Aditi Tiwari Facebook Job: ಫೇಸ್‌ಬುಕ್‌ನಿಂದ ಪಾಟ್ನಾ ವಿದ್ಯಾರ್ಥಿನಿಗೆ ₹1.6 ಕೋ ಆಫರ್

Published : Apr 06, 2022, 03:31 PM ISTUpdated : Apr 06, 2022, 03:32 PM IST
Aditi Tiwari Facebook Job: ಫೇಸ್‌ಬುಕ್‌ನಿಂದ  ಪಾಟ್ನಾ ವಿದ್ಯಾರ್ಥಿನಿಗೆ ₹1.6 ಕೋ ಆಫರ್

ಸಾರಾಂಶ

*ಕ್ಯಾಂಪಸ್ ಸಂದರ್ಶನದಲ್ಲಿ ಭಾರಿ ಮೊತ್ತದ ಸಂಬಳ ಪ್ಯಾಕೇಜ್‌ ಉದ್ಯೋಗ ಪಡೆದ ವಿದ್ಯಾರ್ಥಿನಿ *ಅದಿತಿ ತಿವಾರಿಗೆ ಫೇಸ್‌ಬುಕ್‌ನಲ್ಲಿ ಫ್ರಂಟ್ ಎಂಡ್ ಎಂಜಿನಿಯರ್ ಆಗಿ ಕೆಲಸ  *ಎನ್ಐಟಿ ಪಾಟ್ನಾದ ಐದು ವರ್ಷದಲ್ಲೇ ವಿದ್ಯಾರ್ಥಿ ಪಡೆಯುತ್ತಿರುವ ದಾಖಲೆ ಸಂಬಳ 

ಪಾಟ್ನಾ(ಎ.6) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್‌ಗಳು ಹುಡುಕಿಕೊಂಡು ಬರುತ್ತವೆ. ಅದರಲ್ಲೂ ಕಾಲೇಜ್‌ಗಳು ನಡೆಸುವ ಕ್ಯಾಂಪಸ್‌ ಸಂದರ್ಶನಗಳು ಪ್ರತಿಭಾವಂತರಿಗೆ ವರದಾನಗಳಾಗಿವೆ. ಸಾಕಷ್ಟು ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸಂಬಳ ಪ್ಯಾಕೇಜ್‌ನೊಂದಿಗೆ ನೌಕರಿಯನ್ನು ಗಿಟ್ಟಿಸಿಕೊಂಡಿದ್ದನ್ನು ಕೇಳಿದ್ದೀರಿ. ಆ ಸಾಲಿಗೆ ಬಿಹಾರದ ಪಾಟ್ನಾ ವಿದ್ಯಾರ್ಥಿನಿಯು ಸೇರುತ್ತಾಳೆ. NIT ಪಾಟ್ನಾದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಫೇಸ್‌ಬುಕ್‌ನಿಂದ 1.6 ಕೋಟಿ ಪ್ಯಾಕೇಜ್ ಪಡೆದಿದ್ದಾಳೆ.

ಈವರೆಗೂ NIT ಪಾಟ್ನಾದಲ್ಲಿ ಯಾವುದೇ ವಿದ್ಯಾರ್ಥಿ ಇಷ್ಟು ದೊಡ್ಡ ಮೊತ್ತದ ಅತ್ಯಧಿಕ ಪ್ಯಾಕೇಜ್ ಪಡೆದಿರಲಿಲ್ಲ. ಇಂಥ ಉನ್ನತ ಪ್ಯಾಕೇಜ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ (ECE)ನ ಅಂತಿಮ ವರ್ಷದ ವಿದ್ಯಾರ್ಥಿನಿ ಅದಿತಿ ತಿವಾರಿ (Aditi Tiwari) ಗಿಟ್ಟಿಸಿಕೊಂಡಿದ್ದಾರೆ.

ಈ ಮೊದಲು NIT ಪಾಟ್ನಾ ವಿದ್ಯಾರ್ಥಿ ಪಡೆದ ಅತಿ ಹೆಚ್ಚು ಪ್ಯಾಕೇಜ್ 50-60 ಲಕ್ಷ ರೂ. ಆಗಿತ್ತು. ಆದ್ರೀಗ2022ರ ಪ್ಲೇಸ್‌ಮೆಂಟ್ ಸೀಸನ್, ಕಳೆದ ಐದು ವರ್ಷಗಳ ದಾಖಲೆಗಳನ್ನು ಮುರಿದಿದೆ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ‌ಕಳೆದ ಎರಡು ವರ್ಷಗಳಲ್ಲಿ ಕ್ಯಾಂಪಸ್ ಉದ್ಯೋಗಗಳು ಹೆಚ್ಚಾಗಿ ಸಿಗದೇ,   ಪದವಿ ವಿದ್ಯಾರ್ಥಿಗಳಿಗೆ ಸಾಕಷ್ಟು ಒತ್ತಡ ಸೃಷ್ಟಿಯಾಗಿದ್ದವು. 

BENGALURU UNIVERSITY ಪರೀಕ್ಷೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬೆಂಗಳೂರು ವಿವಿ!

