CET: ವಿದ್ಯಾರ್ಥಿಗಳಿಗೆ ಡಬಲ್‌ ಶುಲ್ಕದ ಹೊರೆ ಈ ವರ್ಷ ಇಲ್ಲ: ಸಚಿವ ಅಶ್ವತ್ಥ ನಾರಾಯಣ

By Kannadaprabha News  |  First Published Feb 12, 2022, 6:03 AM IST

 *  ಒಂದು ಶುಲ್ಕ ಮರುಪಾವತಿಸುತ್ತೇವೆ
*  ಪಾವತಿಸಿದ್ದ ಶುಲ್ಕ ವಾಪಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚನೆ
*  ಇದು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತ 
 


ಬೆಂಗಳೂರು(ಫೆ.12):  ನೀಟ್‌(NEET) ಯುಜಿ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟು(Medical Seat) ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಮೊದಲು ಕೆ-ಸಿಇಟಿ ಕೌನ್ಸೆಲಿಂಗ್‌ನಲ್ಲಿ ಎಂಜಿನಿಯರಿಂಗ್‌ ಸೀಟು ಪಡೆದುಕೊಂಡಿದ್ದಲ್ಲಿ ಅವರು ಪಾವತಿಸಿದ್ದ ಶುಲ್ಕ ವಾಪಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ(CN Ashwathnarayan) ಹೇಳಿದ್ದಾರೆ.

ಅಲ್ಲದೆ, ಈ ವಿದ್ಯಾರ್ಥಿಗಳಿಗೆ(Students) ನಿಗದಿತ ಅವಧಿ ಬಳಿಕ ಎಂಜಿನಿಯರಿಂಗ್‌ ಸೀಟು(Engineering Seat) ಹಿಂದಿರುಗಿಸಿದವರಿಗೆ ವಿಧಿಸುತ್ತಿದ್ದ ದಂಡ ಶುಲ್ಕದಿಂದಲೂ(Fee) ವಿನಾಯಿತಿ ನೀಡಲಾಗಿದೆ. ಇದು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತ ಎಂದು ಸಚಿವರು ತಿಳಿಸಿದ್ದಾರೆ.

Tap to resize

Latest Videos

undefined

K-CET Counseling: ಬಿಇ ಸೀಟು ಕಾಯ್ದಿರಿಸಿ ವೈದ್ಯ ಸೀಟು ಪಡೆದರೆ ಡಬಲ್‌ ಶುಲ್ಕ!

ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವರು, ಸಾಮಾನ್ಯವಾಗಿ ಪ್ರತೀ ವರ್ಷ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸೀಟು ಹಂಚಿಕೆ ಒಟ್ಟಿಗೇ ನಡೆಯುತ್ತಿತ್ತು. ಆದರೆ, ಈ ವರ್ಷ ನೀಟ್‌ ಪರೀಕ್ಷಾ ವಿಚಾರ ಕೋರ್ಟ್‌ ಮೆಟ್ಟಿಲೇರಿದ್ದರಿಂದ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಅನಿಶ್ಚಿತ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ ಈಗಾಗಲೇ ಎಂಜಿನಿಯರಿಂಗ್‌ ಸೀಟಿಗೆ ಪ್ರವೇಶಾತಿ ಪಡೆದಿರುವವರಿಗೆ ಈಗ ವೈದ್ಯಕೀಯ ಸೀಟು ಸಿಕ್ಕಿದೆ. ಅಂತಹವರು ತಮಗೆ ಇಷ್ಟವಿರುವ ಸೀಟಿಗೆ ಪ್ರವೇಶ ಪಡೆಯಬಹುದು. ಅಂದರೆ ಎಂಜಿನಿಯರಿಂಗ್‌ ಸೀಟಿನಲ್ಲಾದರೂ ಮುಂದುವರೆಯಬಹುದು. ಇಲ್ಲವೇ ವೈದ್ಯಕೀಯ ಸೀಟಿಗೆ ಪ್ರವೇಶ ಪಡೆಯುವುದಾದರೆ ಎಂಜಿನಿಯರಿಂಗ್‌ ಪ್ರವೇಶಕ್ಕೆ ಪಾವತಿಸಿರುವ ಶುಲ್ಕ ವಾಪಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಪ್ರವೇಶ ಪಡೆದ ಬಳಿಕ ಸೀಟು ಬಿಟ್ಟು ಹೋದವರಿಗೆ ಐದು ಪಟ್ಟು ದಂಡ ವಿಧಿಸುವ ನಿಯಮ ಕಾನೂನಿನಲ್ಲಿದೆ. ಆದರೆ, ಈ ವಿದ್ಯಾರ್ಥಿಗಳಿಗೆ ಯಾವುದೇ ದಂಡ ಶುಲ್ಕ ವಸೂಲಿ ಮಾಡುವಂತಿಲ್ಲ. ಈ ವರ್ಷ ಕಟ್ಟಿದ್ದ ಶುಲ್ವವನ್ನೂ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ. ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕು ಎಂದು ಕೆಇಎಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Hijab Karnataka Breaking ಹಿಜಾಬ್-ಕೇಸರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಹೈಕೋರ್ಟ್

