Harapanahalli Government School: ಬಯಲಲ್ಲೇ ಪಾಠ: ವಿದ್ಯಾರ್ಥಿಗಳ ಪರದಾಟ..!

By Kannadaprabha News  |  First Published Feb 12, 2022, 8:53 AM IST

*  ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತ ಭೂಸೇನಾ ನಿಗಮದಿಂದ ಕಾಮಗಾರಿ ಸ್ಥಗಿತ
*  2021ರ ಆ. 27ರಂದು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದ ಆಗಿನ ಶಾಸಕರು
*  ಆರು ತಿಂಗಳಾದರೂ ಪುನರಾರಂಭವಾಗದ ಕಾಮಗಾರಿ
 


ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಫೆ.12):  ತಾಲೂಕಿನ ಕಣವಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Government School) ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ಬಯಲಿನಲ್ಲೇ ವಿದ್ಯಾರ್ಥಿಗಳು(Students) ಪಾಠ ಆಲಿಸಬೇಕಾದ ಪರಿಸ್ಥಿತಿ ಉದ್ಭ​ವಿ​ಸಿ​ದೆ.

Tap to resize

Latest Videos

ಹೊಸಪೇಟೆ-ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಇರುವ ಹರಪನಹಳ್ಳಿ(Harapanahalli) ತಾಲೂಕಿನ ಕಣವಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 350 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಕೊಠಡಿಗಳು ಶಿಥಿಲಗೊಂಡಿದ್ದರಿಂದ ಸರ್ಕಾರ 7 ನೂತನ ಕೊಠಡಿಗಳನ್ನು 81 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಿ, ಭೂಸೇನಾ ನಿಗಮ (KRIDL) ಕ್ಕೆ ವಹಿಸಿಕೊಟ್ಟಿತು. 2021ರ ಆ. 27ರಂದು ಆಗಿನ ಶಾಸಕರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಒಂದು ತಿಂಗಳು ಕೆಲಸ ನಡೆದು ಆನಂತರ ಕಾಮಗಾರಿ ಸ್ಥಗಿತಗೊಂಡಿತು. ಆರು ತಿಂಗಳಾದರೂ ಕಾಮಗಾರಿ ಪುನರಾರಂಭವಾಗಿಲ್ಲ. ಈಗ ವಿದ್ಯಾರ್ಥಿಗಳು ಪಾಠ ಕೇಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

K-CET Counseling: ಬಿಇ ಸೀಟು ಕಾಯ್ದಿರಿಸಿ ವೈದ್ಯ ಸೀಟು ಪಡೆದರೆ ಡಬಲ್‌ ಶುಲ್ಕ!

ಎರಡು ತರಗತಿಗಳ ವಿದ್ಯಾರ್ಥಿಗಳು ಬಯಲಿನಲ್ಲೇ ಕುಳಿತು ಪಾಠ ಕೇಳಿದರೆ ಇನ್ನೊಂದು ತರಗತಿಯ ವಿದ್ಯಾರ್ಥಿಗಳು ಕಚೇರಿಯಲ್ಲಿ ಪಾಠ ಕೇಳುವ ಪರಿಸ್ಥಿತಿ ಉದ್ಭವಿಸಿದೆ. ಮೊದಲೇ ಕೋವಿಡ್‌(Covid-19) ಬಂದು ಶಾಲೆಗಳು ಬಂದ್‌ ಆಗಿ ಕಲಿಕೆಗೆ ಹಿನ್ನಡೆಯಾಗಿದೆ. ಕೆಲವು ತಿಂಗಳಿನಿಂದ ಶಾಲೆಗಳು ತೆರೆದರೂ ಆತಂಕ ಮುಂದುವರಿದಿತ್ತು. ಇಂತಹ ಪರಿಸ್ಥಿತಿ ಇರುವಾಗ ಭೂಸೇನಾ ನಿಗಮದವರು ಸಮಯಕ್ಕೆ ಸರಿಯಾಗಿ ಕೊಠಡಿಗಳನ್ನು(Class Rooms) ನಿರ್ಮಿಸಿ ಕೊಡದಿದ್ದರೆ ವಿದ್ಯಾರ್ಥಿಗಳ ಗತಿ ಅಧೋಗತಿ ಆಗುವುದರಲ್ಲಿ ಸಂಶಯವಿಲ್ಲ.

ಭೂ ಸೇನಾ ನಿಗಮದವರು ಕೂಡಲೇ ಕೊಠಡಿಗಳ ನಿರ್ಮಾಣ ಕಾಮಗಾರಿ ಪುನಾರಂಭಿಸಬೇಕು ಎಂಬುದು ಕಣವಿಹಳ್ಳಿ ಗ್ರಾಮಸ್ಥರ ಕೋರಿಕೆಯಾಗಿದೆ.