ಇದೀಗ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿರುವಂತೆ, ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಸ್ಥಿತಿಯು ಸಹ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳುತ್ತಿದೆ. ವಿದ್ಯಾರ್ಥಿಗಳಿಗೆ ಮೊದಲಿಗಿಂತ ತಮ್ಮ ಆಯ್ಕೆಯ ಉದ್ಯೋಗಗಳನ್ನು ಪಡೆಯುವ ಉತ್ತಮ ಅವಕಾಶಗಳು ಸಿಗುತ್ತಿವೆ. Adobe, Amazon, Linkedin, Paytm, Oracle ಮತ್ತು ಇತರ ಕಂಪನಿಗಳು NIT ಸಂಸ್ಥೆಯಲ್ಲಿನ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಲ್ಲಿ ಭಾಗವಹಿಸಿದ್ದವು.

ಅದಿತಿ ತಿವಾರಿ (Aditi Tiwari) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ (ECE) ವಿದ್ಯಾರ್ಥಿಯಾಗಿದ್ದು, ಫೇಸ್‌ಬುಕ್‌ನಲ್ಲಿ ಫ್ರಂಟ್ ಎಂಡ್ ಇಂಜಿನಿಯರ್ (Front End Engineer) ಆಗಿ ಕೆಲಸ ಮಾಡಲು ಆಯ್ಕೆಯಾಗಿದ್ದಾರೆ. ಇದನ್ನು ಬಿಹಾರ ಫೌಂಡೇಶನ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದೆ. ಬಿಹಾರ ಫೌಂಡೇಶನ್, ರಾಜ್ಯ ಮತ್ತು ಡಯಾಸ್ಪೊರಾ ನಡುವಿನ ಸಂವಹನವನ್ನು ಸುಲಭಗೊಳಿಸುವ ಬಿಹಾರ ಸರ್ಕಾರದ ಉಪಕ್ರಮವಾಗಿದೆ.  

 "NIT ಪಾಟ್ನಾದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ (ECE) ವಿದ್ಯಾರ್ಥಿನಿ ಅದಿತಿ ತಿವಾರಿ 1.6 ಕೋಟಿ ವಾರ್ಷಿಕ ವೇತನದ ಪ್ಯಾಕೇಜ್‌ನೊಂದಿಗೆ ಫೇಸ್‌ಬುಕ್‌ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ಇದು NIT ಪಾಟ್ನಾದಲ್ಲಿ ವಿದ್ಯಾರ್ಥಿಯೊಬ್ಬರು ಪಡೆದ ಅತ್ಯಧಿಕ ಪ್ಯಾಕೇಜ್ ಆಗಿದೆ." ಎಂದು ಬಿಹಾರ್ ಫೌಂಡೇಶನ್ ಟ್ವೀಟ್ ಮಾಡಿದೆ.

Kannadaprabha Recruitment 2022: ವೃತ್ತಿಪರರಿಗೆ ಕನ್ನಡಪ್ರಭ ದಿನ ಪತ್ರಿಕೆ ಅರ್ಜಿ ಆಹ್ವಾನ

ಕಳೆದ ಐದು ವರ್ಷಗಳಲ್ಲಿ ಅದಿತಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈವರೆಗೂ ವಿದ್ಯಾರ್ಥಿಗೆ ನೀಡಲಾಗಿದ್ದ ಗರಿಷ್ಠ ಪ್ಯಾಕೇಜ್ ಕೇವಲ 50 ರಿಂದ 60 ಲಕ್ಷ.  ಆದ್ರೆ ಇದೀಗ ಅದಿತಿ ಅವರು, ಆ ಎಲ್ಲ ದಾಖಲೆ ಮುರಿದಿದ್ದಾರೆ.ಬರೋಬ್ಬರಿ 1.6 ಕೋಟಿಯ ಪ್ಯಾಕೇಜ್ ಪಡೆದಿದ್ದಾರೆ. ಅಂದಹಾಗೇ  ಅದಿತಿಯ ತಂದೆ ಟಾಟಾ ಸ್ಟೀಲ್ ಉದ್ಯೋಗಿಯಾಗಿದ್ದರೆ, ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ‌ ಆಗಿದ್ದಾರೆ.

ಅದಿತಿಗೆ ಜನವರಿಯಲ್ಲಿ ಆಫರ್ ಲೆಟರ್ ಸಿಕ್ಕಿದೆ. ಆದರೆ ಇತ್ತೀಚೆಗಷ್ಟೇ ತನ್ನ ಉದ್ಯೋಗದ ಬಗ್ಗೆ ಅದಿತಿ ಕಾಲೇಜು ಸಂಸ್ಥೆಗೆ ತಿಳಿಸಿದ್ದಾಳಂತೆ.   "ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ವೃತ್ತಿಜೀವನದ ಬಗ್ಗೆ ಜಾಗೃತರಾಗಿದ್ದಾರೆ" ಎಂದು ಎನ್‌ಐಟಿ ಪಾಟ್ನಾದ ತರಬೇತಿ ಮತ್ತು ನಿಯೋಜನೆ ಅಧಿಕಾರಿ ಡಾ.ಶೈಲೇಶ್ ಎಂ ಪಾಂಡೆ ಹೇಳಿದರು. ಈ ಹಿಂದೆ ಕೆಲವೇ ತಿಂಗಳುಗಳ ಹಿಂದಷ್ಟೇ ಪಾಟ್ನಾ ಹುಡುಗಿ ಸಂಪ್ರೀತಿ ಯಾದವ್ ಕೂಡ ಗೂಗಲ್ ನಲ್ಲಿ 1.11 ಕೋಟಿ ರೂಪಾಯಿ ಪ್ಯಾಕೇಜ್ ಪಡೆದು ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?