Educational Tour: ಪ್ರವಾಸಕ್ಕೆ ಹೋದ 4 ನೇ ತರಗತಿ ವಿದ್ಯಾರ್ಥಿನಿ ನೀರು ಪಾಲು!

By Ravi Janekal  |  First Published Dec 11, 2022, 1:24 PM IST

ಶಾಲಾ ಶೈಕ್ಷಣಿಕ ಪ್ರವಾಸ ಹೋಗಿದ್ದ 4 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ ಡ್ಯಾಂ ಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ‌. 


ಕಲಬುರಗಿ (ಡಿ.11) : ಶಾಲಾ ಶೈಕ್ಷಣಿಕ ಪ್ರವಾಸ ಹೋಗಿದ್ದ 4 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ ಡ್ಯಾಂ ಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ‌. 

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಡ್ಯಾಂ(Chandrampalli dam)ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಲಬುರಗಿ(Kalaburagi) ನಗರದ ಸಂತೋಷ ಕಾಲೋನಿಯಲ್ಲಿನ ಕಲಾ ವಿದ್ಯಾಮಂದಿರ ಖಾಸಗಿ ಶಾಲೆ(Vidyamandira private school)ಯಲ್ಲಿ ಓದುತ್ತಿರುವ 4 ನೇ ತರಗತಿಯ ಭಾವನಾ ಪಾಟೀಲ್(Bhavana patil) (10) ಮೃತ ದುರ್ದೈವಿ. 

Tap to resize

Latest Videos

undefined

Koppal News: 5 ಸಾವಿರ ಮಕ್ಕಳಿಗೆ ಉಚಿತ ಪ್ರವಾಸ ಭಾಗ್ಯ!

ಶಾಲಾ ಶಿಕ್ಷಕರು, ಒಂದರಿಂದ ಐದನೇ ತರಗತಿವರೆಗಿನ 20 ಕ್ಕೂ ಹೆಚ್ಚು ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಶಿಕ್ಷಕರು ಒಂದೆಡೆ ಫೋಟೋ ತಗೊಳ್ಳುತ್ತಾ ನಿಂತ ಸಂದರ್ಭದಲ್ಲಿ ಮಗು ಕಾಲು ಜಾರಿ ಬಿದ್ದಿದೆ ಎನ್ನಲಾಗಿದೆ. ಡ್ಯಾಂಗೆ ಕೆಲ ಹೊತ್ತಿನ ನಂತರ ಗಮನಿಸಲಾಗಿದೆ. ನಂತರ ಅಗ್ನಿ ಶಾಮಕದಳ ಮತ್ತು ಸ್ಥಳಿಯ ಮೀನುಗಾರರು ತೀವ್ರ ಶೋಧ ನಡೆಸಿದ ನಂತರ ಬಾಲಕಿಯ ಶವ ಪತ್ತೆಯಾಗಿದೆ. 

ಶೈಕ್ಷಣಿಕ ಪ್ರವಾಸದ ವೇಳೆ ಪುಟ್ಟ ಪುಟ್ಟ ಮಕ್ಕಳ ಕಡೆ ಗಮನ ಕೊಡದೇ ಇರುವ ಶಿಕ್ಷಕರ ನಿರ್ಲಕ್ಷತನೇ ದುರಂತಕ್ಕೆ ಕಾರಣ ಎಂದು ಪೋಷಕರು ದೂರಿದ್ದಾರೆ. 

Karnataka Darshan Tour: ಎಸ್ಸಿ, ಎಸ್ಟಿ ಮಕ್ಕಳಿಗೆ ಉಚಿತ ‘ಕರ್ನಾಟಕ ದರ್ಶನ’ ಪ್ರವಾಸ

ಬಾಲಕಿಯ ನಿಧನದಿಂದಾಗಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕ್ಷೇತ್ರ ಶಿಕ್ಷಣಾಧಿಕಾರಿಯ ಅನುಮತಿ ಪಡೆಯದೇ ಮತ್ತು ನಿಯಮ ಪಾಲಿಸದೇ ಮಕ್ಕಳನ್ನು ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ಶಿಕ್ಷಣ ಸಂಸ್ಥೆ ಮತ್ತು ನಿರ್ಲಕ್ಷತೆ ಮಾಡಿ ಮಗುವಿನ ಜೀವ ಹಾನಿಗೆ ಕಾರಣರಾದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.  ಈ ಪ್ರಕರಣ ಕುರಿತು ಚಿಂಚೋಳಿ ಪೊಲೀಸ್ ಠಡಣೆಯಲ್ಲಿ ದೂರು ದಾಖಲಾಗಿದೆ.

click me!