ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ ಕಂಪ್ಯೂಟರ್‌

By Kannadaprabha News  |  First Published Nov 6, 2021, 6:20 AM IST

*  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇನ್ಫೋಸಿಸ್‌ ನಡುವೆ ಒಡಂಬಡಿಕೆ
*  ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್‌ ಪೂರೈಕೆ 
*  ಕಂಪ್ಯೂಟರ್‌ಗಳಿಗೆ ಬ್ಯಾಕಪ್‌ಗಾಗಿ ಯುಪಿಎಸ್‌ ಒದಗಿಸಲು ಸರ್ಕಾರ ಗಮನ ಹರಿಸಬೇಕಾಗಿದೆ


ಕಾರವಾರ(ನ.06): ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇನ್ಫೋಸಿಸ್‌(Infosys)  ಸಂಸ್ಥೆಯ ನಡುವೆ ಏರ್ಪಟ್ಟಿರುವ ಒಡಂಬಡಿಕೆಯನ್ವಯ ಜಿಲ್ಲೆಯ 4 ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಒಂದು ಎಂಜಿನಿಯರಿಂಗ್‌ ಕಾಲೇಜುಗ​ಳಿಗೆ ಇನ್ಫೋಸಿಸ್‌ ಸಂಸ್ಥೆಯಿಂದ 782 ಕಂಪ್ಯೂಟರ್‌ಗಳನ್ನು(Computers) ನೀಡಲಾಗುತ್ತಿದೆ.

ವಿದ್ಯಾರ್ಥಿಗಳಿಗೆ(Students) ತರಬೇತಿ(Training) ನೀಡಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇನ್ಫೋಸಿಸ್‌ ಸಂಸ್ಥೆಯ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಅದರಂತೆ ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಇನ್ಫೋಸಿಸ್‌ ಸಂಸ್ಥೆ ಉಚಿತವಾಗಿ ಡಿ-ಬಾಂಡೆಡ್‌ ಕಂಪ್ಯೂಟರ್‌ಗಳನ್ನು ನೀಡಲಿದೆ. ಕಾರವಾರದ(Karwar) ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ 215, ಜೋಯಿಡಾ ಕಾಲೇಜಿಗೆ 110, ಮುಂಡಗೋಡಕ್ಕೆ 119, ಸಿದ್ದಾಪುರಕ್ಕೆ 124 ಹಾಗೂ ಕಾರವಾರ ತಾಲೂಕಿನ ಮಾಜಾಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ 214 ಕಂಪ್ಯೂಟರ್‌ಗಳನ್ನು ಒದಗಿಸಲಾಗುತ್ತಿದೆ.

Tap to resize

Latest Videos

ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್‌ ದೇಣಿಗೆ

ಇವುಗಳನ್ನು ಸರಬರಾಜುದಾರರಿಂದ ಪಡೆದು ದಾಸ್ತಾನು ಮಾಡಲು ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜನ್ನು ನೋಡಲ್‌ ಕಾಲೇಜನ್ನಾಗಿ ಮಾಡಲಾಗಿದ್ದು, ಇದೇ ಕಾಲೇಜಿನ ಪ್ರಾಚಾರ್ಯ ವಾಸುದೇವ ಗೌಡ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ಫೋಸಿಸ್‌ ಸಂಸ್ಥೆಯಿಂದ ಪಡೆಯುವ ಪ್ರತಿ ಕಂಪ್ಯೂಟರ್‌ಗಳಿಗೆ ರೋಟರಿ ಸಂಸ್ಥೆಯ ಪ್ರತಿನಿಧಿಗಳು ಉಚಿತವಾಗಿ ವಿಂಡೋಸ್‌-ಒಎಸ್‌ ಅನ್ನು ಅಳವಡಿಸಿದ ನಂತರ, ನೋಡಲ್‌ ಸಂಸ್ಥೆಯ ಪ್ರಾಚಾರ್ಯರು ಸಂಬಂಧಿಸಿದ ಇತರ ಸಂಸ್ಥೆಗಳಿಗೆ ಮೀಸಲಾದ ಕಂಪ್ಯೂಟರ್‌ಗಳನ್ನು ವಿತರಿಸಲು ಸೂಚಿಸಲಾಗಿದೆ. ಬೆಂಗಳೂರಿನಿಂದ ಕಂಪ್ಯೂಟರ್‌ಗಳನ್ನು ರವಾನಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಂಪ್ಯೂಟರ್‌ಗಳು ಕಾರವಾರಕ್ಕೆ ಬರಲಿವೆ.

