ಶಾಲೆಗಳು ಆರಂಭವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳನ್ನು ಭಿನ್ನವಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಶಾಲೆಯ ಆರಂಭದಲ್ಲಿಯೇ ಡೊಳ್ಳು ಬಾರಿಸುತ್ತಾ, ರಂಗೋಕಿ ಹಾಕಿ, ತಳಿರು ತೋರಣ ಕಟ್ಟಿ ಮಕ್ಕಳಿಗೆ ಕುಂಕುಮ ಹಚ್ಚಿ ಸ್ವಾಗತಿಸಲಾಯಿತು.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಮೇ.16): ಕಳೆದ ಎರಡು ವರ್ಷಗಳಿಂದ ಕೊರೊನಾ (Covid) ಹೊಡೆತಕ್ಕೆ ಸಿಕ್ಕು ಇಡೀ ಶೈಕ್ಷಣಿಕ ವ್ಯವಸ್ಥೆ ದಾರಿ ತಪ್ಪಿತ್ತು. ಆದರೆ ಇದೀಗ ಶೈಕ್ಷಣಿಕ ವ್ಯವಸ್ಥೆ (Education system) ತನ್ನ ದಾರಿಗೆ ಬರುತ್ತಿದ್ದು, ಇಂದಿನಿಂದ ಶಾಲೆಗಳು (School) ಆರಂಭವಾಗುತ್ತಿದವೆ. ಈ ಹಿನ್ನೆಲೆಯಲ್ಲಿ ಇಲ್ಲೊಂದು ಜಿಲ್ಲೆಯಲ್ಲಿ ಇಂದು ಮಕ್ಕಳನ್ನು ಭಿನ್ನವಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಅಷ್ಟಕ್ಕೂ ಯಾವ ಊರಲ್ಲಿ ಇಂತಹದ್ದೊಂದು ವಿಭಿನ್ನ ಸ್ವಾಗತ ನಡೆದಿರೋದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ಯಾವ ಜಿಲ್ಲೆಯಲ್ಲಿ ಭಿನ್ನವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದು?
ಕೊಪ್ಪಳ (Koppala) ಜಿಲ್ಲೆ, ಈ ಜಿಲ್ಲೆಯ ಶೈಕ್ಷಣಿಕ, ಧಾರ್ಮಿಕ, ಕಲೆ, ಸಾಂಸ್ಕೃತಿಕ ರಂಗಗಳಲ್ಲಿ ಪ್ರಸಿದ್ಧಿ ಪಡೆದ ಜಿಲ್ಲೆ.ಜೊತೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರ ಸ್ವತಃ ಜಿಲ್ಲೆಯೂ ಸಹ ಕೊಪ್ಪಳ ಜಿಲ್ಲೆಯಾಗಿದೆ. ಇಂತಹ ಜಿಲ್ಲೆಯ ಅದರಲ್ಲಿಯೂ ವಿಶೇಷವಾಗಿ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಕೊಪ್ಪಳ ನಗರದ ಸಿಪಿಎಸ್ ಶಾಲೆ ಸೇರಿದಂತೆ ಹಲವೆಡೆ ಇಂದು ಶಾಲೆ ಆರಂಭವಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತ ಮಾಡಲಾಯಿತು.
