ಗೀವ್ ಮಿ ಸಮ್ ಸನ್ ಶೈನ್ ಎಂದ ವಿದ್ಯಾರ್ಥಿ: ಉತ್ತರ ಪತ್ರಿಕೆಯಲ್ಲಿ ಸಾಲು ಸಾಲು ಮೊಟ್ಟೆ ನೀಡಿದ ಶಿಕ್ಷಕ

By Anusha Kb  |  First Published Apr 3, 2023, 3:31 PM IST

ಉತ್ತರ ಪತ್ರಿಕೆ ತಿದ್ದುವ ಶಿಕ್ಷಕರಿಗಂತೂ ಕೆಲ ಉತ್ತರ ಪತ್ರಿಕೆಗಳಲ್ಲಿ ಮಾರ್ಕ್‌ ಸಿಗದಿದ್ದರೂ ಮಜಾವಂತೂ ಸಿಗುತ್ತಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ವಿದ್ಯಾರ್ಥಿಯ ಪ್ರಶ್ನೆ ಪತ್ರಿಕೆಯೊಂದು ಸಖತ್ ವೈರಲ್ ಆಗಿದೆ. 


ಚಂಢೀಗಢ: ಮಾರ್ಚ್ ಏಪ್ರಿಲ್ ಬಂತೆಂದರೆ  ಎಲ್ಲೆಡೆ ಪರೀಕ್ಷಾ ಸಮಯಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಪಾಲಿಗೆ ಬಹಳ ಆತಂಕ ತರುವ ವಿಚಾರ. ಅದರಲ್ಲೂ ಇತ್ತೀಚೆಗೆ ಮಕ್ಕಳ ಜೊತೆ ಜೊತೆಗೆ ಪೋಷಕರು ಕೂಡ ಚಿಂತೆ ಪಡುವಂತೆ ಮಾಡುತ್ತಿವೆ ಈ ಪರೀಕ್ಷೆಗಳು.  ಅಲ್ಲದೇ ಪೋಷಕರು ಮಕ್ಕಳ ಮೇಲೆ ಇಟ್ಟಿರುವ ಹೈ ಸ್ಕೋರ್‌ ನಿರೀಕ್ಷೆಯೂ ಮಕ್ಕಳ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.  ಆದರೂ ಕೆಲ ವಿದ್ಯಾರ್ಥಿಗಳು ಆತಂಕದ ಸಮಯವನ್ನು ರಸಮಯವಾಗಿಸುತ್ತಾರೆ. ಅದರಲ್ಲೂ ಉತ್ತರ ಪತ್ರಿಕೆ ತಿದ್ದುವ ಶಿಕ್ಷಕರಿಗಂತೂ ಕೆಲ ಉತ್ತರ ಪತ್ರಿಕೆಗಳಲ್ಲಿ ಮಾರ್ಕ್‌ ಸಿಗದಿದ್ದರೂ ಮಜಾವಂತೂ ಸಿಗುತ್ತಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ವಿದ್ಯಾರ್ಥಿಯ ಪ್ರಶ್ನೆ ಪತ್ರಿಕೆಯೊಂದು ಸಖತ್ ವೈರಲ್ ಆಗಿದೆ. 

ವೈರಲ್ ಆಗುವಂತಹದ್ದೇನಿದೆ ಉತ್ತರಪತ್ರಿಕೆಯಲ್ಲಿ (Answer Sheet) ಅಂತ ನಿಮಗೂ ಅಚ್ಚರಿ ಆಗಬಹುದು. ಇಲ್ಲಿ ವಿದ್ಯಾರ್ಥಿಯೊರ್ವ ಉತ್ತರಪತ್ರಿಕೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವ ಬದಲು  ಸಿನಿಮಾ ಹಾಡೊಂದನ್ನು ಉತ್ತರ ಪತ್ರಿಕೆ ತುಂಬಾ ಬರೆದು ಬಿಟ್ಟಿದ್ದಾನೆ.  ಸಾಮಾನ್ಯವಾಗಿ ಪರೀಕ್ಷೆ ಎಂದರೆ ಕೆಲ ಓದದ ವಿದ್ಯಾರ್ಥಿಗಳು ಮಲ್ಲನೆ ಕಾಪಿ ಚೀಟಿ ತೆಗೆದುಕೊಂಡು ಹೋಗಿ ಪರೀಕ್ಷಾ ಮೇಲ್ವಿಚಾರಕರ ಕಣ್ಣು ತಪ್ಪಿಸಿ ಉತ್ತರ ಕಾಪಿ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲಿ ಚಂಢೀಗಢ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯುದ್ಧಕ್ಕೂ ಸಿನಿಮಾ ಹಾಡು ಬರೆಯಲು ನಿರ್ಧರಿಸಿ ಹಾಗೆಯೇ ಮಾಡಿದ್ದಾರೆ.

Tap to resize

Latest Videos

ಲವ್, ರೋಮ್ಯಾನ್ಸ್ ಮಾಡಲೆಂದೇ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಕೊಟ್ಟ ಚೀನಾ!