ವಿದ್ಯುತ್‌ ಸಮಸ್ಯೆ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ(Government) ಇನ್ಫೋಸಿಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಂಪ್ಯೂಟರ್‌ಗಳನ್ನು ಪೂರೈಸುತ್ತಿರುವುದು ಉತ್ತಮ ಸಂಗತಿ. ಆದರೆ ಉತ್ತರ ಕನ್ನಡದಲ್ಲಿ(Uttara Kannada) ವಿದ್ಯುತ್‌ ವ್ಯತ್ಯಯ ಉಂಟಾಗುವುದು ಹೆಚ್ಚಾಗಿದ್ದು, ಮಳೆ- ಗಾಳಿ ಸಮಯದಲ್ಲಂತೂ ಮರ-ರೆಂಬೆಗಳು ಬಿದ್ದು ವಿದ್ಯುತ್‌ ಲೈನ್‌ಗಳು ತುಂಡಾಗಿ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆ ಉಂಟಾಗುತ್ತದೆ. ಹೀಗಾಗಿ ಒದಗಿಸಲಾಗುತ್ತಿರುವ ಕಂಪ್ಯೂಟರ್‌ಗಳಿಗೆ ಬ್ಯಾಕಪ್‌ಗಾಗಿ ಯುಪಿಎಸ್‌ಗಳನ್ನೂ(UPS) ಒದಗಿಸಲು ಸರ್ಕಾರ ಗಮನ ಹರಿಸಬೇಕಾಗಿದೆ.

ಕಂಪ್ಯೂಟರ್‌ ಇದ್ದರೂ ಬಳಸಲಾಗದೆ ಅಥವಾ ವಿದ್ಯುತ್‌ ಸರಬರಾಜು ಅಸಮರ್ಪಕಗೊಂಡು ಕಂಪ್ಯೂಟರ್‌ಗಳಿಗೆ ಹಾನಿಯುಂಟಾಗುವ ಸಾಧ್ಯತೆಯೂ ಇದೆ. ಕಂಪ್ಯೂಟರ್‌ಗಳ ನಿರ್ವಹಣೆ ಹೇಗೆ? ಯಾವುದಾದರೂ ಸಮಸ್ಯೆ ಉಂಟಾದಲ್ಲಿ ದುರಸ್ತಿ ಹೊಣೆ ಯಾರದ್ದು? ಎಂಬ ಬಗ್ಗೆಯೂ ಸರ್ಕಾರ ಸ್ಪಷ್ಟಪಡಿಸಬೇಕಿದೆ.

ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್‌ ದೇಣಿಗೆ

ಇನ್ಫೋಸಿಸ್‌ ಡಿಜಿಟಲ್‌ ವೇದಿಕೆಯ ಕೋರ್ಸುಗಳು, ಕಲಿಕಾ ಸಂಪನ್ಮೂಲಗಳನ್ನು ಉನ್ನತ ಶಿಕ್ಷಣದ ವಿದ್ಯಾರ್ಥಿಗಳು(Students) ಮತ್ತು ಬೋಧಕರಿಗೆ ಉಚಿತವಾಗಿ ಕಲಿಕೆಗೆ ಒದಗಿಸುವುದು, ಬೋಧಕರಿಗೆ ತರಬೇತಿ, 15 ಸಾವಿರ ಕಂಪ್ಯೂಟರ್‌(Computer) ದೇಣಿಗೆಯೊಂದಿಗೆ ಕಾಲೇಜುಗಳಲ್ಲಿ ಡಿಜಿಟಲ್‌ ಮೂಲಸೌಕರ್ಯ ಸದೃಢಗೊಳಿಸಲು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಇಸ್ಫೋಸಿಸ್‌(Infosys) ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಇಲಾಖೆಯ ‘ಹೆಲ್ಪ್‌ ಎಜುಕೇಷನ್‌’(Help Education) ಕಾರ್ಯಕ್ರಮದಡಿಯ ಒಡಂಬಡಿಕೆಯಿಂದ ರಾಜ್ಯದ(Karnataka) ಐದು ಲಕ್ಷ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಪ್ರತಿ ವರ್ಷ ಉಪಯೋಗವಾಗಲಿದೆ. ಈ ಒಪ್ಪಂದದಿಂದ(Agreement) ಇನ್ಫೋಸಿಸ್‌ ಕಂಪನಿಯು 35 ಕೋಟಿ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್‌ ಸ್ಟ್ರಿಂಗ್‌ ಬೋರ್ಡ್‌ ಡಿಜಿಟಲ್‌(Digital) ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸುಗಳು(Course) ಮತ್ತು ಆಡಿಯೋ(Audio), ವಿಡಿಯೊ ಆನಿಮೇಷನ್‌(Video Animation) ಸೇರಿ 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ.

ವೇದಿಕೆಯು ವರ್ಚುಯಲ್‌ ಪ್ರಯೋಗಾಲಯಗಳು, ಗೇಮಿಫಿಕೇಷನ್‌ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್‌ ಮೂಲ ಸೌಕರ್ಯವನ್ನು ಸದೃಢಗೊಳಿಸಲಿದೆ ಎಂದು ವಿವರಿಸಿದರು. ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ(Training) ಇನ್ಫೋಸಿಸ್‌ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಕ್ಯಾಂಪಸ್‌ನಲ್ಲಿ(Mysuru) ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ. 
 

click me!