ಆದಿತ್ಯ ಬಿರ್ಲಾ ಎಜುಕೇಶನ್ ಅಕಾಡೆಮಿಯಿಂದ ಶಿಕ್ಷಣದಲ್ಲಿ ಪಿಜಿಡಿಜಿಇ, ಅಪ್ಲೈ ಮಾಡಿ

By Suvarna News  |  First Published May 16, 2022, 3:09 PM IST

* ಶಿಕ್ಷಣದಲ್ಲಿ ಸಾತ್ನಕೋತ್ತರ ಡಿಪ್ಲೋಮಾ ಕೋರ್ಸ್ ನೀಡುತ್ತಿರುವ ಎಬಿಇಎ
* ಬಿ.ಕೆ. ಬಿರ್ಲಾ ಕಾಲೇಜ್ ಆಫ್ ಆರ್ಟ್ಸ್  ಸೈನ್ಸ್ ಮತ್ತು ಕಾಮರ್ಸ್ ಸಹಯೋಗ
* ಪ್ರಸಿದ್ಧ ಶಾಲೆಗಳಲ್ಲಿ ಇಂಟರ್ನ್‌ಶಿಪ್ ಅನ್ನು ಈ ಕೋರ್ಸ್ ಒಳಗೊಂಡಿದೆ
 


ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಸಂಸ್ಥೆಯಾದ  ಆದಿತ್ಯ ಬಿರ್ಲಾ ಎಜುಕೇಶನ್ ಅಕಾಡೆಮಿ (Aditya Birla Education Academy - ABEA) ಯು ಜಾಗತಿಕ ಶಿಕ್ಷಣದಲ್ಲಿ ಪಿಜಿ ಡಿಪ್ಲೊಮಾ (PGDGE) ಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆದಿತ್ಯ ಬಿರ್ಲಾ ಎಜುಕೇಶನ್ ಅಕಾಡೆಮಿ (ABEA), ಬಿ.ಕೆ. ಬಿರ್ಲಾ ಕಾಲೇಜ್ ಆಫ್ ಆರ್ಟ್ಸ್  ಸೈನ್ಸ್ ಮತ್ತು ಕಾಮರ್ಸ್ ಸಹಯೋಗದ ಮೂಲಕ ಈ ಕೋರ್ಸ್ ನೀಡಲಾಗುತ್ತಿದೆ. ಸ್ನಾತಕೋತ್ತರ ಡಿಪ್ಲೋಮಾ ಇನ್ ಗ್ಲೋಬಲ್ ಎಜುಕೇಶನ್ (ಪಿಜಿಡಿಜಿಇ) ಕಾರ್ಯಕ್ರಮದ ಎರಡನೇ ಬ್ಯಾಚ್‌ಗೆ ಪ್ರವೇಶಕ್ಕೆ ಅರ್ಜಿಗಳನ್ನ ಆಹ್ವಾನಿಸಿದೆ.  ಶಾಲಾ-ಆಧಾರಿತ ಅಪ್ಲಿಕೇಶನ್‌ಗಳೊಂದಿಗೆ ಕಠಿಣ ಮತ್ತು ಸಂಬಂಧಿತ ಶಿಕ್ಷಣವನ್ನು ಸಂಯೋಜಿಸುವ ಸಂಯೋಜಿತ ಕಲಿಕೆಯ ಪಠ್ಯಕ್ರಮದ ಮೂಲಕ ಶಿಕ್ಷಕರಿಗೆ ಅಂತಾರಾಷ್ಟ್ರೀಯ ಶಿಕ್ಷಣ (International Education) ದಲ್ಲಿ ವೃತ್ತಿಜೀವನ ರೂಪಿಸಲು ಅವಕಾಶವನ್ನು ಒದಗಿಸುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಶಾಲೆಗಳಲ್ಲಿ ಬೆಳೆಯಲು ಸಹಾಯ ಮಾಡುವ ಜೊತೆಗೆ ಕೌಶಲ್ಯ ಅಭಿವೃದ್ಧಿಯ ಹೊರತಾಗಿ, ಅಂತಾರಾಷ್ಟ್ರೀಯ ಬೋರ್ಡ್ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಶಿಕ್ಷಕರಿಗೆ (Teachers) ಈ ಕೋರ್ಸ್ ಸಹಾಯವಾಗಲಿದೆ. ಆದಿತ್ಯ ಬಿರ್ಲಾ ಎಜುಕೇಶನ್ ಅಕಾಡೆಮಿ (ABEA) ಪಿಜಿ ಡಿಪ್ಲೋಮಾ ಕೋರ್ಸ್ಗೆ ಜೂನ್ 30, 2022 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಧಿಕೃತವಾಗಿ ಜುಲೈ (July) ನಲ್ಲಿ ಈ ಕೋರ್ಸ್ ಪ್ರಾರಂಭವಾಗುತ್ತದೆ.