ತಾವು ಮೊದಲೇ ನಿರ್ಧರಿಸಿದಂತೆ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಆಮಿರ್ ಖಾನ್ (Aamir Khan) ನಟನೆಯ 3 ಈಡಿಯಟ್ಸ್‌ ಸಿನಿಮಾದ ಗೀವ್ ಮೀ ಸನ್ ಶೈನ್, ಗೀವ್ ಮೀ ಸಮ್ ರೈನ್, ಗೀವ್ ಮೀ ಎನದರ್ ಚಾನ್ಸ್ , ಐ ವಾಂಟ್ ಟೂ ಗ್ರೋ ಅಪ್ ಒನ್ಸ್ ಆಗೇನ್ ಎಂಬ ಸಾಲುಗಳನ್ನು ಉತ್ತರ ಪತ್ರಿಕೆಯುದ್ಧಕ್ಕೂ ಬರೆದಿದ್ದಾರೆ. ಅಲ್ಲದೇ ನಂತರ ತಮಗೆ ಪಾಠ ಮಾಡಿದ ಶಿಕ್ಷಕಿಯನ್ನು ಹೊಳಿರುವ ವಿದ್ಯಾರ್ಥಿಗಳು (student), ಮ್ಯಾಮ್ ನೀವು ತುಂಬಾ ಬುದ್ಧಿವಂತ ಶಿಕ್ಷಕಿ, ಆದರೆ ನನಗೆ  ಇಷ್ಟೊಂದು ಕಠಿಣ ಪರಿಶ್ರಮ ಹಾಕಲಾಗದು ಇದು ನನ್ನ ತಪ್ಪು. ದೇವರೇ ನನಗೆ ಸ್ವಲ್ಪ ಪ್ರತಿಭೆ ನೀಡು ಎಂದು ವಿದ್ಯಾರ್ಥಿ ಪ್ರಮಾಣಿಕವಾಗಿ ಬರೆದುಕೊಂಡಿದ್ದಾನೆ. 

ಆದರೆ  'ಗುಡ್ ಥಾಟ್‌ ಬಟ್ ಇಟ್ ಡಿಟ್ನಾಟ್ ವರ್ಕ್ಸ್ ಹಿಯರ್' ( ಒಳ್ಳೆಯ ಯೋಚನೆ ಆದರೆ ಅದು ಇಲ್ಲಿ ಕೆಲಸಕ್ಕೆ ಬಾರದು ಎಂದು ಪೇಪರ್ ತಿದ್ದಿರುವ ಶಿಕ್ಷಕರು ಕಾಮೆಂಟ್ ಮಾಡಿ,  ಪತ್ರಿಕೆಯ ಬದಿಯಲ್ಲಿ ಸಾಲು ಸಾಲು ಸೊನ್ನೆಗಳನ್ನು ನೀಡಿದ್ದಾರೆ.  ಅಲ್ಲದೇ ಪ್ರಶ್ನೆ ಪತ್ರಿಕೆ ಕೊನೆಗೆ ಯೂ ಶುಡ್ ರೈಟ್ ಮೋರ್ ಆನ್ಸರ್‌ (ನೀವು ಇನ್ನಷ್ಟು ಉತ್ತರಗಳನ್ನು ಬರೆಯಬೇಕು ಎಂದು ಕೆಂಪು ಶಾಯಿಯಲ್ಲಿ ಬರೆದಿದ್ದಾರೆ) ಆದರೆ ಈ ಪ್ರಶ್ನೆ ಪತ್ರಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ದೀಪದ ಬೆಳಕಲ್ಲಿ ಓದುತ್ತಿರುವ ಆದಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು: ಪರೀಕ್ಷೆ ಬರೆಯಲು ಸಂಕಷ್ಟ

ಅನೇಕರು ವಿದ್ಯಾರ್ಥಿಯ  ಕೈ ಬರಹ ಚೆನ್ನಾಗಿದೆ ಎಂದು ಹೊಗಳಿದ್ದಾರೆ, ಮತ್ತೆ ಕೆಲವರು ಈ ಕೈ ಬರಹ ಮುದ್ದಾಗಿದ್ದು, ಇದು ಹುಡುಗರದಂತೂ ಅಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.  ಈ ಪ್ರಶ್ನೆ ಪತ್ರಿಕೆ ಅನೇಕರಿಗೆ ತಮ್ಮ ಶಾಲಾ ದಿನಗಳನ್ನು ನೆನಪಿಸಿದ್ದು, ನಾವು ಕೂಡ ಶಾಲಾ ದಿನಗಳಲ್ಲಿ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳು ಉತ್ತರ ಗೊತ್ತಿಲ್ಲದಿದ್ದರೆ  ಪ್ರಶ್ನೆಯನ್ನೆ ಮತ್ತೆ ಮತ್ತೆ ಬರೆದು ಪತ್ರಿಕೆಯನ್ನು ತುಂಬುವುದು, ಅಥವಾ ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಬರೆದು  ಪತ್ರಿಕೆಯನ್ನು ತುಂಬಿ ಕನಿಷ್ಠ ಬರೆದಿರುವುದಕ್ಕಾದರೂ ಕನಿಷ್ಠ ಪೇಜ್‌ಗೊಂದರಂತೆ ಮಾರ್ಕ್ ಕೊಟ್ಟರೂ ಪಾಸಾಗಬಹುದು ಎಂದು ಯೋಚನೆ ಮಾಡುತ್ತಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಕಿತಾಪತಿ ಆಗಾಗ ವೈರಲ್ ಆಗುತ್ತಿರುತ್ತವೆ.

 

click me!