ಎಂಬಿಬಿಎಸ್‌ ಕಲಿಕೆಗೆ ಹಣ ಹೊಂದಿಸಲು ಹೊಲದಲ್ಲಿ ದುಡಿಯುತ್ತಿರುವ ಪ್ರತಿಭಾವಂತ!

Published : Dec 11, 2022, 04:18 PM ISTUpdated : Dec 13, 2022, 11:13 AM IST
ಎಂಬಿಬಿಎಸ್‌ ಕಲಿಕೆಗೆ ಹಣ ಹೊಂದಿಸಲು ಹೊಲದಲ್ಲಿ ದುಡಿಯುತ್ತಿರುವ ಪ್ರತಿಭಾವಂತ!

ಸಾರಾಂಶ

*ಒಡಿಶಾ ಬಡ ಪ್ರತಿಭಾವಂತ ವಿದ್ಯಾರ್ಥಿಯ ಕಲಿಕೆಯ ಸಾಹಸಗಾಥೆ ಇದು *ಎಂಬಿಬಿಎಸ್ ಸೀಟು ಸಿಕ್ಕರೂ ಶುಲ್ಕ ಕಟ್ಟಲು ಈ ವಿದ್ಯಾರ್ಥಿಯ ಬಳಿ ಹಣವಿಲ್ಲ *ಶುಲ್ಕ ಭರಿಸಲು ಹೊಲದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿ ಇಪು ಮಲಿಕ್  

ಜೀವನದಲ್ಲಿ ಏನಾದ್ರೂ ಸಾಧಿಸಬೇಕು.. ನಾನು ಹಾಗೇ ಆಗಬೇಕು.. ಹೀಗೇ ಆಗಬೇಕು ಅಂತ ಬಹಳಷ್ಟು ಜನರು ಕನಸು ಕಾಣುತ್ತಾರೆ. ಆದ್ರೆ ಎಲ್ಲರ ಕನಸು ಸಾಕಾರವಾಗಲ್ಲ. ಆದ್ರೆ ಕೆಲವರು ಛಲ ಬಿಡದೇ ಯಾವುದಾದ್ರೂ ಮಾರ್ಗ ಹಿಡಿದು, ಕಷ್ಟ ಪಟ್ಟು ತಮ್ಮ ಕನಸ್ಸನ್ನ ನನಸಾಗಿಸಿಕೊಳ್ಳುತ್ತಾರೆ. ಅದರಲ್ಲೂ ವಿದ್ಯಾಭ್ಯಾಸದ ಹಂತದಲ್ಲಿ ಕನಸ್ಸಿನ ಬೆನ್ನತ್ತಿ ಹೋಗುವವರಿಗೆ ಅತ್ಯಗತ್ಯವಾದ ನೆರವು ಸಿಗದಿದ್ರೆ, ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದು ಕಷ್ಟ ಸಾಧ್ಯ. ಆರ್ಥಿಕ ನೆರವು ಇಲ್ಲದಿದ್ರೆ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲೊಬ್ಬ ವಿದ್ಯಾರ್ಥಿ ತನ್ನ ಕನಸಿನ ವ್ಯಾಸಂಗವನ್ನ ಪೂರೈಸಿಕೊಳ್ಳಲು ಕೃಷಿ ಭೂಮಿಯಲ್ಲಿ ಕೆಲಸ ಮಾಡಿ ಹಣ ಗಳಿಸೋ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.  ಹೌದು, ಒಡಿಶಾ(Odisha) ಎಂಬಿಬಿಎಸ್ ವಿದ್ಯಾರ್ಥಿ (MBBS Student) ತನ್ನ ಅಧ್ಯಯನಕ್ಕೆ ಸಹಾಯವಾಗಲೆಂದು ಕೃಷಿಭೂಮಿಯಲ್ಲಿ  ದುಡಿದು ಹಣ ಗಳಿಸಿದ್ದಾನೆ. ಒಡಿಶಾದ ಕಂಧಮಾಲ್ ಜಿಲ್ಲೆಯ ಎಂಬಿಬಿಎಸ್ ವಿದ್ಯಾರ್ಥಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಲು ಮತ್ತು ತನ್ನ ಕನಸಿಗೆ ರೆಕ್ಕೆಗಳನ್ನು ನೀಡಲು ಸಲುವಾಗಿ ಜಮೀನುಗಳಲ್ಲಿ ಕೆಲಸ ಮಾಡುತ್ತಾನೆ.  ಮೀಡಿಯಾಕಿಯಾ(Mediakia) ಪೊಲೀಸ್ ವ್ಯಾಪ್ತಿಗೆ ಒಳಪಡುವ ಬಗ್ರಾಮಿಲಾ ಗ್ರಾಮದ ಇಫು ಮಲ್ಲಿಕ್(Ifu Mallick), ಸದ್ಯ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಕೊರಾಪುಟ್‌ನ ಸಹೀದ್ ಲಕ್ಷ್ಮಣ್ ನಾಯಕ್ (ಎಸ್‌ಎಲ್‌ಎನ್) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿರುವ ಇಫು ಮಲ್ಲಿಕ್ಗೆ ತಮ್ಮ ಕೋರ್ಸ್‌ನ ವೆಚ್ಚವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  