ಪೆಟ್ರೋಲಿಯಂ ಇಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು

Tap to resize

Latest Videos

 ಆದಿತ್ಯ ಬಿರ್ಲಾ ಎಜುಕೇಶನ್ ಅಕಾಡೆಮಿ (ABEA)ಯ ಗ್ಲೋಬಲ್ ಎಜ್ಯುಕೇಶನ್ ಇನ್ ಪಿಜಿ ಡಿಪ್ಲೋಮಾ ಕೋರ್ಸ್ ಅನ್ನು 9 ಮಾಡ್ಯೂಲ್‌ಗಳಾಗಿ ವಿಂಗಡಿಸಲಾಗಿದೆ. ವರ್ಷಪೂರ್ತಿ ಪಠ್ಯಕ್ರಮವು ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ಉತ್ತಮ ಅಭ್ಯಾಸಗಳ ಅನುಷ್ಠಾನದ ಮೇಲೆ ಕೇಂದ್ರೀಕರಿಸುತ್ತದೆ. ಕೋರ್ಸ್ ಕಲಿಕೆಗೆ ಸಂಶೋಧನಾ ಆಧಾರಿತ ವಿಧಾನವನ್ನು ಅನುಸರಿಸುತ್ತದೆ. ಬೋಧನೆಯ ಪ್ರಾಯೋಗಿಕ ಅಂಶಗಳನ್ನು ಕಲಿಯಲು ಇಂಟರ್ನ್‌ಶಿಪ್ ಮಾಡ್ಯೂಲ್ ಮತ್ತು ಅಂತಿಮ ಕ್ಯಾಪ್ಸ್ಟೋನ್ ಯೋಜನೆಯನ್ನು ಹೊಂದಿದೆ.

ಪ್ರಸ್ತುತ ಸ್ಪರ್ಧಾತ್ಮಕ ಲ್ಯಾಂಡ್‌ಸ್ಕೇಪ್‌ಗೆ ಹೊಂದಿಕೊಳ್ಳಲು ಇಂದಿನ ಶಿಕ್ಷಣ ತಜ್ಞರು ನವೀಕೃತ ಶೈಕ್ಷಣಿಕ ಕೌಶಲ್ಯ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಹೊಂದಿರಬೇಕು. ಮೊದಲ ಬ್ಯಾಚ್ ಶಿಕ್ಷಣ ತಜ್ಞರ ಯಶಸ್ಸಿನ ನಂತರ, ಜಾಗತಿಕ ಸೆಟ್ಟಿಂಗ್‌ನಲ್ಲಿ ಪ್ರಾಯೋಗಿಕ ಬೋಧನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಹೆಚ್ಚಿನ ಶೈಕ್ಷಣಿಕ ವೃತ್ತಿಪರರಿಗೆ ವೇದಿಕೆಯನ್ನು ಒದಗಿಸಲು ನಾವು ಸಂತೋಷಪಡುತ್ತೇವೆ ಅಂತಾರೆ ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷೆ ನೀರ್ಜಾ ಬಿರ್ಲಾ.

ಬುಧವಾರ ಮತ್ತು ಶನಿವಾರದಂದು ಕೆಲಸದ ಸಮಯ ಮುಗಿದ ನಂತರ ಸಿಂಕ್ರೊನಸ್ ಆನ್‌ಲೈನ್ ತರಗತಿ (online Classes) ಗಳನ್ನು ನಡೆಸಲಾಗುತ್ತದೆ. ಈ ವ್ಯವಸ್ಥೆಯು ತಮ್ಮ ನಗರಗಳಲ್ಲಿ ವಾಸಿಸುವ ಸ್ಥಳದ ಸಮೀಪವಿರುವ ಪ್ರಸಿದ್ಧ ಶಾಲೆಗಳಲ್ಲಿ ಇಂಟರ್ನ್‌ಶಿಪ್ (Internship) ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಜೊತೆಗೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ (campus placement) ಸಹಾಯವನ್ನು ನೀಡುತ್ತದೆ. PGDGE ಕೋರ್ಸ್ ಭಾಗವಹಿಸುವವರ ಸಮಗ್ರ ಬೆಳವಣಿಗೆ ಮತ್ತು ಮೌಲ್ಯಮಾಪನದ 80:20 ಅನುಪಾತದ ಮೇಲೆ ಕೇಂದ್ರೀಕರಿಸುತ್ತದೆ. ಅರ್ಜಿದಾರರು ಕೋರ್ಸ್‌ಗೆ ಪರಿಗಣಿಸಲು ಯಾವುದೇ ವಿಭಾಗದ ಪದವೀಧರರಾಗಿರಬೇಕು. ಕೋರ್ಸ್ ಶುಲ್ಕ ರೂ 75,000 (ತೆರಿಗೆ ಸೇರಿದಂತೆ) ಪಾವತಿಸಬೇಕಾಗುತ್ತೆ. ಮೂರು ಕಂತುಗಳಲ್ಲಿ ಶುಲ್ಕವನ್ನು ಪಾವತಿಸಬಹುದು.

ಹರಿಯಾಣ ಸರ್ಕಾರದಿಂದ 3 ಲಕ್ಷ ಟ್ಯಾಬ್ ವಿತರಣೆ

ಕಾಲೇಜುಗಳ ಸಹಯೋಗದಲ್ಲಿ ABEA     ಒದಗಿಸುತ್ತಿರುವ ಈ ಕೋರ್ಸು ಶಿಕ್ಷಕರಿಗೆ ನೆರವಾಗಲಿದೆ. ಈಗ ಎರಡನೇ ಬ್ಯಾಚ್ ಆರಂಭವಾಗುತ್ತಿದೆ. ಸ್ಪರ್ಧಾತ್ಮಕವಾಗಿ ಶಿಕ್ಷಕರನ್ನು ರೂಪಿಸುವ ಹೊಣೆಗಾರಿಕೆಯನ್ನು ಈ ಕೋರ್ಸ್‌ನಲ್ಲಿ ಕಾಣಬಹುದಾಗಿದೆ. ಜತೆಗೆ, ಇಲ್ಲಿ ಕೋರ್ಸ್ ಪೂರ್ತಿ ಮಾಡಿದವರಿಗೆ ಪ್ಲೇಸ್‌ಮೆಂಟ್ ಕೂಡ ಕಲ್ಪಿಸಲಾಗುತ್ತದೆ. ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. 

click me!