2-3 ಬಾರಿ ಭೂಸೇನಾ ನಿಗಮದ ಕಚೇರಿಗೆ ಹೋಗಿ ಕಾಮಗಾರಿ ಆರಂಭಿಸಬೇಕು ಎಂದು ಮನವಿ ಮಾಡಿದ್ದೇವೆ. ಗ್ರಾಪಂ ವತಿಯಿಂದ ನೀರಿನ ಬಳಕೆಗಾಗಿ ಮೋಟಾರನ್ನು ಬಿಟ್ಟುಕೊಟ್ಟಿದ್ದೇವೆ. ನಮ್ಮ ಸಹಕಾರವಿದೆ, ಕೂಡಲೇ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಹೋರಾಟ ಇದ್ದೇ ಇದೆ ಅಂತ ಕಣವಿಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮೀಚಂದ್ರಶೇಖರ ತಿಳಿಸಿದ್ದಾರೆ. 

ಮೂಲ ಸೌಕರ್ಯಗಳು ಸರಿಯಾಗಿ ಇದ್ದರೆ ಪಾಠ, ಪ್ರವಚನಕ್ಕೆ ಅನುಕೂಲ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭೂಸೇನಾ ನಿಗಮದವರು ಕೂಡಲೇ ಕಟ್ಟ​ಡ ಕಾಮಗಾರಿ ಆರಂಭಿಸಬೇಕು ಅಂತ ಹರಪನಹಳ್ಳಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್‌ ಹೇಳಿದ್ದಾರೆ. 

ಹಣದ ಸಮಸ್ಯೆ ಇತ್ತು, ನಿಗದಿತ ಕಾಮಗಾರಿಯ ಅನುದಾನದಲ್ಲಿ ಶೇ. 60ರಷ್ಟುಹಣ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಆರಂಭಿಸುತ್ತೇವೆ ಅಂತ ಹರಪನಹಳ್ಳಿ ಭೂಸೇನಾ ನಿಗಮ ಎಇ ಆನಂದ ತಿಳಿಸಿದ್ದಾರೆ. 

ಹಿಜಾಬ್-ಕೇಸರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಹೈಕೋರ್ಟ್

ಬೆಂಗಳೂರು: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿಜಾಬ್ (Hijab Row) ಹಾಗೂ ಕೇಸರಿ ಜಟಾಪಟಿಗೆ ಕರ್ನಾಟಕ ಹೈಕೋರ್ಟ್(Karnataka high Court ) ಬ್ರೇಕ್ ಹಾಕಿದೆ.

Hijab Controversy ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ 150 ಶಾಲಾ ಕಾಲೇಜಿನಲ್ಲಿ ಹಿಬಾಜ್ ಬ್ಯಾನ್!

ಹೌದು..ತೀವ್ರ ಕುತೂಹಲ ಮೂಡಿಸಿದ್ದ ಹಿಜಾಬ್ ಸಂಘರ್ಷ ಪ್ರಕರಣ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು (ಗುರುವಾರ) ಮಧ್ಯಂತರ ಆದೇಶ ಹೊರಡಿಸಿದ್ದು,  ಅಂತಿಮ ಆದೇಶ ನೀಡುವವರೆಗೆ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ಆದೇಶ ನೀಡಿದೆ.ಅಲ್ಲದೇ ತಕ್ಷಣವೇ ಶಾಲೆ-ಕಾಲೇಜು ಪ್ರಾರಂಭಿಸಿ ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಸ್ತೃತ ಪೀಠ ಈ ಮಧ್ಯಂತರ ಆದೇಶ ನೀಡಿದೆ.

ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು ಶೀಘ್ರ ಆರಂಭವಾಗಬೇಕು. ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯವು ಮೌಖಿಕ ಆದೇಶದಲ್ಲಿ ತಿಳಿಸಿ ಪ್ರಕರಣವನ್ನು ಸೋಮವಾರಕ್ಕೆ (ಫೆ.15) ಮುಂದೂಡಿದೆ. ರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕು.ಕೆಲವು ದಿನಗಳ ಕಾಲ ನೀವು ನಿಮ್ಮ ನಂಬಿಕೆ ಬಿಡುವುದು ಒಳ್ಳೆಯದು. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು ಎಂದು ಕೋರ್ಟ್ ಹೇಳಿದೆ.
 

click me!