ಕಾಲೇಜ್‌ಗೆ ಪ್ರವೇಶ ಬೇಕಿದ್ದರೆ 9 ಗಂಟೆ ಎಕ್ಸಾಮ್ ಬರಿಬೇಕಂತೆ!

ಇಫು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಮೆಟ್ರಿಕ್ಯುಲೇಷನ್ ಮತ್ತು ಪ್ಲಸ್ 2 ಪರೀಕ್ಷೆಯಲ್ಲಿ ಪ್ರಥಮ ವಿಭಾಗದಲ್ಲಿ ತೇರ್ಗಡೆಯಾಗಿದ್ದಾರೆ. ಅವರು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ಯಶಸ್ವಿಯಾಗಿ ಉತ್ತೀರ್ಣರಾಗಿ, MBBS ಕೋರ್ಸ್‌ಗೆ ಪ್ರವೇಶ ಪಡೆದರು. ಆದ್ರೆ ಇಫು ಅವರ ಕುಟುಂಬಕ್ಕೆ ಅವರ ಅಧ್ಯಯನದ ವೆಚ್ಚವನ್ನು ಭರಿಸಲು ಸಾಧ್ಯವಾಗಲಿಲ್ಲ. ನಾನು ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯಲು ಯಶಸ್ವಿಯಾಗಿದ್ದರೂ, ಮುಂದಿನ ಐದು ವರ್ಷಗಳವರೆಗೆ ನನ್ನ ಅಧ್ಯಯನದ ಉದ್ದಕ್ಕೂ ನನ್ನ ಕುಟುಂಬವು ಹಾಸ್ಟೆಲ್ ಶುಲ್ಕಗಳು, ಪ್ರವೇಶ ಶುಲ್ಕಗಳು, ಮೆಸ್ ಶುಲ್ಕಗಳನ್ನು ಭರಿಸಲು ಸಾಧ್ಯವಿಲ್ಲ. ನಮ್ಮ ಕುಟುಂಬವು BPL (ಬಡತನ ರೇಖೆಗಿಂತ ಕೆಳಗಿರುವ) ವರ್ಗದ ಅಡಿಯಲ್ಲಿ ಬರುತ್ತದೆ. ನನ್ನ ತಂದೆ-ತಾಯಿಯೂ ವೃದ್ಧರಾಗಿದ್ದು, ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ ಅಂತಾರೆ ಇಫು. 

ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ಪಡೆಯುತ್ತಿದ್ದಂತೆ ಇಫು, ತನ್ನೆಲ್ಲಾ ಖರ್ಚುಗಳನ್ನು ಪೂರೈಸಿಕೊಳ್ಳಲು ಸ್ವಲ್ಪ ಹಣವನ್ನು ಗಳಿಸಲು ನಿರ್ಧರಿಸುತ್ತಾರೆ. ಬಳಿಕ ವಿವಿಧ ಕೆಲಸಗಳನ್ನ ಮಾಡಿ ಹಣ ಗಳಿಸುವ ಪ್ರಯತ್ನ ಮಾಡ್ತಾರೆ. ಹೊಲಗಳಲ್ಲಿ ಕೃಷಿಕರಿಗೆ ನೆರವಾಗುವ ಮೂಲಕ ತನ್ನ ಅಧ್ಯಯನಕ್ಕೆ ಬೇಕಾದ ದುಡ್ಡು ಹೊಂದಿಸಿಕೊಳ್ತಾರೆ. ಭತ್ತದ ಕಟಾವು ವೇಳೆ ತನ್ನ ಕುಟುಂಬಕ್ಕೆ ಸಹಾಯ ಮಾಡುತ್ತಾರೆ. ಜೊತೆಗೆ ತಮ್ಮ ಅಧ್ಯಯನಕ್ಕಾಗಿ ಸ್ವಲ್ಪ ಹಣವನ್ನು ಗಳಿಸುವುದಕ್ಕಾಗಿ ಇತರರ ಜಮೀನುಗಳಲ್ಲೂ ಕೆಲಸ ಮಾಡುತ್ತಾರೆ.   