ವಿದ್ಯಾರ್ಥಿಗಳು ಎರಡೂ ಸೀಟಿಗೆ ಶುಲ್ಕ ಪಾವತಿಸಬೇಕಾಗಿರುವ ಬಗ್ಗೆ ‘ಕನ್ನಡಪ್ರಭ’ ಗುರುವಾರ ವರದಿ ಪ್ರಕಟಿಸಿತ್ತು.

ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಎಲ್ಲಾ 150 ಶಾಲಾ ಕಾಲೇಜಿನಲ್ಲಿ ಹಿಬಾಜ್ ಬ್ಯಾನ್!

ಹಿಜಾಬ್ ವಿವಾದ(Karnataka Hijab Controversy) ಇಡೀ ದೇಶವನ್ನೇ ಆವರಿಸಿಕೊಂಡಿದೆ. ಮುಸ್ಲಿಮರ ಮೂಲಭೂತ ಹಕ್ಕನ್ನು ದಮನಿಸಲಾಗುತ್ತಿದೆ ಅನ್ನೋ ವಾದ ಒಂದಡೆಯಾದರೆ, ಸಮವಸ್ತ್ರ ಹೊರತು ಇನ್ಯಾವ ಧರ್ಮದ ವಸ್ತ್ರಗಳಿಗೆ ಅವಕಾಶವಿಲ್ಲ ಅನ್ನೋ ವಾದ ಮತ್ತೊಂದೆಡೆ. ಇದರ ನಡುವೆ ಅತೀ ಮುಖ್ಯವಾಗಿ ಕೇರಳದ(Kerala) ಮುಸ್ಲಿಂ ಶಿಕ್ಷಣ ಸಂಸ್ಥೆ(Muslim Educational Society) ನೀಡಿದ ಸುತ್ತೋಲೆ ಎಲ್ಲರೂ ಗಮನಿಸಲೇಬೇಕು. ಮುಸ್ಲಿಂ ಶಿಕ್ಷಣ ಸಂಸ್ಥೆ ಕೇರಳದ 150 ಶಾಲಾ ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಬ್ಯಾನ್(Hijab Ban) ಮಾಡಿದೆ. 

ಮುಸ್ಲಿಂ ಎಜುಕೇಶನಲ್ ಸೊಸೈಟಿ(MES) ಈ ಸುತ್ತೋಲೆ ಹೊರಡಿಸಿರುವುದು 2019ರಲ್ಲಿ. MES ಕೇರಳದಲ್ಲಿ 150 ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಒಟ್ಟು 85,000 ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರು, ಸಹಾಯಕ ಸಿಬ್ಬಂದಿ ಸೇರಿದಂತೆ ವೃತ್ತಿಪರರು ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. MES ನಡೆಸಲ್ಪಡುವ ಎಲ್ಲಾ ಮುಸ್ಲಿಂ ಶಾಲಾ ಕಾಲೇಜುಗಳಲ್ಲಿ(Schools College) ಹಿಜಾಬ್ ಬ್ಯಾನ್ ಮಾಡಿದೆ. MESನಿಂದ 10 ವೃತ್ತಿಪರ ಸಂಸ್ಥೆಗಳು, 18 ಕಲೆ ಮತ್ತು ವಿಜ್ಞಾನ ಕಾಲೇಜುಗಳು, 36 CBSE ಶಾಲೆಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದೆ. 
 

click me!