ವೈದ್ಯಕೀಯ ಕೋರ್ಸುಗಳ ಶುಲ್ಕ ಏರಿಕೆ..? ಸರ್ಕಾರದ ಮುಂದೆ ಪ್ರಸ್ತಾವನೆ

By Suvarna NewsFirst Published Nov 7, 2021, 12:02 PM IST
Highlights
  • ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಮಾಡಲು ಮೆಡಿಕಲ್ ಕಾಲೇಜುಗಳ ಒಕ್ಕೂಟ  ಪ್ರಸ್ತಾವನೆ 
  • ಶೇ.30% ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮೆಡಿಕಲ್‌ ಕಾಲೇಜುಗಳ ಒಕ್ಕೂಟ ಪ್ರಸ್ತಾವನೆ

ಬೆಂಗಳೂರು (ನ.07):  ವೈದ್ಯಕೀಯ ಕೋರ್ಸ್ ಗಳ (Medical education) ಶುಲ್ಕ ಹೆಚ್ಚಳ ಮಾಡಲು ಮೆಡಿಕಲ್ ಕಾಲೇಜುಗಳ (Medical College) ಒಕ್ಕೂಟ ರಾಜ್ಯ  ಸರ್ಕಾರಕ್ಕೆ (Karnataka Govt) ಪ್ರಸ್ತಾವನೆ ಸಲ್ಲಿಸಿದೆ.  

ಶೇ.30% ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮೆಡಿಕಲ್‌ ಕಾಲೇಜುಗಳ ಒಕ್ಕೂಟ ಸರ್ಕಾರದ ಮುಂದೆ ಮನವಿ ಮಾಡಿವೆ. ಕಳೆದ ವರ್ಷ ಕೋವಿಡ್ (Covid) ನಡುವೆಯೂ ಶೇ.15 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು.  ಅದರಂತೆ ಈ ಬಾರಿ ಅದರ ದುಪ್ಪಟ್ಟು ಶುಲ್ಕ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

 ವೈದ್ಯಕೀಯ ಮತ್ತು ದಂತ ವೈದ್ಯಕೀಯ (Dental ) ಎರಡು ಕೋರ್ಸುಗಳ ಫೀಸ್ ಹೆಚ್ಚಳ ಮಾಡಲು ಮನವಿ ಸಲ್ಲಿಸಲಾಗಿದ್ದು, ಇದರಿಂದ ಸರ್ಕಾರ ಖಾಸಗಿ ಮೆಡಿಕಲ್ ಕಾಲೇಜುಗಳ ಒತ್ತಡಕ್ಕೆ ಮಣಿಯುತ್ತಾ..? ಮಣಿದಲ್ಲಿ ಬರೋಬ್ಬರಿ ಶೇ.30ರಷ್ಟು ಅಧಿಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ. 

ನಾಳೆ ಖಾಸಗಿ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗಳ ಜತೆ ಸರ್ಕಾರ ಸಭೆ ನಡೆಸಲಿದ್ದು  ಈ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್ (Sudhakar) ಪಾಲ್ಗೊಂಡು ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. 

ನಾಳೆ ನಡೆಯುವ ಸಭೆಯಲ್ಲಿ ಖಾಸಗಿ ಕಾಲೇಜುಗಳ (College) ಒಕ್ಕೂಟ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಅಂತಿಮ ನಿರ್ಣಯ ಹೊರ ಬೀಳಲಿದೆ. ಶುಲ್ಕ ಏರಿಕೆಯ ಭವಿಷ್ಯವು ಸಭೆಯ ಮೂಲಕ  ನಿರ್ಧಾರವಾಗಲಿದೆ. 

ಈ ಶುಲ್ಕದ ಸಮಸ್ಯೆ ಬಗೆಹರಿಸುವ ಸಲುವಾಗಿ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು 2012-13ನೇ ಸಾಲಿನಲ್ಲಿ ಸರ್ಕಾರದೊಂದಿಗೆ ಸಮನ್ವಯದ ಒಪ್ಪಂದ ಮಾಡಿಕೊಂಡಿತ್ತು. ಇದರ ಅನ್ವಯ ಪ್ರತಿ ವರ್ಷ ಶೇ.15 ರಿಂದ 25 ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅವಕಾಶ ನೀಡಿತ್ತು. 

ಆದರೆ ಖಾಸಗಿ ಕಾಲೇಜುಗಳ ಒಕ್ಕೂಡ ಸಮನ್ವಯ ಒಪ್ಪಂದಕ್ಕೆ ಮೀರಿ ಶೇ.30 ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಕಳೆದ ವರ್ಷ ಅತೀವ ಕೋವಿಡ್‌ ಸಂಕಷ್ಟದ ನಡುವೆಯು ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಶೇ.15 ರಷ್ಟು ಹೆಚ್ಚಳ ಮಾಡಲಾಗಿತ್ತು. 