ನಾನು ಉತ್ತಮ ವೈದ್ಯನಾಗುವ ಕನಸನ್ನು ಪೋಷಿಸುತ್ತಿದ್ದೇನೆ. ಯಾವುದೇ ಸಹಾಯವಿಲ್ಲದೆ ನನ್ನ ಕನಸು ನನಸಾಗುವುದಿಲ್ಲ.  ನಾನು ನನ್ನ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಹಾಯ ಹಸ್ತ ಚಾಚಲು ಎಲ್ಲರಿಗೂ ವಿನಂತಿಸುತ್ತೇನೆ ಅಂತಾರೆ ಇಫು ಮಲ್ಲಿಕ್. ಇಲ್ಲಿಯವರೆಗೆ ನಾವು ಇತರರಿಂದ ಹಣವನ್ನು ಸಾಲ ಪಡೆದು ಅವರ ಅಧ್ಯಯನದ ವೆಚ್ಚವನ್ನು ಹೇಗಾದರೂ ನಿಭಾಯಿಸುತ್ತಿದ್ದೆವು. ಈಗ ನಾವು ದುಡಿಮೆ ಮಾಡಿ ಅವರ ಅಧ್ಯಯನಕ್ಕೆ ಹಣ ಸಂಪಾದಿಸಲು ಸಾಧ್ಯವಿಲ್ಲ. ಪಿಂಚಣಿ ಹಣದಿಂದ ಹೇಗೋ ಸಂಸಾರ ನಡೆಸುತ್ತಿದ್ದೇವೆ. ಈಗ ಅವನು ತನ್ನ ಅಧ್ಯಯನವನ್ನು ಮುಂದುವರಿಸಲು ಎಲ್ಲರ ಸಹಾಯದ ಅಗತ್ಯವಿದೆ’ ಅಂತಾರೆ ಇಫುವಿನ ತಾಯಿ ದೇಹುರಿ ಮಲ್ಲಿಕ್.

ಸೈನಿಕರು, ಪೊಲೀಸರಿಗೆ ವಿಶೇಷ ಹೆಲ್ಮೆಟ್ ತಯಾರಿಸಿದ ಗೋರಖಪುರ ಐಟಿಎಂ ವಿದ್ಯಾರ್ಥಿಗಳು!

ಇಫು ಅವರ ಪೋಷಕರು ಈಗ ಅವರ ಅಧ್ಯಯನಕ್ಕೆ ಹಣ ಸಂಪಾದಿಸಿ ಕೊಡಲು ಸಾಧ್ಯವಾಗ್ತಿಲ್ಲ. ಅವರಿಗೆ ಸಾಕಷ್ಟು ವಯಸ್ಸಾಗಿದ್ದಾರೆ. ಇಫು ನಮ್ಮೊಂದಿಗೆ ಭತ್ತ ಕಡಿಯುತ್ತಾರೆ. ಅವರ ಅಧ್ಯಯನಕ್ಕೆ ಹಣ ಹೊಂದಿಸಲು ಇತರ ಕೆಲಸಗಳನ್ನು ತೆಗೆದುಕೊಳ್ಳುತ್ತಾರೆ. ಅವನಿಗೆ ಆರ್ಥಿಕ ಸಹಾಯವನ್ನು ವಿಸ್ತರಿಸಿದರೆ, ಅವನು ತನ್ನ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಬಹುದು ಅನ್ನೋದು ಇಫು ತಾಯಿಯ ಆಶಯ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