಿ
ಮಿಳುನಾಡಿನ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (SCERT) ತಜ್ಞರ ಸಲಹೆಗಳೊಂದಿಗೆ ಪಠ್ಯಕ್ರಮಗಳನ್ನು ಸಿದ್ಧಪಡಿಸಲು ತಯಾರಿ ನಡೆಸುತ್ತಿದ್ದು ಅಂತಿಮ ಹಂತಕ್ಕೆ ತಲುಪಿದೆ. ಹೀಗಾಗಿ ಶೀಘ್ರದಲ್ಲಿ ಈ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲು ಮುಂದಾಗಿದೆ. ಮುಖ್ಯವಾಗಿ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ತರಬೇತಿ ನೀಡಲು ಮುಂದಾಗಿದೆ.

Latest Videos

ಇತಿಹಾಸದ ಪುಟಗಳಲ್ಲಿ ಮರೆಯಾದ ವಿಷ್ಯಗಳ ಬಗ್ಗೆ ತಿಳಿಯಲು ಕರ್ನಾಟಕದ ಐತಿಹಾಸಿಕ ಗ್ರಂಥಾಲಯಗಳ ಪಟ್ಟಿ ಇಲ್ಲಿದೆ

ಪಠ್ಯೇತರ ಚಟುವಟಿಕೆ
ವರದಿಯಂತೆ ಹೊಸ ಪಠ್ಯೇತರ ಚಟುವಟಿಕೆಯಲ್ಲಿ ಕೋಡಿಂಗ್, ಮೆಷಿನ್ ಲರ್ನಿಂಗ್ ಮತ್ತು ರೊಬೊಟಿಕ್ಸ್ ಅನ್ನು ಒಳಗೊಂಡಿರುವುದರ ಜೊತೆಗೆ, ಜಿಯೋಜೀಬ್ರಾ (ಸಂವಾದಾತ್ಮಕ ಗಣಿತ ಅಪ್ಲಿಕೇಶನ್) ಮತ್ತು ಪಿಎಚ್‌ಇಟಿ ( PhET -ಭೌತಶಾಸ್ತ್ರ ಶಿಕ್ಷಣ ತಂತ್ರಜ್ಞಾನ) ಸಿಮ್ಯುಲೇಶನ್‌ಗಳಂತಹ ಆನ್‌ಲೈನ್ ಪರಿಕರಗಳ ಬಗ್ಗೆ ಕೂಡ ಜ್ಞಾನ ಪಡೆಯಬಹುದು. ಇದು ವಿದ್ಯಾರ್ಥಿಗಳು ಈಗಾಗಲೇ ಪಠ್ಯಕ್ರಮದ ಭಾಗವಾಗಿರುವ ಗಣಿತ ಮತ್ತು ವಿಜ್ಞಾನ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ಪರಿಕರಗಳನ್ನು ಮಧ್ಯಮ ಶಾಲೆಗಳ ಹೈಟೆಕ್ ಪ್ರಯೋಗಾಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಲು ತರಬೇತಿ ನೀಡಲಾಗುವುದು.

ಈಗಾಗಲೇ ತಂತ್ರಜ್ಞಾನ ಶಿಕ್ಷಣ ನಿಡುತ್ತಿರುವ ತಮಿಳುನಾಡು
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸ್ಕ್ರ್ಯಾಚ್ ಮತ್ತು ಬ್ಲಾಕ್ಲಿಯಂತಹ ದೃಶ್ಯ ಆಧಾರಿತ ಪ್ರೋಗ್ರಾಮಿಂಗ್ ಪರಿಕರಗಳನ್ನು ಪರಿಚಯಿಸಲಾಗುವುದು, ಇದು ಅನಿಮೇಷನ್‌ಗಳು, ಗೇಮ್ಸ್ ಮತ್ತು ಸಂವಾದಾತ್ಮಕ ಕಥೆಗಳನ್ನು ರಚಿಸಲು ಸಹಾಯಕವಾಗುತ್ತದೆ. ಈ ಹಿಂದೆ ಕೂಡ ತಮಿಳುನಾಡು ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಅದರ ಭಾಗವಾಗಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ  ತಂತ್ರಜ್ಞಾನ ಶಿಕ್ಷಣ ಮತ್ತು ಕಲಿಕಾ ಬೆಂಬಲ (TEALS) ಕಾರ್ಯಕ್ರಮ ಜಾರಿಗೆ ತಂದು , 100 ಕ್ಕೂ ಹೆಚ್ಚು ಶಾಲೆಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯ ಮಾಡಿಕೊಟ್ಟಿದ್ದು,  6 ರಿಂದ 9 ನೇ ತರಗತಿಯ ಸರಿ ಸುಮಾರು 38,000 ವಿದ್ಯಾರ್ಥಿಗಳು ಇದರ ಭಾಗವಾಗಿದ್ದಾರೆ.

40 ಲಕ್ಷ ಸಾಲ ಮಾಡಿ ಅಮೆರಿಕಾಗೆ ಹೋದ, ಕೆಲಸ ಸಿಗದೆ ವಾಪಸ್ಸು, ಈಗ ಸಾಲದ ಮೇಲೆ ಸಾಲ!

ಕರ್ನಾಟಕದಲ್ಲಿ ಇಂತಹ ಯೋಜನೆಗಳು ಯಾವಾಗ?
ಕರ್ನಾಟಕದಲ್ಲಿ ಹಾಗೆ ನೋಡಿದರೆ ಶೈಕ್ಷಣಿಕ ಸುಧಾರಣೆಗಳು ಕಡಿಮೆ. ಬಿಜೆಪಿ ಸರ್ಕಾರ ಆಡಳಿತದಲ್ಲಿ ಒಂದು ಕಾನೂನು ತಂದರೆ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಕಾನೂನು ನಿಯಮಗಳನ್ನು ತರುತ್ತದೆ. 5 ವರ್ಷದ ಆಡಳಿತದಲ್ಲಿ ಶಿಕ್ಷಣದಲ್ಲಿ ಸುಧಾರಣೆ ಏನು ಮಾಡಬಹುದು ಎಂಬುದನ್ನು ಬಿಟ್ಟು, ಬಲಪಂಥೀಯ ಧೋರಣೆ, ಎಡಪಂಥೀಯ ದೋರಣೆಗಳ ಬಗ್ಗೆಯೇ ಚಿಂತನೆ ನಡೆಸುತ್ತದೆ. ಇದನ್ನು ಬಿಟ್ಟು ಶಿಕ್ಷಣದಲ್ಲಿ ಹೊಸತನದ ಅಳವಡಿಕೆ ಮಾಡುವ ಬಗ್ಗೆಯಾಗಲಿ ಆಧುನಿಕ ಶಿಕ್ಷಣದ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆಯಾಗಲಿ ಚಿಂತನೆ ನಡೆಸುವುದಿಲ್ಲ.

vuukle one pixel image
click me!