KODAGU ರಾಷ್ಟ್ರಮಟ್ಟದ ಸುದ್ದಿಯಾಯ್ತು ಭಜರಂಗದಳದಿಂದ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ
ಯಾವ ರೀತಿಯಲ್ಲಿ ಭಿನ್ನವಾಗಿ ಮಕ್ಕಳನ್ನು ಸ್ವಾಗತಿಸಿದ್ದು: ಕೊರೊನಾದಿಂದ ಬಹುತೇಕ ಮಕ್ಕಳು ಶಾಲೆಯ ಮೆಟ್ಟಿಲನ್ನೇ ಹತ್ತಿದ್ದಿಲ್ಲ. ಆದರೆ ಈಗ ಶಾಲೆಗೆ ಮಕ್ಕಳು ಬರುತ್ತಿದ್ದಾದೆ. ಹೀಗಾಗಿ ಬೇಸಿಗೆ ರಜೆ ಕಳೆದು ಇಂದಿನಿಂದ ಶಾಲೆಗಳು ಆರಂಭವಾಗುತ್ತಿವೆ. ಈ ಹಿನ್ನಲೆಯಲ್ಲಿ ಇಂದು ಶಾಲೆಗೆ ಬರುವ ಮಕ್ಕಳನ್ನು ಕೊಪ್ಪಳದಲ್ಲಿ ವಿಭಿನ್ನವಾಗಿ ಸ್ವಾಗತ ಮಾಡಲಾಯಿತು. ಶಾಲೆಯ ಆರಂಭದಲ್ಲಿಯೇ ಡೊಳ್ಳು ಬಾರಿಸುತ್ತಾ, ರಂಗೋಕಿ ಹಾಕಿ, ತಳಿರು ತೋರಣ ಕಟ್ಟಿ ಮಕ್ಕಳಿಗೆ ಕುಂಕುಮ ಹಚ್ಚಿ, ಅವರ ಮೇಲೆ ಪುಪ್ಷವೃಷ್ಟಿಗೈದು, ಬಳಿಕ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು .ಇದಾದ ನಂತರ ವಿದ್ಯಾರ್ಥಿಗಳನ್ನು ತರಗತಿಯ ಒಳಗಡೆ ಕರೆದುಕೊಂಡು ಹೋಗಲಾಯಿತು.
ಯಾರೆಲ್ಲ ಸ್ವಾಗತ ಮಾಡಿದರು: ಇನ್ನು ಇಂದು ಶಾಲೆಗಳು ಆರಂಭವಾಗುತ್ತುರುವ ಹಿನ್ನಲೆಯಲ್ಲಿ ಇಂದು ಸ್ವತಃ ಕೊಪ್ಪಳ ಬಿಇಓ ಉಮೇಶ್ ಪೂಜಾರ್ ಫೀಲ್ಡ್ ಗೆ ಇಳಿದಿದ್ದರು. ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮಕ್ಕೆ ಆಗಮಿಸಿದ ಬಿಇಓ ಉಮೇಶ್ ಪೂಜಾರ್ ಸ್ವತಃ ತಾವೇ ಡೊಳ್ಳು ಬಾರಿಸುವ ಮೂಲಕ ತಾವೊಬ್ಬ ಮಕ್ಕಳ ಸ್ನೇಹಿ ಅಧಿಕಾರಿ ಎಂದು ತೊರಿಸಿಕೊಟ್ಟರು. ಇದರ ಜೊತೆಗೆ ಕೊಪ್ಪಳ ನಗರದ ಸಿಪಿಎಸ್ ಶಾಲೆಯ ಸಮಸ್ತ ಶಿಕ್ಷಕ ವೃಂದದವರು ಸಹ ಮಕ್ಕಳಿಗೆ ಹೂವಿನ ಮಳೆ ಗೈದು,ಡೊಳ್ಳು ಬಾರಿಸಿ, ಮಕ್ಕಳನ್ನು ಖುಷಿಗೊಳಿಸದರು.
ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಯ್ತಾ ಕರ್ನಾಟಕ ಶಿಕ್ಷಣ ಇಲಾಖೆ!?
ಒಟ್ಟಿನಲ್ಲಿ ಇಂದಿನಿಂದ ಆರಂಭಗೊಂಡ ಕೊಪ್ಪಳ ಜಿಲ್ಲೆಯ ಶಾಲೆಗಳ ಶಿಕ್ಷಕರಿಂದ ಇಂದು ವಿಭಿನ್ನ ರೀತಿಯಲ್ಲಿ ಮಕ್ಕಳನ್ನು ಸ್ವಾಗತಿಸಲಾಯಿತು. ಮಕ್ಕಳ ಖುಷಿ ನೋಡಿದರೆ ಈ ಖುಷಿಯ ಮುಂದೆ ಬೇರೇನೂ ಇಲ್ಲ ಎಂದರೂ ಎನ್ನುವುದಂತು ಸತ್ಯ.