ಇದೀಗ ಈ ವರ್ಷ ಶೇ.30 ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ದುಂಬಾಲು ಬಿದ್ದಿದ್ದು, ಖಾಸಗಿ ಮೆಡಿಕಲ್ ಕಾಲೇಜುಗಳು ಶುಲ್ಕ ಹೆಚ್ಚಳಕ್ಕೆ ನೀಡುತ್ತಿರುವುದಕ್ಕೆ ವಿವಿಧ ಕಾರಣಗಳನ್ನು ನೀಡುತ್ತಿದೆ.

 ಕಾರಣಗಳೇನು..?

ಕಾಲೇಜುಗಳ ನಿರ್ವಹಣೆ ದುಬಾರಿಯಾಗಿದೆ ಎನ್ನುವ ಕಾರಣವನ್ನು ಸರ್ಕಾರದ ಮುಂದೆ ಇಡುತ್ತಿವೆ. ಅಲ್ಲದೇ ಕೊರೊನಾದಂಥ ಸಂದರ್ಭದಲ್ಲಿ ಸರ್ಕಾರದ ಮಾನದಂಡಗಳ ಅನ್ವಯ ಸೇವೆ ಒದಗಿಸುವುದು ಸವಾಲಾಗಿದ್ದು ಈ ನಿಟ್ಟಿನಲ್ಲಿ ಶುಲ್ಕ ಏರಿಕೆ ಮಾಡುವುದು ಅನಿವಾರ್ಯ ಎಂದು ಹೇಳಿವೆ.  ಅಲ್ಲದೇ ಗುಣಮಟ್ಟದ ಶಿಕ್ಷಕರ ನೇಮಕ ಮತ್ತು ಪ್ರಯೋಗಾಲಯ  ನಿರ್ಮಾಣ ಮಾಡುವ ಅಗತ್ಯವಿದ್ದು ಇದಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಹಣಕಾಸಿನ ಅವಶ್ಯಕತೆ ಇದೆ ಎಂದು ಹೇಳಿವೆ. 

ಇನ್ನು ವೈದ್ಯಕೀಯ ವ್ಯವಸ್ಥೆ ನಿರ್ವಹಣೆಗೆ ಹೆಚ್ಚು ಖರ್ಚು ಬರುತ್ತಿದೆ. ಹಾಗಾಗಿ ಶೇ.30ರಷ್ಟು ಶುಲ್ಕ ಹೆಚ್ಚಳ ಅನಿವಾರ್ಯ ಎಂದು ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಹೇಳಿವೆ. ಇನ್ನು ಶೇ.10 ರಿಂದ 15 ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸಾಧ್ಯತೆ ಇದ್ದು, ಇದರಿಂದ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಇನ್ನಷ್ಟು ಅನಾನುಕೂಲವಾಗಲಿದೆ. 

  • ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಸಾಧ್ಯತೆ
  • ಶೇ.30% ಶುಲ್ಕ ಹೆಚ್ಚಳಕ್ಕೆ ಮೆಡಿಕಲ್‌ ಕಾಲೇಜುಗಳ ಪ್ರಸ್ತಾವನೆ
  • ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಮೆಡಿಕಲ್‌ ಕಾಲೇಜುಗಳ ಒಕ್ಕೂಟ 
  • ಕಳೆದ ವರ್ಷ ಕೋವಿಡ್ ನಡುವೆಯೂ ಶೇ.15 ರಷ್ಟು ಶುಲ್ಕ ಹೆಚ್ಚಳ
  • ಈ ವರ್ಷವೂ ಹೆಚ್ಚಾಗುತ್ತಾ ವೈದ್ಯಕೀಯ & ದಂತ ವೈದ್ಯಕೀಯ ಫೀಸ್..?
  • ಖಾಸಗಿ ಮೆಡಿಕಲ್ ಕಾಲೇಜುಗಳ ಒತ್ತಡಕ್ಕೆ ಮಣಿಯುತ್ತಾ ಸರ್ಕಾರ..?
  • ನಾಳೆ ಖಾಸಗಿ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗಳ ಜತೆ ಸಭೆ
  • ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ನಡೆಯಲಿರುವ ಸಭೆ
  • ನಾಳೆಯೇ ನಿರ್ಧಾರವಾಗಲಿದೆ ಶುಲ್ಕ ಏರಿಕೆಯ ಭವಿಷ್ಯ
click me!